ನಾಳೆ ಚಿದಾನಂದ ಸ್ವಾಮೀಜಿಯವರ ಅಮೃತಮಹೋತ್ಸವ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು:
ನಗರದ ಶ್ರೀ ಹೊಸಮಠದ ನಿರಂಜನ ಪಟ್ಟಾಧಿಕಾರ ಮಹೋತ್ಸವ, ಚಿದಾನಂದ ಸ್ವಾಮೀಜಿಯವರ ಅಮೃತ ಮಹೋತ್ಸವ ಗುರುವಂದನೆ, ಚಿದ್ಬೆಳಕು ಗ್ರಂಥ ಮತ್ತು ಚಿದಾಮೃತ ಚಿತ್ರಸಂಪುಟ ಬಿಡುಗಡೆ ಕಾರ್ಯಕ್ರಮ ಸೆ. ೪ ರ ಬೆಳಗ್ಗೆ ೧೦.೩೦ಕ್ಕೆ ಶ್ರೀ ಹೊಸ ಮಠದ ಆವರಣದಲ್ಲಿ ನಡೆಯಲಿದೆ ಎಂದು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ತಿಳಿಸಿದರು.
ನಗರದಲ್ಲಿ  ಸುದ್ದಿಗಾರರೊಡನೆ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಚಿದಾನಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಗುವುದು. ಮಹಾಂತ ಸ್ವಾಮೀಜ, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನಿತರರು ಆಶೀರ್ವಚನ ನೀಡಲಿದ್ದಾರೆ. ರೈಲ್ವೆ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು, ಗುರಮಹಾಂತ ಸ್ವಾಮೀಜಿ ತ್ರೆöÊಮಾಸಿಕ ಸಂಚಿಕೆ ಬಿಡುಗಡೆಗೊಳಿಸುವರು, ಚಿದ್ಬೆಳಕು ಗ್ರಂಥವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸುವರು, ಚಿದಾಮೃತ ಚಿತ್ರಸಂಪುಟವನ್ನು ಶಾಸಕ ಜಿ.ಟಿ. ದೇವೇಗೌಡ ಬಿಡುಗಡೆಗೊಳಿಸುವರೆಂದರು.
ಶಾಸಕ ಟಿ.ಎಸ್. ಶ್ರೀವತ್ಸ ಗುರುವಂದನಾ ನುಡಿ ಆಡಲಿದ್ದು, ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಕೆ. ಹರೀಶ್‌ಗೌಡ ಇನ್ನಿತರರು ಅತಿಥಿಗಳಾಗಿರಲಿದ್ದಾರೆಂದು ತಿಳಿಸಿದರು.
ಈ ವೇಳೆ ಎಂ.ಬಿ. ರಾಕೇಶ್ ಅವರಿಗೆ ವಿರಕ್ತಾಶ್ರಮಮ ಷಟ್ಸ÷್ಥಳ ಬ್ರಹ್ಮೋಪದೇಶ ನಡೆಯಲಿದೆ. ೨೧ ನೇ ಪೀಠಾಧಿಕಾರಿಯಾದ ಚಿದಾನಂ ಸ್ವಾಮೀಜಿ ೧೯೮೨ ರಲ್ಲಿ ಶ್ರೀ ಮಠದ ಉತ್ತರಾಧಿಕಾರಿಗಳಾಗಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನಿಡಿದ್ದಾರೆಂದರು.
ಹಿನಕಲ್ ಬಸವರಾಜು, ಮಹೇಶ್, ನಾಗಭೂಷಣ್ ಹಾಗೂ ಇನ್ನಿತರರು ಇದ್ದರು.

Share This Article
Leave a Comment