ಪಬ್ಲಿಕ್ ಅಲರ್ಟ್
ವರದಿ : ಎಂಪಿ ರಾಕೇಶ್
ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯನ್ನು ನಡೆಸಲಿದ್ದು, ಗಣತಿದಾರರು ಮನೆ ಮನೆಗೆ ಬಂದಾಗ ಒಕ್ಕಲಿಗ ಜನಾಂಗದವರು ತಪ್ಪದೇ ‘ಒಕ್ಕಲಿಗ’ ನಮೂದಿಸಬೇಕು ಎಂದು ರಾಜ್ಯ ಒಕ್ಕಲಿಗ ಸಂಘ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ. ಕೆಂಚೇಗೌಡ,
ಜಾತಿ ಗಣತಿ ನಡೆಯುವ ಸಂದರ್ಭದಲ್ಲಿ ನಮ್ಮ ಸಮುದಾಯದವರು ತಮ್ಮ ತಮ್ಮ ಮನೆಯವರ ವಿವರವನ್ನು ನಿಖರವಾಗಿ ಪೂರ್ಣವಾಗಿ ನೀಡಬೇಕು. ಶಿಕ್ಷಣ, ಉದ್ಯೋಗ, ಆಸ್ತಿ, ಆರ್ಥಿಕ ಪರಿಸ್ಥಿತಿ ಮೊದಲಾದ ಮಾಹಿತಿಗಳನ್ನು ವಾಸ್ತವಿಕವಾಗಿ ಎಷ್ಟಿರುತ್ತದೋ ಅಷ್ಟನ್ನು ಮಾತ್ರ ನೀಡಬೇಕು. ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಮಾಡಬಾರದು, ನಮ್ಮ ಜನಾಂಗದ ಮುಖಂಡರು ತಮ್ಮ ತಮ್ಮ ಗ್ರಾಮಗಳ, ತಾಲ್ಲೂಕು, ಪಟ್ಟಣ, ಬಡಾವಣೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಸರಿಯಾದ ಸಮಂಜಸವಾದ ಮಾಹಿತಿ ನೀಡುವಂತೆ ಗಮನಹರಿಸಬೇಕು ಎಂದರು.
ರಾಜ್ಯ ಒಕ್ಕಲಿಗ ಸಂಘದ ವತಿಯಿಂದ ಸಂಘದ ಎಲ್ಲಾ ಸದಸ್ಯರಿಗೆ ಹಾಗೂ ಜನಾಂಗದವರಿಗೆ ವಿವಿಧ ಮಾಧ್ಯಮಗಳ ಮೂಲಕ ಜಾತಿ ಗಣತಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಒಕ್ಕಲಿಗ ಜನಾಂಗದ ಸಂಘ-ಸಂಸ್ಥೆಗಳು ಸಹ ಗಣತಿಯ ಬಗ್ಗೆ ಜಾಗೃತಿ ಮೂಡಿಸಬೇಕು,’ಈಗಾಗಲೇ ಪ್ರಕಟಿಸಿರುವಂತೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ
ಸಮೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಡಾ.ಅಂಜನಪ್ಪ, ಮಾಜಿ ಉಪ ಮೇಯರ್ ಶ್ರೀನಿವಾಸ್, ಅಶೋಕ್ ತಮ್ಮಾಜಿ ಮತ್ತಿತರರ ನಿರ್ದೇಶಕರು ಭಾಗವಹಿಸಿದ್ದರು.
ಜಾತಿ ಸಮೀಕ್ಷೆ “ಒಕ್ಕಲಿಗ” ಎಂದು ಬರೆಸಿ ಒಕ್ಕಲಿಗ ಸಂಘ ಮನವಿ

Leave a Comment
Leave a Comment