ನವದೆಹಲಿ: ಕೆಲ ದಿನಗಳಿಂದ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ವಿರೋಧಿ ನೀತಿಗಳಿಂದಲೇ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಅದು, ಭಾರತ – ಪಾಕಿಸ್ತಾನ ಸಂಘರ್ಷವೇ ಇರಬಹುದು ಅಥವಾ ರಷ್ಯಾ ಜೊತೆಗಿನ ಭಾರತದ ಸ್ನೇಹವಿರಬಹುದು. ಇಲ್ಲ, ಭಾರತದ ವಸ್ತುಗಳ ಮೇಲಿನ ತೆರಿಗೆ ಏರಿಕೆಯೇ ಇರಬಹುದು; ಹೌದು, ಟ್ರಂಪೊನೊಮಿಕ್ಸ್ (Tromponomics) ಎಂಬ ಈ ಹೊಸ ಅಲೆಯಿಂದ ಭಾರತವನ್ನು ಪಾರು ಮಾಡಲು ಪ್ರಧಾನಿ ಮೋದಿ ಸರ್ಕಾರವು, ತನ್ನದೇ ಆದ ಹೊಸ ದಾರಿಯನ್ನ ಕಂಡುಹಿಡಿದಿದೆ. ಅದುವೇ, ಲಾಲ್-ಬಾಲ್-ಪಾಲ್ ಸೂತ್ರ (Lal-Bal-Pal formula); ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:
ಲಾಲ್-ಬಾಲ್-ಪಾಲ್ ಸೂತ್ರದ ಬೇರುಗಳು ಸುಮಾರು 125 ವರ್ಷಗಳ ಹಿಂದೆ ನಡೆದ ಸ್ವದೇಶಿ ಚಳುವಳಿಗೆ ಸಂಬಂಧಿಸಿವೆ. ಹೌದು, ಭಾರತದ ಸ್ವಾತಂತ್ರ್ಯ ಚಳುವಳಿಯ ನೇತೃತ್ವವನ್ನ ವಹಿಸಿದ್ದ ಲಾಲ್-ಬಾಲ್-ಪಾಲ್ ಅಂದ್ರೆ, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್ ಮತ್ತು ಲಾಲಾ ಲಜಪತ್ ರಾಯ್ ಅವರ ಸೂತ್ರವನ್ನೇ ಮೋದಿ ಸರ್ಕಾರವು ಇದೀಗ ಅಳವಡಿಸಿಕೊಳ್ಳಲು ಮುಂದಾಗಿದೆ. ಹಾಗಾದ್ರೆ ಏನಿದು ಲಾಲ್-ಬಾಲ್-ಪಾಲ್ ಸೂತ್ರ; ಅದನ್ನೇ ಇದೀಗ ಪ್ರಧಾನಿ ಮೋದಿಯವರು, ಅಮೆರಿಕ ಅಧ್ಯಕ್ಷರ ಟ್ರಂಪೊನೊಮಿಕ್ಸ್‌ಗೆ ಉತ್ತರವಾಗಿ ಕಂಡುಕೊಂಡಿದ್ದಾರೆ. ಹಾಗಾದ್ರೆ ಏನಿದು ಟ್ರಂಪೊನೊಮಿಕ್ಸ್..?
ಏನಿದು ಟ್ರಂಪೊನೊಮಿಕ್ಸ್?
ಟ್ರಂಪೊನೊಮಿಕ್ಸ್ ಎಂದರೆ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿ. ಮುಖ್ಯವಾಗಿ ಇದೇವು: ‘ಅಮೆರಿಕಾ ಮೊದಲು’ ಧ್ಯೇಯದೊಂದಿಗೆ, ಅಮೆರಿಕದ ವಸ್ತುಗಳ ಮೇಲಿನ ತೆರಿಗೆ ಕಡಿತ, ವಿದೇಶೀ ವಸ್ತುಗಳಿಗೆ ಹೆಚ್ಚಿನ ತೆರಿಗೆ, ಸ್ಥಳೀಯ ಉದ್ಯೋಗ ರಕ್ಷಣೆಯಾಗಿದೆ. ಹಾಗಾಗಿ, ಟ್ರಂಪ್ ಭಾರತದ ವಸ್ತುಗಳ ಮೇಲೆ, ಶೇ.25 ರಷ್ಟು ಸುಂಕ ವಿಧಿಸಿದರು. ಅದಕ್ಕೆ ಭಾರತದ ಪ್ರಧಾನಿ ಮೌನವಾಗಿಯೇ ಉತ್ತರ ಕೊಟ್ಟಿದ್ದಾರೆ. ಅದುವೇ, ಲಾಲ್-ಬಾಲ್-ಪಾಲ್ ಸೂತ್ರ;
ಏನಿದು ಲಾಲ್-ಬಾಲ್-ಪಾಲ್ ಸೂತ್ರ?
ಬಾಲ್-ಪಾಲ್-ಲಾಲ್ ಎಂಬ ತ್ರಿಮೂರ್ತಿಗಳು, ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟ ದೇಶದ ಕೋಟ್ಯಂತರ ಜನರಿಗೆ ಸ್ವದೇಶಿ ಮಂತ್ರವನ್ನು ನೀಡಿದರು, ಇದು ಆ ಸಂದರ್ಭದಲ್ಲಿ ಬ್ರಿಟಿಷರ ಅಡಿಪಾಯವನ್ನೇ ಅಲುಗಾಡಿಸಿತು. ತದನಂತರದ ವರ್ಷಗಳಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸ್ವದೇಶಿಯನ್ನೇ ಅತಿದೊಡ್ಡ ಅಸ್ತ್ರವನ್ನಾಗಿ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.