ಪಬ್ಲಿಕ್ ಅಲರ್ಟ್
ಮೈಸೂರು: ಈ ಬಾರಿ ಮಹಿಷಾ ದಸರಾವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಪೂನಾ ಒಪ್ಪಂದ ದಿನವಾದ ಸೆ.೨೪ರಂದು ಬೆಳಗ್ಗೆ ೧೦.೩೦ಕ್ಕೆ ಟೌನ್‌ಹಾಲ್‌ನ ಆವರಣದಲ್ಲಿ ಮಹಿಷಾ ಧಮ್ಮೋತ್ಸವವನ್ನು ಆಚರಿಸುತ್ತೇವೆ ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಟೌನ್ ಹಾಲ್ ಆವರಣದಿಂದ ಚಾಮುಂಡಿಬೆಟ್ಟಕ್ಕೆ ಬೈಕ್ ರ್‍ಯಾಲಿ ಹೊರಟು ಬೆಟ್ಟದ ಮೇಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ನಂತರ ಮರಳಿ ಟೌನ್ ಹಾಲ್ ಆವರಣಕ್ಕೆ ಬಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪೂನಾ ಒಪ್ಪಂದ ಮತ್ತು ಮಹಿಷಾಸುರನ ವಿಚಾರಗಳ ಬಗ್ಗೆ ವೇದಿಕೆ ಕಾರ್ಯಕ್ರಮ ಮನೆಯಲಿದ್ದು, ಸುಮಾರು ೫ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ದಸರಾ ಮಹೋತ್ಸವ ಮತ್ತು ಮಹಿಷಾ ದಸರಾ ನಡುವೇ ಯಾವುದೇ ಗೊಂದಲಗಳು ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ದಸರಾ ಉದ್ಘಾಟನೆಯಾದ ನಂತರ ಮಹಿಷಾ ದಸರಾ ಮಾಡಲಾಗುತ್ತಿದೆ. ಎರಡು ಕಾರ್ಯಕ್ರಮಗಳಿಂದ ಸಾಮರಸ್ಯ ಮೂಡಬೇಕು ಹೊರದು ಕದಡುವ ಕೆಲಸ ಮಾಡಬಾರದು. ದಸರಾ ಕಾರ್ಯಕ್ರಮಗಳಿಗೆ ಯಾವುದೇ ರೀತಿ ಅಡ್ಡಿಯಾಗಬಾರದು ಎಂಬುಉ ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಮಹಿಷಾ ದಸರಾ ಆಚರಿಸಲು ಚಾಮುಂಡಿಬೆಟ್ಟದ ಮೇಲೆ ಪೊಲೀಸ್ ಇಲಾಖೆ ಅವರು ನಿಷೇದಾಜ್ಞೆ ಜಾರಿ ಮಾಡಬಾರದು. ಇದ್ದರಿಂದ ದೇಶ, ವಿದೇಶದಿಂದ ಬರುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಮೈಸೂರಿನ ಸೊಬಗನ್ನು ಸವಿಯಲು ಬರುವ ಲಕ್ಷಾಂತರ ಪ್ರವಾಸಿಗರಿಗೆ ನಿರಾಸೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಷೇದಾಜ್ಞೆ ಜಾರಿ ಮಾಡಬೇಡಿ. ಮಹಿಷಾ ದಸರಾಗೆ ನಿಷೇದಾಜ್ಞೆ ಜಾರಿ ಮಾಡಿದರೆ, ದಸರಾ ಮಹೋತ್ಸವಕ್ಕೂ ಜಾರಿ ಮಾಡಬೇಕು ಎಂದು ಎಚ್ಚರಿಸಿದರು.
ಅಂದು ಟೌನ್‌ಹಾಲ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿಗಳಾದ ವಿಠಲ್ ವಿಗ್ಗಾನ್, ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್, ಸಿದ್ದಸ್ವಾಮಿ ಮತ್ತಿತರರು ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ಭಗವಾನ್, ಸೋಮಯ್ಯ ಮಲೆಯೂರು, ಶಿವಣ್ಣ, ಪುಟ್ಟರಾಜು, ವಿಷಕಂಠ, ವಿಶ್ವನಾಥ್ ಉಪಸ್ಥಿತರಿದ್ದರು.
