ಸಚಿವ ರಾಜಣ್ಣಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Chethan
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಮೈಸೂರು, ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ, ನಾಯಕ ಪಡೆ ಸಂಘಟನೆಯ ಸಾವಿರಾರು ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಕೆ.ಎನ್.ರಾಜಣ್ಣ ಪರ ಶಕ್ತಿ ಪ್ರದರ್ಶಿಸಿದರು.
ಶುಕ್ರವಾರ ಬೆಳಗ್ಗೆ ನಗರದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ಮುಖಂಡರು ಬಳಿಕ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಂ.ರಾಮಚಂದ್ರ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಡೆದ ವಾಸ್ತವಾಂಶವನ್ನು ಹೇಳಿದ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದು ಸರಿಯಲ್ಲ, ಅನೇಕ ಮುಖಂಡರು ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಅವರನ್ನು ಏಕೆ ಸಂಪುಟದಿಂದ ವಜಾಗೊಳಿಸಿಲ್ಲ, ಕೆಲವು ಮುಖಂಡರು ನಾಯಕ ಸಮಾಯದ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ ಮುಖ್ಯಮಂತ್ರಿಗಳು ಕೂಡಲೇ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.
ಉಪಾಧ್ಯಕ್ಷರಾದ ಕೆಂಪನಾಯಕ ಅವರು ಮಾತನಾಡಿ, ನಾಯಕ ಸಮುದಾಯದ ಮುಖಂಡರಾದ ಕೆ.ಎನ್.ರಾಜಣ್ಣರವರನ್ನು ದಿಢೀರನೇ ಸಚಿವ ಸಂಘಟದಿಂದ ವಜಾಮಾಡಿರುವುದು ನಾಯಕ ಸಮುದಾಯಕ್ಕೆ ಮಾಡಿದ ಘೋರ ಅಪಮಾನ, ಕೂಡಲೇ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಬೇಕು. ರಾಜಣ್ಣ ಅವರು ನಾಯಕ ಜನಾಂಗದ ಧೀಮಂತ ಹಾಗೂ ಪ್ರಭಾವಿ ಮುಖಂಡರು. ನೇರ ನಡೆ, ನುಡಿ, ದಿಟ್ಟ ಹೋರಾಟಗಾರರಾದ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ನಾಯಕ ಜನಾಂಗಕ್ಕೆ ಮಾಡಿರುವ ಘನ ಘೋರ ಅನ್ಯಾಯವಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಾಯಕ ಸಮುದಾಯದ ರಾಜಕೀಯ ಮುಖಂಡರನ್ನು, ಅಧಿಕಾರಿಗಳನ್ನೆ ಟಾರ್ಗೆಟ್ ಮಾಡಲಾಗುತ್ತಿದೆ. ಕೂಡಲೇ ಮುಖ್ಯಮಂತ್ರಿಗಳು ಹೈಕಮಾಮಡ್ ಜತೆ ಚರ್ಚೆ ನಡೆಸಿ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರಭಲ ಕೋಮಿನ ರಾಜಕೀಯ ಮುಖಂಡರು ಪಕ್ಷ ವಿರೋಧಿ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಆದರೆ ನಾಯಕ ಸಮುದಾಯದವರನ್ನ ಏಕಾ-ಏಕಿ ವಜಾಮಾಡಿರುವುದು ಖಂಡನೀಯ ಈ ಕೂಡಲೇ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆಮಾಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾಯಕ ಸಮುದಾಯವು ಪಕ್ಷದಿಂದ ದೂರವಾಗುವ ಸಂಭವ ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಮಹದೇವನಾಯಕ, ಆರ್.ರಾಚಪ್ಪ, ಕುಂಬರಹಳ್ಳಿ ಸುಬ್ಬಣ್ಣ, ಶ್ರೀನಿವಾಸ ನಾಯಕ, ದ್ಯಾವಪ್ಪ ನಾಯಕ, ಕೆಂಪನಾಯಕ, ಅಣ್ಣಯ್ಯ ನಾಯಕ, ವಿನೋದ್ ನಾಗಾವಾಲ, ಮಾಜಿ ಕಾರ್ಪೋರೇಟರ್ ರವಿಂದ್ರ ಕುಮಾರ್, ಮಹದೇವಸ್ವಾಮಿ, ಪ್ರಭಾಕರ್ ಮತ್ತಿತರರು ಇದ್ದರು.

ಕೋಟ್
ರಾಜಕಾರಣದಲ್ಲಿ ಶುದ್ಧ ಹಸ್ತರಾಗಿದ್ದು, ನೇರ ನುಡಿಗೆ ಹೆಸರಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಯಾವುದೇ ನೋಟೀಸ್ ನೀಡದೆ ಏಕಾ-ಏಕಿ
ಸಂಪುಟದಿಂದ ವಜಾಗೊಳಿಸಿರುವುದು ಸರಿಯಲ್ಲ,
ಇದು ರಾಜ್ಯದ ಇಡೀ ನಾಯಕ ಜನಾಂಗಕ್ಕೆ ಮಾಡಿರುವ ಅನ್ಯಾಯ ಹಾಗೂ ಅಪಮಾನ. ಇದೇ ರೀತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಮೇಶ್ ಜಾರಕಿಹೋಳಿ, ಶ್ರೀರಾಮುಲು ಅವರಿಗೂ ಅನ್ಯಾಯ ಮಾಡಲಾಗಿತ್ತು. ಇದು ನಾಯಕ ಸಮುದಾಯದವರನ್ನು ರಾಜಕೀಯವಾಗಿ ತುಳಿಯುವ ಯತ್ನ, ನಮ್ಮ ಸಮುದಾಯ ಜಾಗೃತವಾಗಿದ್ದು, ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ತನಕವೂ ಹೋರಾಟ ನಡೆಸುತ್ತೇವೆ.
ವಿನೋದ್ ನಾಗಾವಾಲ, ಪತ್ರಿಕಾ ಕಾರ್ಯದರ್ಶಿ

ಕೋಟ್
ನಾಯಕ ಸಮುದಾಯದ ಪ್ರಭಾವಿ ಮುಖಂಡರಾದ ಕೆ.ಎನ್. ರಾಜಣ್ಣ ಅವರ ಮೇಲೆ ಯಾವುದೇ ಭ್ರಷ್ಟಚಾರದ ಆರೋಪವಿಲ್ಲ, ಸ್ವಜನ
ಪಕ್ಷಪಾತವಿಲ್ಲ. ಕಳೆದ ೨ ವರ್ಷಗಳಿಂದ ಸಹಕಾರ ಸಚಿವರಾಗಿ, ಉತ್ತಮ ಆಡಳಿತ ನೀಡುತ್ತಿದ್ದರು. ದೀನ-ದಲಿತರ, ಹಿಂದುಳಿದ ವರ್ಗದವರ ದನಿಯಾಗಿದ್ದರು. ಇವರ ಏಳಿಗೆಯನ್ನು ಸಹಿಸದೇ ಕುತಂತ್ರಮಾಡಿ ಸಂಪುಟದಿಂದ ವಜಾ ಮಾಡಲಾಗಿದೆ. ಇದೇ ರೀತಿ
ಸಚಿವರಾಗಿದ್ದ ಬಿ.ನಾಗೇಂದ್ರ, ಪೋಲೀಸ್ ಅಧಿಕಾರಿಗಳಾದ ಬಿ.ದಯಾನಂದ್, ರವಿ ಡಿ. ಚೆನ್ನಣ್ಣರವರಿಗೂ ಕೂಡ ಅನ್ಯಾಯ ಮಾಡಲಾಗಿತ್ತು. ನಮ್ಮ ಸಮುದಾಯ ಇದನ್ನು ಸಹಿಸುವುದಿಲ್ಲ. ಈ ಅನ್ಯಾಯದ ವಿರುದ್ಧ ನಾವು ನಿರಂತರವಾಗಿ ಪ್ರತಿಭಟನೆ ಮಾಡುತ್ತೇವೆ.
ರವಿಂದ್ರ ಕುಮಾರ್, ಮಾಜಿ ಕಾರ್ಪೋರೇಟರ್

Share This Article
Leave a Comment