ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಹಳೆಯ ನ್ಯಾಯಾಲಯದ ಕಟ್ಟಡದಲ್ಲಿರುವ ಮೈಸೂರು ವಕೀಲರ ಸಂಘದ ಕಚೇರಿಯಲ್ಲಿ ಶಾಸ್ತ್ರೋಕ್ತವಾಗಿ ಗಣೇಶ ಪ್ರತಿಷ್ಠಾಪನೆ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಹಲವು ವರ್ಷಗಳಿಂದ ಸಂಘದ ಕಚೇರಿಯಲ್ಲಿ ಗೌರಿ ಗಣೇಶನನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಿ 9 ದಿನಗಳ ಕಾಲ ಪೂಜಿಸಲಾಗುತ್ತಿದೆ. ನಿತ್ಯ 2 ಸಾವಿರ ಜನರಿಗೆ ಪ್ರಸಾದ ವಿನಿಯೋಗವನ್ನು ಕೂಡ ಮಾಡಲಾಗುತ್ತಿದೆ. ದೇವರೆಂಬುದು ಎಲ್ಲರ ನಂಬಿಕೆಯಾಗಿದೆ. ನಮ್ಮ ಹಿಂದೂ ಧರ್ಮದ ಆಚರಣೆಯ ಪ್ರತೀಕ ಈ ಹಬ್ಬವಾಗಿದೆ ಎಂದರು. ಸಂಘದ ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಚರಣ್ ರಾಜ್, ಮಹಿಳಾ ಜಂಟಿ ಕಾರ್ಯದರ್ಶಿ ವಿನೋದ, ಖಜಾಂಚಿ ಭರತ್ ಇನ್ನಿತರರು ಉಪಸ್ಥಿತರಿದ್ದರು.