ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಇದುವರೆಗೆ 9 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸಿರಾಜ್ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು ಅಗ್ರಸ್ಥಾನಕ್ಕೇರಿದ್ದಾರೆ.
ಈಗ ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ಮೊಹಮ್ಮದ್ ಸಿರಾಜ್ ಅವರನ್ನು ಹೊಗಳಿದ್ದಾರೆ. ಸಿರಾಜ್ ಅವರನ್ನು ದೇಶಕ್ಕಾಗಿ ಬದುಕುವ ನಿಜವಾದ ಯೋಧ ಎಂದು ರೂಟ್ ಬಣ್ಣಿಸಿದ್ದಾರೆ. ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ರೂಟ್ 105 ರನ್ ಗಳಿಸಿದರು. ಈ ಸಮಯದಲ್ಲಿ ಅವರು ಹ್ಯಾರಿ ಬ್ರೂಕ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 195 ರನ್ ಗಳ ಜೊತೆಯಾಟವಾಡಿದ್ದರು.
ಮೊಹಮ್ಮದ್ ಸಿರಾಜ್ ನಿಜವಾದ ಯೋಧ. ಸಿರಾಜ್ ನಿಮ್ಮ ತಂಡದಲ್ಲಿ ನೀವು ಬಯಸುವ ರೀತಿಯ ಆಟಗಾರ. ಅವರು ಭಾರತಕ್ಕಾಗಿ ಎಲ್ಲವನ್ನೂ ನೀಡುತ್ತಾರೆ. ಅವರು ಕ್ರಿಕೆಟ್ ಅನ್ನು ಅನುಸರಿಸುವ ರೀತಿ, ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಕೆಲವೊಮ್ಮೆ ಅವರಲ್ಲಿ ನಕಲಿ ಕೋಪವಿರುತ್ತದೆ. ಅದನ್ನು ನಾನು ಸ್ಪಷ್ಟವಾಗಿ ನೋಡಬಹುದು. ನಿಜ ಹೇಳಬೇಕೆಂದರೆ, ಅವರು ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ವಿಕೆಟ್‌ಗಳನ್ನು ಪಡೆದಿರುವುದು ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ.
ಸಿರಾಜ್ ವಿರುದ್ಧ ಆಡುವುದನ್ನು ನಾನು ಆನಂದಿಸುತ್ತೇನೆ. ಅವರ ಮುಖದಲ್ಲಿ ಯಾವಾಗಲೂ ದೊಡ್ಡ ನಗು ಇರುತ್ತದೆ. ಅವರು ತಮ್ಮ ತಂಡಕ್ಕಾಗಿ ಎಲ್ಲವನ್ನೂ ನೀಡುತ್ತಾರೆ. ಆದ್ದರಿಂದ ಒಬ್ಬ ಅಭಿಮಾನಿಯಾಗಿ ನೀವು ಅದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಯಾವುದೇ ಯುವ ಆಟಗಾರನಿಗೆ ಉತ್ತಮ ಮಾದರಿ ಎಂದು ಜೋ ರೂಟ್ ಹೇಳಿದರು.
ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 104 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದು ಪರಿಣಾಮ ಭಾರತ ತಂಡ ಇಂಗ್ಲೆಂಡ್ ವಿರುದ್ಧ 6 ರನ್ ಗಳಿಂದ ಗೆಲುವು ಸಾಧಿಸಲು ನೆರವಾಯಿತು.