ವಿಧಾನಸೌಧದಲ್ಲಿ ರಕ್ಷಾಬಂಧನ ಸಂಭ್ರಮ

admin
1 Min Read

ಪಬ್ಲಿಕ್ ಅಲರ್ಟ್ ವರದಿ

ವರದಿ : ವಿ.ಲತಾ.
ಬೆಂಗಳೂರು: ಸದಾ ರಾಜಕೀಯ ಜಂಜಾಟದಲ್ಲಿರುವ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರೆಲ್ಲರೂ ಪಕ್ಷ ಬೇಧ ಮರೆತು ರಕ್ಷಾಬಂಧನ ಕಟ್ಟಿಸಿಕೊಂಡು ಸಂತಸ ಪಡುವ ಮೂಲಕ ವಿಧಾನ ಸೌಧದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತು.
ಹೌದು ಇಂತಹದೊಂದು ವಿಶೇಷ ಪ್ರಯತ್ನಕ್ಕೆ ಬ್ರಹ್ಮ ಕುಮಾರಿ ಸಮಾಜ ಮುಂದಾಯಿತು.

ಮೊದಲಿಗೆ ಗೃಹ ಸಚಿವ ಪರಮೇಶ್ವರ್,

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್,

ಪಶುಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್,

ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಛಲವಾದಿ ನಾರಾಯಣಸ್ವಾಮಿ, ಶರವಣ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ತನ್ವೀರ್ ಸೇಠ್, ಕೆ.ಹರೀಶ್ ಗೌಡ, ರವಿಶಂಕರ್ ಚಿಕ್ಕಮಾದು ಸೇರಿದಂತೆ ಅನೇಕರು ರಾಕಿ ಕಟ್ಟಿಸಿಕೊಂಡು ಸಂಭ್ರಮಿಸಿದರು.
ಇದೇ ವೇಳೆ ಬ್ರಹ್ಮಕುಮಾರಿಯ ಸಮಾಜದ ಮಾತನಾಡಿ ಸ್ನೇಹ, ಭಾವೈಕ್ಯತೆ ಸಂಕೇತ ರಕ್ಷಾಬಂಧನವಾಗಿದ್ದು, ಅದನ್ನು ಈ ಮೂಲಕ ಆಚರಿಸಿರುವುದು ಖುಷಿ ತರಿಸಿದೆ ಎಂದರು‌.

Share This Article
Leave a Comment