ಪಬ್ಲಿಕ್ ಅಲರ್ಟ್
ಮೈಸೂರು: ಬೆಂಗಳೂರಿನ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ನೆರವು, ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ಸಮುದಾಯದ ನೌಕರರು, ನಿವೃತ್ತರನ್ನು ಒಂದೆಡೆ ಸೇರಿಸಿ ಅವರ ಬೆಂಬಲ, ಸಲಹೆ ಪಡೆಯುವ ಉದ್ದೇಶದಿಂದ ಸೆ. ೭ ರಂದು ನಗರದಲ್ಲಿ ಮೈಸೂರು ವಲಯದ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ.
ಈ ಕುರಿತು ಕಾರ್ಯದರ್ಶಿ ಡಿ. ಜಗನ್ನಾಥ ಸಾಗರ್ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗ್ಗೆ ೧೧ಕೆಕ ನಗರದ ಸರಸ್ವತಿಪುರಂನಲ್ಲಿನ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಸಭೆ ನಡೆಯಲಿದೆ. ನಂತರ ಮಧ್ಯಾಹ್ನ ೨ಕ್ಕೆ ಟ್ರಸ್ಟ್ನ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಉಪ್ಪಾರ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ ಬಡತನ ಕಾರಣ ಅವರು ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದುವರೆಗೆ ರಾಜ್ಯದ ೨೪ ಜಿಲ್ಲೆಗಳ ೧೨೮ ವಿದ್ಯಾರ್ಥಿಗಳಿಗೆ ಸುಮಾರು ೨೩ ಲಕ್ಷ ರೂ.,ಗಳಷ್ಟು ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸಮುದಾಯದ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಾಗುತ್ತಿಲ್ಲ. ಇವರಿಗೆ ದೂರದ ಊರುಗಳಲ್ಲಿ ಕಾಲೇಜು ಮೊದಲಾದ ಕಡೆ ಪ್ರವೇಶ ದೊರೆತರೂ ವಿದ್ಯಾರ್ಥಿ ನಿಲಯಗಳಿಲ್ಲ. ಹೀಗಾಗಿ ಮೈಸೂರಿನಲ್ಲಿ ಟ್ರಸ್ಟ್ನಲ್ಲಿ ಉಳಿದಿರುವ ಸುಮಾರು ೪೨ ಲಕ್ಷ ರೂ., ನಲ್ಲಿ ಒಂದು ನಿವೇಶನ ಖರೀದಿಸಿ, ಸರ್ಕಾರದ ನೆರವಿನಿಂದ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಲ್ಲದೆ ಸಮುದಾಯದ ನೌಕರರು, ಅಧಿಕಾರಿಗಳು, ನಿವೃತ್ತರು ಸಹಾ ಯಾವ ರೀತಿ ಇದಕ್ಕೆ ನೆರವಾಗಬಹುದು ಎಂಬ ಸಲಹೆ ಹಾಗೂ ನೆರವು ಪಡೆಯಲು ಈ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ. ಹೀಗಾಗಿ ಸಮುದಾಯದವರು ಪಾಲ್ಗೊಳ್ಳಬೇಕೆಂದು ಕೋರಿದರು. ಇನ್ನಿತರ ಪದಾಧಿಕಾರಿಗಳಾದ ಎ.ಟಿ. ಸೋಮಶೇಖರಪ್ಪ, ಕೃಷ್ಣಸ್ವಾಮಿ, ಸಿ.ಎ.ಮಹದೇವಶೆಟ್ಟಿ, ಡಾ.ಸುರೇಶ್ ಹಾಗೂ ಯಶ್ವಂತ್‌ಕುಮಾರ್ ಇದ್ದರು.