ಹಾಸನಾಂಬ ಮಹೋತ್ಸವ: 25.59 ಕೋಟಿ ದಾಖಲೆ ಆದಾಯ

Chethan
1 Min Read

ಪಬ್ಲಿಕ್ ಅಲರ್ಟ್


ಹಾಸನ: ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.9 ರಿಂದ ಅ.23 ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.
1000ರೂ, 300ರೂ ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ ಆದಾಯ ಬಂದಿರುತ್ತದೆ. ಹುಂಡಿ ಎಣಿಕೆಯಲ್ಲಿ 3,68,12,275 ರೂಪಾಯಿ ಬಂದಿರುತ್ತದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58 ಗ್ರಾಂ. 400 ಮಿಲಿ ಹುಂಡಿಗೆ ಭಕ್ತರು ಹಾಕಿದ್ದಾರೆ ಎಂದು ತಿಳಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ನಡೆದಿದ್ದು, 15,17,785 ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.

ಮೈಕ್ ಹಿಡಿದಿದ್ದ ಸಚಿವ: ಇದೇ ಮೊದಲ ಬಾರಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಹಾಸನಾಂಬ ದರ್ಶನಕ್ಕೆ ಸುಗಮ‌ ವ್ಯವಸ್ಥೆ ಕಲ್ಪಿಸಿದ್ದರು. ಕೊನೆ ದಿನಗಳಲ್ಲಿ ಜನರ ಜಂಗುಳಿ ನಿಯಂತ್ರಿಸಲು ಸ್ವತಃ ತಾವೇ ಮೈಕ್ ಹಿಡಿದು ಸಾಲುಗಟ್ಟಿ ಸಮಾಧಾನದಿಂದ ಬರುವಂತೆ ಭಕ್ತರಿಗೆ ಹೇಳುವ ಮೂಲಕ ನೆರೆದಿದ್ದವರ ಗಮನ ಸೆಳೆದಿದ್ದರು.‌ಸಚಿವರ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗಿತ್ತು.

Share This Article
Leave a Comment