ವರದಿ : ವಿ ಲತಾ.
ಬೆಂಗಳೂರು: ಹಸಿರು ನಾಡು ಶ್ರೀಗಂಧ ರೈತ ಉತ್ಪಾದಕರ ಕಂಪನಿ ಮತ್ತು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ “ಮನೆ ಬಾಗಿಲಿಗೆ ಶ್ರೀ ಗಂಧ ಶ್ರೀ ಸಾಮಾನ್ಯನಿಗೆ ಶ್ರೀ ಗಂಧ” ಶ್ರೀ ಗಂಧ ಉತ್ಪನ್ನಗಳ ಮಾರಾಟದ ಸಮಾರೋಪ ಸಮಾರಂಭ ಲಾಲ್ ಭಾಗ್ ನ ಪ್ರದರ್ಶನ ಮಳಿಗೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಗಂಧ ಉತ್ಪನ್ನಗಳನ್ನು ಶ್ರೀ ಗಂಧ ವಿಜ್ಞಾನಿ ಅನಂತ ಪದ್ಮನಾಭ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು 50ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶ್ರೀ ಗಂಧ ಬೆಳೆಯಲಾಗುತ್ತದೆ.ಈ ಹಿಂದೆ ಫಂಗಸ್ ಕಾಯಿಲೆಯಿಂದ ಶ್ರೀ ಗಂಧ ಗಿಡಗಳು ರೋಗಕ್ಕೆ ತುತ್ತಾಗಿ ನಾಶವಾಗುತ್ತಿದ್ದವು ಪ್ರಪ್ರಥಮವಾಗಿ ಈ ಕಾಯಿಲೆಯನ್ನು ಪತ್ತೆ ಹೆಚ್ಚಿ ಶ್ರೀ ಗಂಧ ಬೆಳೆಗೆ ಉತ್ತೇಜನ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಸುಮಾರು ಎಪ್ಪತ್ತು ಎಕರೆ ಪ್ರದೇಶದಲ್ಲಿ ತಾವು ಶ್ರೀ ಗಂಧ ಬೆಳೆದು ಪ್ರಸಿದ್ದಿಯಾಗಿರುವುದಾಗಿ ತಿಳಿಸಿದರು.
ಶ್ರೀ ಗಂಧ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎನ್. ವಿಶುಕುಮಾರ್ ಮಾತನಾಡಿ, ಪ್ರತಿಯೊಬ್ಬರು ಶ್ರೀ ಗಂಧ ಉತ್ಪನ್ನಗಳನ್ನು ಕೊಳ್ಳುವಂತಾಗಲು ಉಳ್ಳವರು ಕೊಳ್ಳಲಿ ಉಳ್ಳುವವರು ಉಳಿಯಲಿ ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರದ ಹಸಿರು ನಾಡು ಶ್ರೀಗಂಧ ರೈತ ಉತ್ಪಾದಕರ ಕಂಪನಿಯ ಟಿ.ಎಂ.ವೆಂಕಟೇಶ ಗೌಡ,ಉಪಾಧ್ಯಕ್ಷ ಜಿ.ವೆಂಕಟಪ್ಪ, ಬೆಳೆಗಾರರ ಸಂಘದ ಉಪಾಧ್ಯಕ್ಷ ಯು.ಶರಣಪ್ಪ,ಪ್ರಧಾನ ಕಾರ್ಯದರ್ಶಿ ಛಾಯ,ಶ್ರೀ ಗಂಧ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎಂ.ವಿಜಯ್ ಕುಮಾರ್,ಸ್ವಾಬಿಮಾನಿ ಬಳಗದ ರಾಜ್ಯಾಧ್ಯಕ್ಷ ಸಿ.ಕೃಷ್ಣೇ ಗೌಡ ಮತ್ತಿತರರು ಭಾಗವಹಿಸಿದ್ದರು.
ಮನೆ ಬಾಗಿಲಿಗೆ ಶ್ರೀ ಗಂಧ ಅಭಿಯಾನಕ್ಕೆ ಚಾಲನೆ.
ಪಬ್ಲಿಕ್‌ಅಲರ್ಟ್

Leave a Comment
Leave a Comment