ಮೈಸೂರು: ಚಿತ್ರದುರ್ಗದಲ್ಲಿ ೧೭ ವರ್ಷದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಸಮಾಜದಲ್ಲಿ ಹೆಣ್ಣಿನ ಮೇಲೆ ಶೋಷಣೆ, ದೌರ್ಜನ್ಯ ಪ್ರತಿ ನಿತ್ಯ ನಡೆಯುತ್ತಲೇ ಇದೆ. ಇದಕ್ಕೆ ಮತ್ತೊಂದು ಸೇರ್ಪಡೆ ಚಿತ್ರದುರ್ಗದ ಘಟನೆ. ಆ.೧೯ರಂದು ಚಿತ್ರದುರ್ಗದಲ್ಲಿ ವರ್ಷಿತಾ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ಅತ್ಯಂತ ಅಮಾನುಷವಾದುದು. ಯುವತಿಯನ್ನು ಪ್ರೀತಿಸಿದ ಯುವಕನೇ ಈ ಕೃತ್ಯ ಎಸಗಿದ್ದಾನೆ. ಕೂಡಲೇ ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗಂಧದ ಗುಡಿ ಫೌಂಡೇಶನ್ ರಾಜ್ಯಾಧ್ಯಕ್ಷ ಅರ್ಯನ್ ಗಂಧದ ಗುಡಿ, ಉಪಾಧ್ಯಕ್ಷ ಮನೋಹರ್ ಗೌಡ, ಪದಾಧಿಕಾರಿಗಳಾದ ಮೇಗನಗೌಡ, ಪೃಥ್ವಿರಾಜ್, ಯಶೋಧ.ಆರ್, ಮಹದೇವ್ ಶೆಟ್ಟಿ, ವಿಲಿಯಂ ವಿನೋದ್, ಮಧು ಮಾಲತಿ, ಚೇತನ್ ಶೆಟ್ಟಿ, ಕವಿತಾ ಸಿಂಗ್, ರಾಘವೇಂದ್ರ, ಅಭಿಲಾಷ್, ಮಹೇಶ್ ಬೋವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿತ್ರದುರ್ಗದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Leave a Comment
Leave a Comment