ವಿಜಯಪುರದಲ್ಲಿ ಸಂಭ್ರಮದ ಗಣೇಶ ಚತುರ್ಥಿ

Chethan
1 Min Read

ಪಬ್ಲಿಕ್ ಅಲರ್ಟ್

ವಿಜಯಪುರ: ನಗರದಾದ್ಯಂತ ಗೌರಿ, ಗಣೇಶ ಚತುರ್ಥಿಯನ್ನು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಣೆ ಮಾಡಿದರು.

ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಪುರಸಭೆ, ಗ್ರಾಮ ಪಂಚಾಯಿತಿಗಳು, ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಇಲಾಖೆಗಳಿಂದ  ಅನುಮತಿ ಪಡೆದುಕೊಂಡು, ತಾತ್ಕಾಲಿಕವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ, ವಿಶೇಷವಾಗಿ ಪೂಜೆ ಸಲ್ಲಿಸಿದರು. 

ಗ್ರಾಮೀಣ ಭಾಗದಲ್ಲಿ ತೆಂಗಿನಕಾಯಿ ಹಬ್ಬವೆಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಈ ಹಬ್ಬದಂದು ಮಹಿಳೆಯರು ತಮ್ಮ ಊರುಗಳಲ್ಲಿರುವ ಅರಳೀಕಟ್ಟೆಗಳ ಬಳಿಗೆ ತೆರಳಿ ನಾಗರಕಲ್ಲುಗಳಿಗೆ ಹಸಿದಾರಗಳನ್ನು ಸುತ್ತಿ, ಹಾಲೆರೆದು ಪೂಜೆ ಸಲ್ಲಿಸಿದರು.

ತವರು ಮನೆಗಳಿಗೆ ಬಂದಿದ್ದ ಹೆಣ್ಣು ಮಕ್ಕಳಿಗೆ ಭಾಗೀನ ಕೊಟ್ಟು, ಮಡಿಲು ತುಂಬಿಸಿ ಗಂಡನ ಮನೆಗಳಿಗೆ ಸಾಗ ಕಳುಹಿಸುತ್ತಿದ್ದ ದೃಶ್ಯಗಳು ಗೌರಿ, ಗಣೇಶ ಹಬ್ಬದ ಸಂಪ್ರದಾಯ ಮುಂದುವರೆಯುತ್ತಿರುವುದಕ್ಕೆ ಕಳೆಕಟ್ಟಿದಂತಿತ್ತು.

 ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪನೆಗೂ ಮುನ್ನಾ ಗೊರವ ಕುಣಿತ, ಡೊಳ್ಳುಕುಣಿತ, ತಮಟೆ ವಾದನಗಳೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ಮೂರ್ತಿಗಳನ್ನು ತಂದು ಪ್ರತಿಷ್ಟಾಪನೆ ಮಾಡಿದರು.

 ಬೆಳಗಿನಿಂದಲೇ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 

Share This Article
Leave a Comment