ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಹೂಟಗಳ್ಳಿಯಲ್ಲಿರುವ ನೂಪುರ ನಟನಗೃಹ ಕಲ್ಚರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ನೂಪುರ ನೃತ್ಯಾಲಯದ ೧೧ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ನೂಪುರ ನೃತ್ಯೋತ್ಸವ ಕಾರ್ಯಕ್ರಮ ಸೆ.೭ ರಂದು ಸಂಜೆ ೪ಕ್ಕೆ ನಗರದ ಕಲಾಮಂದಿರಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕಿ ದಿವ್ಯ ಪ್ರಶಾಂತ್ ಹಂಚಿಕೊಂಡರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ವಾರ್ಷಿಕೋತ್ಸವ ಅಂಗವಾಗಿ ಕಾರ್ಯಕ್ರಮಕ್ಕೆ ಮೈಸೂರು ನೃತ್ಯಗಿರಿ ಪೊರ್ಫಾಮಿಂಗ್ ಆರ್ಟ್ಸ್ ಸೆಂಟರ್‌ನ ನಿರ್ದೇಶಕ ಡಾ. ಕೃಪಾ ಫಾಡ್ಕೆ , ಸಂಗೀತ ಸಂಯೋಜಕ ವಿದ್ವಾನ್ ಕೆ. ಗುರುಪ್ರಸಾದ್, ನೃತ್ಯಾಲಯ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕಿ ನಾಟ್ಯ ವಿದುಷಿ ಆರತಿ ಅರುಣ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಮೋಹಿನಿಯಾಟಂ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು, ೮ ವರ್ಷದಿಂದ ೪೦ ವರ್ಷದ ವರೆಗಿನ ಮಹಿಳಾ ನೃತ್ಯಾ ಕಲಾವಿದೆಯರು ಭಾಗವಹಿಸಲಿದ್ದಾರೆ. ಅವರಿಗಾಗಿ ವಿವಿಧ ವಿಭಾಗದ ಸಬ್‌ಜೂನಿಯರ್, ಜೂನಿಯರ್, ಸೀನಿಯರ್ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದರು. ನೃತ್ಯ ಶಾಲೆಯಲ್ಲಿ ೫೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೃತ್ಯ ತರಬೇತಿ ಪಡೆದುಕೊಳ್ಳುತಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನೃತ್ಯ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ೫ ಜನ ಶಿಕ್ಷಕಿಯರು ಕಾರ್ಯನಿರ್ವಹಿಸುತಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ವಿದ್ಯಾರ್ಥಿಗಳಾದ ಸಹನ ಪ್ರಶಾಂತ್, ಪೂರ್ಣಿಮ, ನಿರ್ಮಲ ರವಿಕುಮಾರ್ ಉಪಸ್ಥಿತರಿದ್ದರು.