ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್  ಜನ್ಮದಿನ ಆಚರಣೆ

Chethan
1 Min Read

ಪಬ್ಲಿಕ್ ಅಲರ್ಟ್

ಮೈಸೂರು : ಮುಡಾ ಮಾಜಿ ಅಧ್ಯಕ್ಷರಾದ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಟಿಂಬರ್ ನಾಗರಾಜ್ ನೇತೃತ್ವದಲ್ಲಿ ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಅಗ್ರಹಾರದಲ್ಲಿರುವ ನೂರಾ ಒಂದು ಗಣಪತಿ ದೇವಸ್ಥಾನದಲ್ಲಿ ಎಚ್.ವಿ.ರಾಜೀವ್ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶುಕ್ರವಾರ ಬೆಳಗ್ಗೆ ದೇವಸ್ಥಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಎಚ್.ವಿ.ರಾಜೀವ್ ಅವರ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿ ದೇವಾಲಯದ ಎದುರು ನೂರಾ ಒಂದು ಈಡುಗಾಯಿ ಹೊಡೆಯಲಾಯಿತು. ಬಳಿಕ ಆಗಮಿಸಿದ ಭಕ್ತರಿಗೆ ಸಿಹಿ ವಿತರಣೆ ಮಾಡಿ ರಾಜೀವ್ ಅವರಿಗೆ ಆರೋಗ್ಯ, ಆಯಸ್ಸು, ಯಶಸ್ಸು, ರಾಜಕೀಯದಲ್ಲಿ ಉನ್ನತ ಸ್ಥಾನ ಸ್ಥಾನಮಾನ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಟಿಂಬರ್ ನಾಗರಾಜು ಮಾತನಾಡಿ, ಮುಡಾ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡರಾದ ಹೆಚ್.ವಿ.ರಾಜೀವ್ ಅವರು ನಿರಂತರವಾಗಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.
ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಲಭಿಸಲಿ, ದೇವರು ಆರೋಗ್ಯ, ಆಯಸ್ಸು ಐಶ್ವರ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಬೈರಪ್ಪ, ನಗರ ಪಾಲಿಕೆಯ ಮಾಜಿ ಸದಸ್ಯರಾದ ಮಲ್ಲೇಶ್, ರಿಷಿ ವಿಶ್ವಕರ್ಮ, ಸಿಟಿ ಆಚಾರ್ಯ, ಮೊಗಣ್ಣಚಾರ್, ಬಿಲ್ಡರ್ ವೆಂಕಟೇಶ್, ಯೋಗೇಶ್, ಬಿ.ಜಿ.ಕೇಶವ್, ಕುಮಾರ್, ರಾಮ್ ಪ್ರಸಾದ್, ಶಿವಕುಮಾರ್, ಕಿಟ್ಟಿ, ಭಾಸ್ಕರ್, ಕುಮಾರಸ್ವಾಮಿ, ಶಿವಕುಮಾರ್, ಸುರೇಶ್, ಶ್ರೀಕಾಂತ್, ಶ್ರೀಕಂಠ, ಸುರೇಶ್, ಹರೀಶ್, ಕಂಸಾಳೆ ರವಿ, ಮಹಾದೇವಸ್ವಾಮಿ, ಮುರಳಿ, ಕುಮಾರಸ್ವಾಮಿ, ಹರಿದಾಸ್, ಸ್ವಾಮಿ ದೇವರು, ವಿವೇಕ್, ಗಿರೀಶ್, ಶಿವು ಸೇರಿ ಇತರರು ಭಾಗವಹಿಸಿದ್ದರು.

Share This Article
Leave a Comment