ಮೈಸೂರು: ನಗರದ ದಟ್ಟಗಳ್ಳಿ – ನಿವೇದಿತಾ ನಗರ ರಿಂಗ್ ರಸ್ತೆಯಲ್ಲಿ ನೂತನವಾಗಿ ಆರ್ ಕೆ ಟ್ರೀ ಹೌಸ್ ಕೆಫೆ ಇಂದಿನಿಂದ ಕಾರ್ಯಾರಂಭಗೊಂಡಿದೆ.
ರಿಂಗ್ ರಸ್ತೆಯ ರಾಯಲ್ ಓಕ್ ಶೋರೂಮ್ ಎದುರುಗಡೆ ಪ್ರಾರಂಭವಾಗಿರುವ ಕೆಫೆ ಗೆ ಟೇಪ್ ಕತ್ತರಿಸುವ ಮೂಲಕ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಈ ವೇಳೆ ಮಾತಾಡಿದ ಅವರು, ಆರ್ ಕೆ ಟ್ರೀ ಕೆಫೆ ಹೌಸ್ ನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಈ ರೀತಿ ಕೆಫೆಗಳು ಪ್ರಾರಂಭವಾಗುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಒಳ್ಳೆ ಥೀಮ್ ಇಟ್ಟುಕೊಂಡು ಮಾಡಿದ್ದಾರೆ. ಇವರಿಗೆ ಎಲ್ಲರ ಪ್ರೋತ್ಸಾಹ ಸಿಗಬೇಕು. ಕೆಫೆ ಮಾಲೀಕರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.
ಮೈಸೂರಿನ ನಿವಾಸಿ ಯುವ ಉದ್ಯಮಿ ಹಾಗೂ ಬಿಜೆಪಿ ಯುವ ಮುಖಂಡರು ಆಗಿರುವ ಎಂ.ಜೆ. ರಾಘವೇಂದ್ರ ಮಾಲೀಕತ್ವದ ಆರ್ ಕೆ ಟ್ರೀ ಹೌಸ್ ಕೆಫೆ & ಸಿನಿಮಾಸ್ ಇದಾಗಿದ್ದು, ದಣಿದು ಬಂದ ಗ್ರಾಹಕರಿಗೆ ಕಡಿಮೆ ಉತ್ತಮ ಸೇವೆ ಒದಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಪ್ರಾರಂಭೋತ್ಸವದ ಪ್ರಯುಕ್ತ ನೀಡಲಾಗುತ್ತಿದೆ ಭರ್ಜರಿ ಆಫರ್ ರಿಯಾಯಿತಿ, ಒಂದು ಫಿಜ್ಜಾ ಮತ್ತು ಬಿರಿಯಾನಿ ಕೊಂಡರೆ ಮತ್ತೊಂದು ಪಿಜ್ಜಾ ಮತ್ತು ಬಿರಿಯಾನಿ ಉಚಿತವಾಗಿ ನೀಡುವ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಬರ್ತ್ ಡೇ ಸೆಲೆಬ್ರೇಷನ್ ಮತ್ತು ಮತ್ತು ಕುಟುಂಬದೊಂದಿಗೆ ಕಾಲ ಕಳೆಯಲು ಒಳ್ಳೆ ವಾತಾವರಣ ನಿರ್ಮಿಸಿದ್ದೇವೆ ಎಂದರು.



ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಯುವ ಉದ್ಯಮಿಗಳು ಆದ ರಾಘವೇಂದ್ರ ಅವರ ಕನಸಿನ ಕೆಫೆಯನ್ನ ನಮ್ಮ ಸಂಸದರ ಜೊತೆ ನಾವು ಉದ್ಘಾಟನೆ ಮಾಡಿದ್ದೇವೆ. ಒಳ್ಳೆಯ ವಾತಾವರಣವಿದೆ ಮೈಸೂರಿನ ನಾಗರಿಕರು ಒಮ್ಮೆ ಭೇಟಿ ಕೊಟ್ಟು ಉತ್ಸಾಹಿ ಯುವಕರನ್ನು ಪ್ರೋತ್ಸಾಹಿಸಿ ಎಂದರು. ಈ ವೇಳೆ ಮಾಲೀಕರಾದ ಎಂ.ಜೆ. ರಾಘವೇಂದ್ರ, ಎಂ.ಎಸ್.ಶ್ರೀಕಲಾ, ಗೋಪಾಲ, ಬಾಲಸುಬ್ರಹ್ಮಣ್ಯ, ಅಕ್ಷಿತ್, ಲೋಹಿತ್, ರಂಗಸ್ವಾಮಿ, ಜಬೀರ್ ಪಾಷಾ ಸೇರಿ ಹಲವರು ಉಪಸ್ಥಿತರಿದ್ದರು.