ಸೆ.೬ ರಂದು ಸಿನಿಮಾ ಗೀತೆಗಳ ಗಾಯನ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಆರ್ಕೆಸ್ಟ್ರಾ ಮತ್ತು ಗಜಲ್ ಪಾರ್ಟಿ ಮೈಸೂರು ಏಕ್ ಶಾಮ್ ಮ್ಯೂಸಿಕ್ ಕೆ ನಾಮ್‌ನ ೪೪ನೇ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಸೆ.೬ ರಂದು ಸಂಜೆ ೫.೩೦ಕ್ಕೆ ಹಳೆಯ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಹಿಟ್ ಹಾಡುಗಳ ನೇರಪ್ರಸಾರ ಹಾಗೂ ಕರೋಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ವಿ.ಜಾರ್ಜ್ ಪ್ರಭಾಕರ್ ತಿಳಿಸಿದರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಗರದ ಜಗನ್‌ಮೋಹನ ಅರಮನೆಯಲ್ಲಿ ಅಂದು ಸಂಗೀತ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಂಗವಾಗಿ ಕನ್ನಡ ಮತ್ತು ತುಳು ಚಲನ ಚಿತ್ರಗಳ ಹಿನ್ನಲೆ ಗಾಯಕ ಆಕಾಶ್ ತಲಾಪತ್ರ, ಹಿನ್ನಲೆ ಗಾಯಕಿ ರಶ್ಮಿ ಲಹರಿ ಹಾಗೂ ಚಲನಚಿತ್ರ ಹಿನ್ನಲೆ ಗಾಯಕಿ ಇಂದುಮತಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು, ಅವರೊಂದಿಗೆ ಗಾಯಕರಾದ ವಿ.ಜಾರ್ಜ್ ಪ್ರಭಾಕರ್ ಆದ ನಾನು ಅವರೊಂದಿಗೆ ಹಾಡಲಿದ್ದೇನೆ. ನಿರಂತರವಾಗಿ ೪೪ ವರ್ಷಗಳಿಂದ ಗೀತ ಗಾಯನ ಕಾರ್ಯಕ್ರಮ ನಡೆಸುತ್ತಾ ಬರುತಿದ್ದು, ಐಗಿರಿ ಡೆವಲಪರ್ಸ್ ಹರೀಶ್, ಡಾ.ರಘು ವೀರ್, ಡಾ.ರೇಖಾ ಅರುಣ್, ಚಲನಚಿತ್ರ ನಿರ್ಮಾಪಕ ರಾಮ್ ನಾಯಕ, ಗುರು ಹಾಗೂ ಬೆಂಗಳೂರು ಗಗನ ಸಖಿ ಅಶ್ವಿನಿ ಅವರು ಸಂಗೀತ ಕಾರ್ಯಕ್ರಮದಲ್ಲಿ ಗಾಯನ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚಿನ ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡಲಿದ್ದಾರೆ ಎಂದರು.
ಗಾಯಕ ಆಕಾಶ್ ತಲಾಪತ್ರ, ಪ್ರಭಾಕರ್, ಕುಮಾರ್, ಪ್ರಸಾದ್ ಉಪಸ್ಥಿತರಿದ್ದರು.

Share This Article
Leave a Comment