ಪಬ್ಲಿಕ್ ಅಲರ್ಟ್
ಮೈಸೂರು: ಛಾಯೆ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಿಂದ ಅ. ೨೩, ೨೪ರಂದು ಸಂಜೆ ೬.೩೦ಕ್ಕೆ ಕಿರು ರಂಗಮಂದಿರದಲ್ಲಿ “ಹೊಸ್ಬ್ರು ಮಾಡ್ತಾವ್ರೆ” ಹೆಸರಿನ ನೂತನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಿರ್ದೇಶಕಿ ರಾಜಲಕ್ಷ್ಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ನಾಟಕವು ರಂಗಭೂಮಿಯ ಕಲಿಕೆಯನ್ನು ಮುಖ್ಯ ಧ್ಯೇಯಾವಗಿಸಿಕೊಂಡು ಕಟ್ಟಿದ ರಂಗಕೃತಿಯಾಗಿದೆ. ಇಲ್ಲಿ ರಂಗ ಪರಿಕರಗಳ ಬಳಸುವಿಕೆ, ಸುಧಾರಿತ ತಂತ್ರಗಳ ಅನ್ವೇಷಣೆ ಹಾಗೂ ರಂಗದ ಆಟಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಇAದು ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ವೇಳೆ ಪೋಷಕರು ಸಹಾ ಮಕ್ಕಳ ಜೊತೆಗೆ ಹೇಗೆ ವರ್ತಿಸಬೇಕು, ಸೈಬರ್ ಕ್ರೆöÊಂಗಳಲ್ಲಿ ಮಕ್ಕಳೂ ಹೇಗೆ ಸಂತ್ರಸ್ತರಾಗುತ್ತಾರೆ ಎಂಬಿವೇ ಮೊದಲಾದ ಈಚಿನ ದಿನಗಳ ವಿದ್ಯಮಾನಗಳ ವಿಷಯ ಈ ನಾಟಕ ಆಧರಿಸಿದೆ ಎಂದರು.
೨೪ರAದು ಸಂಜೆ ೬.೩೦ಕ್ಕೆ ಸಮಾರೋಪ ಹಮ್ಮಿಕೊಳ್ಳಲಾಗಿದೆ. ರಂಗ ವಿನ್ಯಾಸಕಾರ ಎಚ್.ಕೆ.ದ್ವಾರಕನಾಥ್, ಶೀಲಾಕುಮಾರಿ, ರಂಗಕರ್ಮಿ, ಎಚ್. ಜನಾರ್ಧನ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಈ ನಾಟಕಕ್ಕೆ ೧೦೦ ಪ್ರವೇಶ ದರ ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊ. ೯೯೮೦೬೦೧೨೦೨, ೭೮೯೨೫೮೨೦೪೫ ಸಂಪರ್ಕಿಸಬಹುದು ಎಂದರು.
ಪೋಸ್ಟರ್ ಬಿಡುಗಡೆಗೊಳಿಸಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಆಧುನಿಕತೆಯ ಜೊತೆಗೇ ಮಕ್ಕಳ ಆಲೋಚನೆ ಬದಲಾಗುತ್ತಿದೆ. ಅವರ ನಡವಳಿಕೆಯೂ ಮಾರ್ಪಾಡಾಗುತ್ತಿದೆ. ಹೀಗಿರುವಾಗ ಅವರ ವಯಸ್ಸಿಗೆ ತಕ್ಕ ರೀತಿ ಅಭಿರುಚಿ ಬದಲಾಯಿಸುವುದು ಮುಖ್ಯವಾಗಿದೆ. ಇಂದು ಯಾವುದೇ ಸವಾಲನ್ನು ಬೇಕಾದರೂ ಎದುರಿಸಬಹುದು. ಆದರೆ ಮೊಬೈಲ್ ಇಲ್ಲದೇ ಮಕ್ಕಳನ್ನು ಬೆಳೆಸುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ವಿಭಿನ್ನ ಕಥಾ ವಸ್ಥುವಿನ ಈ ನಾಟಕ ಶಾಲಾ ಕಾಲೇಜುಗಳಲ್ಲಿಯೂ ಪ್ರದರ್ಶಿತವಾಗಲಿ ಎಂದು ಸಲಹೆ ನೀಡಿದರು. ಸಂಸ್ಥೆಯ ಭವ್ಯ ಎಂ.ಜೆ, ಹರಿಣಾಕ್ಷಿ ರಾವ್, ಸಿದ್ದೇಶ್, ಶರತ್ ಇದ್ದರು.
