ಎಐಯುಟಿಯುಸಿಯಿಂದ ದೆಹಲಿ ಹೋರಾಟಕ್ಕೆ ಮೈಸೂರಿಗರು ಸಜ್ಜು

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ಪರ ನೀತಿಗಳ ವಿರುದ್ಧ ಎಐಯುಟಿಯುಸಿ ವತಿಯಿಂದ ಸೆ.೪ ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಕಾರ್ಮಿಕರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಪ್ರತಿಭಟನೆಯಲ್ಲಿ ಸುಮಾರು ಸಾವಿರ ಮಂದಿ ಕಾರ್ಮಿಕರು, ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಹಾಗೂ ಮೈಸೂರು ನಗರದಿಂದಲೂ ಒಟ್ಟು ೨೪೪ ಮಂದಿ ಭಾಗವಹಿಸಲಿದ್ದಾರೆಂದರು.
ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ೪ ಕಾರ್ಮಿಕ ಕೋಡ್‌ಗಳನ್ನು ತಕ್ಷಣ ರದ್ದುಗೊಳಿಸಬೇಉ, ವಿದ್ಯುತ್ ತಿದ್ದುಪಡಿ ಮಸೂದೆ ೨೦೨೩ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ರದ್ದುಗೊಳಿಸಬೇಖು, ಕೆಲಸದ ಅವಧಿ ದಿನಕ್ಕೆ ೮ ಗಂಟೆ, ವಾರಕ್ಕೆ ೪೮ಗಂಟೆ ಮೀರಬಾರದು, ಕಾಯಂ ನೌಕರರ ಸಂಖ್ಯೆ ಕಡಿತ ನಿಲ್ಲಿಸಬೇಕು, ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಬೇಷರತ್ತಾಗಿ ಜಾರಿಗೊಳಿಸಬೇಕು, ಪಿಎಂ ಮತ್ತು ಇಎಸ್‌ಐ ಸೌಲಭ್ಯಗಳಿಗೆ ಅರ್ಹ ವೇತನ ಮಿತಿ ತೆಗೆದುಹಾಕಿ, ಎಲ್ಲ ಕಾರ್ಮಿಕರಿಗೂ ಈ ಸಾಮಾಜಿಕ ಭದ್ರತೆ ಸೌಲಭ್ಯ ಖಾತ್ರಿ ಪಡಿಸಬೇಕೆಂದು ಆಗ್ರಹಿಸಲಾಗುವುದು.
ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ಎಲ್ಲಾ ಶಾಸನಬದ್ದ ಸೌಲಭ್ಯ ಒದಗಿಸಬೇಕು, ಎಲ್ಲಾ ವಸಲೆ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ ಮತ್ತು ಶಾಶ್ವತ ಉದ್ಯೋಗ ಒದಗಿಸಬೇಕು, ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಕಲ್ಯಾಣ ಮಂಡಲೀ ರಚಿಸಿ ಸಾಮಾಜಿಕ ಭದ್ರತೆ ಒದಗಿಸಬೇಕು, ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ಅಥವಾ ನಿರುದ್ಯೋಗ ಭತ್ಯೆ ಒದಗಿಸಿ, ಕೆಲಸದ ಹಕ್ಕನ್ನು ಸಂವಿಧಾನಿಕ ಹಕ್ಕಾಗಿ ಘೋಷಿಸಬೇಕೆಂದು ಸಹಾ ಒತ್ತಾಯಿಸಲಾಗುವುದೆಂದರು. ರಾಜ್ಯ ಉಪಾಧ್ಯಕ್ಷರಾದ ಎಂ. ಉಮಾದೇವಿ, ಜಿಲ್ಲಾಧ್ಯಕ್ಷ ವಿ. ಯಶೋಧರ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್. ಸಂಧ್ಯಾ ಹಾಗೂ ಮುದ್ದುಕೃಷ್ಣ ಹಾಜರಿದ್ದರು.

TAGGED:
Share This Article
Leave a Comment