ಮೈಸೂರು: ಕಳೆದ ಕೆಲ ದಿನಗಳಿಂದ ಭರ್ಜರಿ ಮಳೆ (Rain) ಸುರಿಸಿದ್ದ, ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಅಪಾಯ (Danger) ಮಟ್ಟದಲ್ಲಿ ಹರಿಯುತ್ತಿದ್ದ ನದಿಗಳು (Rivers) ಸ್ವಲ್ಪ ವಿಶ್ರಮಿಸುತ್ತಿವೆ. ಹಾಗಾದ್ರೆ ಹಳೇ ಮೈಸೂರು (Mysuru) ಭಾಗದ ಜಲಾಶಯಗಳ ಇಂದಿನ ಮಟ್ಟ ಹಾಗೂ ಒಳ ಹರಿವು ಹೊರ ಹರಿವು ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಕೆ.ಆರ್.ಎಸ್ ನೀರಿನ ಮಟ್ಟ ಎಷ್ಟಿದೆ?
ಹೌದು ರಾಜ್ಯದ ರಾಜಧಾನಿ ಹಾಗೂ 4 5 ಜಿಲ್ಲೆಗಳ ಜೀವನಾಡಿ ಕೆ.ಆರ್.ಎಸ್ ಕಳೆದ ಒಂದು ತಿಂಗಳನಿಂದ ಭರ್ತಿಯಾಗಿಯೇ ಇದೆ. ಕೊಡುಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯ ತುಂಬಿ ತುಳುಕುತ್ತಿದೆ. 124.80 ಅಡಿಗಳ ಸಾಮರ್ಥ್ಯದ ಜಲಾಶಯದಲ್ಲಿ ಇಂದು 123.35 ಅಡಿ ನೀರು ಸಂಗ್ರಹವಾಗಿದೆ ಜಲಾಶಯಕ್ಕೆ 13915 ಕ್ಯೂಸೆಕ್ ನೀರು ಹರಿದು ಬರುತ್ತಿದ್ದಾರೆ. ಜಲಾಶಯದಿಂದ 5699 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.