ಪಬ್ಲಿಕ್ ಅಲರ್ಟ್
ಮೈಸೂರು: ಕರ್ನಾಟಕ ವಸ್ತು ಪ್ರದರ್ಶನದ ಅಧ್ಯಕ್ಷ ಅಯೂಬ್ ಖಾನ್ ವಸ್ತು ಪ್ರದರ್ಶನವನ್ನು ಮುಸ್ಲಿಂಮೀಕರಣ ಮಾಡಿದ್ದಾರೆ ಎಂಬ ಆರೋಪ ಸುಳ್ಳು ಎಂದು ನಗರ ವಕ್ತಾರ ಎಸ್.ರಾಜೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಆಯೂಬ್ ಖಾನ್ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಮಿರ್ಲೆ ಶ್ರೀನಿವಾಸಗೌಡ ಅವಧಿಯಲ್ಲಿ ರೂಪಾಯಿ ಎಂಟು ಕೋಟಿಗೆ ವಸ್ತು ಪ್ರದರ್ಶನದ ಗುತ್ತಿಗೆ ಹರಾಜಾಗಿತ್ತು. ಆಯೂಬ್ ಖಾನ್ ಅವರು ಕಳೆದ ವರ್ಷ ಅಧ್ಯಕ್ಷ ನೇಮಕಗೊಂಡ ನಂತರ 24ನೇ ಅವಧಿಯಲ್ಲಿ 10ಕೋಟಿಗೆ ಹರಾಜಾಗಿತ್ತು. 2025ನೇಯ ಸಾಲಿನಲ್ಲಿ 11ಕೋಟಿ 57 ಲಕ್ಷಕ್ಕೆ ಹರಾಜಾಗಿದೆ ಎಂದರು.
ಪಾರ್ಕಿಂಗ್ ಗೇಟ್ ನಡೆಸುವವರು ಬಿಜೆಪಿಯ ಮಾಜಿ ನಗರ ಪಾಲಿಕೆ ಸದಸ್ಯರಾಗಿರುತ್ತಾರೆ. 9ಕೋಟಿ 50ಲಕ್ಷಕ್ಕೆ ಬಾಬು ಎಂಬುವರು ‘ಎ’ ಬ್ಲಾಕ್ ಗುತ್ತಿಗೆ ಪಡೆದಿದ್ದಾರೆ. ಇವರು ಬಿ.ಜೆ.ಪಿ ಕಾರ್ಯಕರ್ತರಾಗಿದ್ದಾರೆ. ಅಭಿವೃದ್ಧಿ ಆಗಿರುವುದರಿಂದ ಈ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಹಣಕ್ಕೆ ಹರಾಜಾಗಿದೆ. ಈ ಮೂಲಕ ಒಂದು ಕೋಟಿ 57 ಲಕ್ಷ ಹೆಚ್ಚಿನ ಆದಾಯ ಬಂದಿದೆ. ಗುತ್ತಿಗೆದಾರ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದು, ಸ್ಟಾಲ್‌ಗಳು, ಮಳಿಗೆಗಳು, ಅಮಿಸ್‌ಮೆಂಟ್ ಪಾರ್ಕ್, ಊಟ, ತಿಂಡಿ ಅಂಗಡಿಗಳು ಎಲ್ಲಾ ಸೇರಿದೆ ಎಂದು ತಿಳಿಸಿದರು.
ಮ್ಯೂಸಿಕಲ್ ಗುತ್ತಿಗೆದಾರ ನಾಯ್ತು ಎಂಬುವವರು ಹಿಂದೂ ಸಮುದಾಯದವರಾಗಿದ್ದಾರೆ. ಎಲ್ಲಾ ಗುತ್ತಿಗೆದಾರರು ಟೆಂಡರ್ ಮೂಲಕ ಪಡೆದಿದ್ದಾರೆ. ವಸ್ತು ಪ್ರದರ್ಶನದ ಪ್ರಾಧಿಕಾರದ ಕಾರ್ಯಚಟುವಟಿಕೆಗಳು ಈ ರೀತಿ ಇರುವಾಗ ಮುಸ್ಲಿಂಮೀಕರಣ ಹೇಗೆ ಆಗುತ್ತದೆ. ಆಯೂಬ್ ಖಾನ್ ರವರ ಸಂಬಂಧಿಕರಿಗೆ ಯಾವುದೇ ಗುತ್ತಿಗೆಗಳನ್ನು ನೀಡಿರುವುದಿಲ್ಲ. ಹಾಗೇನಾದರು ನೀಡಿದ್ದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಪತ್ರಿಕಾ ಗೋಷ್ಠಿಯಲ್ಲಿ ಕುರುಬಾರಹಳ್ಳಿ ಪ್ರಕಾಶ್,ಎಸ್.ಎ.ರಹೀಮ್ ಇನ್ನಿತರರು ಭಾಗವಹಿಸಿದ್ದರು
