ಪಬ್ಲಿಕ್ ಅಲರ್ಟ್
ಮೈಸೂರು:ಅಖಿಲ ಭಾರತ ಭಾವಸಾರ್ ಕ್ಷತ್ರಿಯ ಮಹಾಸಭೆ ಹಾಗೂ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಸೆ. ೭ ರ ಬೆಳಗ್ಗೆ ೧೦.೩೦ಕ್ಕೆ ಹುಣಸೂರು ರಸ್ತೆಯ ವಿಠಲ ರುಕ್ಮಿಣಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಎನ್.ವಿ. ಶ್ರೀನಿವಾಸರಾವ್ ಪಿಸ್ಸೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ಯದಾದ್ಯಂತದಿAದ ಸುಮಾರು ೧೫೦೦ ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಈಚಿನ ಜಾತಿಗಣತಿಯಲ್ಲಿ ಭಾವಸಾರ್ ಸಮುದಾಯಕ್ಕೆ ಅನ್ಯಾಯವಾಗಿರುವುದರ ಬಗ್ಗೆ ಚರ್ಚಿಸಿ, ಅದನ್ನು ಸರಿಪಡಿಸಲು ಸರ್ಕಾರದ ಗಮನ ಸೆಳೆಯುವುದರ ಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಗಣತಿ ವೇಳೆ ಮಾತೃಭಾಷೆ ಮರಾಠಿ ಎಂದು ತಿಳಿಸಿದ ಕಾರಣ ಮರಾಠ ಜಾತಿಗೆ ಸೇರಿಸಲಾಗಿದೆ. ಇದರಿಂದಾಗಿ ಸರ್ಕಾರದ ಸವಲತ್ತು ದೊರೆಯುತ್ತಿಲ್ಲ. ಮರಾಠಿ ಮಾತೃಭಾಷೆಯಾದರೂ ಸಹಾ ವೃತ್ತಿಯಲ್ಲಿ ಭಾವಸಾರ ಕ್ಷತ್ರಿಯರು ದರ್ಜಿಗಳಾಗಿದ್ದು, ಪ್ರತ್ಯೇಕ ಜಾತಿಯವರಾಗಿದ್ದಾರೆ. ರಾಜ್ಯದಲ್ಲಿ ಸುಮಾರು ೮ ಲಕ್ಷ ಜನಸಂಖ್ಯೆ ಇದ್ದರೂ ಸಹಾ ಕೇವಲ ೮ ಸಾವಿರ ಎಂದು ದಾಖಲಿಸಲಾಗಿದೆ. ಇದರಿಂದಾಗಿ ಮೀಸಲಾತಿ ದೊರಕುತ್ತಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತನೆ ನಡೆದಿತ್ತಾದರೂ, ಕೇಂದ್ರ ಸರ್ಕಾರ ಈಗ ಜಾತಿಗಣತಿಗೆ ಮುಂದಾಗಿರುವ ಕಾರಣ ಕಾದು ನೋಡುವ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಇನ್ನಿತರ ಪದಾಧಿಕಾರಿಗಳಾದ ಶಿವಾಜಿರಾವ್ ರಂಪೋರೆ, ಅರ್ಚನಾ ವಾಧೋನಿ ಮೊದಲಾದವರು ಇದ್ದರು.
ಸೆ.7ಕ್ಕೆ ಭಾವಸಾರ್ ಕ್ಷತ್ರಿಯ ಮಹಾಸಭೆ

Leave a Comment
Leave a Comment