ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಶುಕ್ರವಾರ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿದರು.
ಅರಮನೆಯ ಆನೆ ಬಾಗಿಲು ಬಳಿ ಫಿರಂಗಿ ಗಾಡಿಗಳಿಗೆ ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಗಾಡಿಗಳಿಗೆ ಮಂಗಳಾರತಿ ಮಾಡಿದರು.
ಚಾಮುಂಡೇಶ್ವರಿ ಅಮ್ಮನವರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಯಿತು. ವಿಘ್ನ ನಿವಾರಕ ಗಣಪತಿ ಹಾಗೂ ಮೃತ್ಯುಂಜಯ ಸ್ವಾಮಿ ಜತೆಗೆ ಅರಮನೆಯಲ್ಲಿರುವ 11 ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು.
ವಿಜಯದಶಮಿ ಜಂಬೂಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿ ಹೊತ್ತ ಆನೆಗೆ ಗಣ್ಯರು ಪುಷ್ಪಾರ್ಚನೆ ಮಾಡುತ್ತಿದ್ದಂತೆ, ರಾಷ್ಟ್ತಗೀತೆ ನುಡಿಸಲಾಗುತ್ತದೆ. ಈ ವೇಳೆ ರಾಷ್ಟ್ರಗೀತೆ ಮುಗಿಯುವುದರೊಳಗೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಅಂಬಾರಿಯಲ್ಲಿ ಅಲಂಕೃತವಾದ ಚಾಮುಂಡೇಶ್ವರಿ ಅಮ್ಮನವರಿಗೆ ರಾಷ್ಟಿçÃಯ ಗೌರವ ಸಲ್ಲಿಸಲಾಗುವುದು.
ಇದು ಸವಾಲಿನ ಕೆಲಸ ಆಗಿರುವುದರಿಂದ ದಸರಾ ಸಮೀಪಿಸುತ್ತಿದ್ದಂತೆ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಪೂರ್ವಾಭ್ಯಾಸ ಮಾಡುತ್ತಾರೆ. ಅಂತಿಮ ಹಂತದಲ್ಲಿ ಪೂರ್ಣ ಪ್ರಮಾಣದ ಕುಶಾಲತೋಪು ಸಿಡಿಸುವ ತಾಲೀಮನ್ನು ದಸರಾ ಗಜಪಡೆ ಹಾಗೂ ಅಶ್ವಾರೋಹಿ ದಳದ ಸಮ್ಮುಖದಲ್ಲಿ ಸಿಡಿಮದ್ದು ಸಿಡಿ ಹೊರಹೊಮ್ಮುವ ಶಬ್ದಕ್ಕೆ ಹೊಂದಿಕೊಳ್ಳುವಂತೆ ತಾಲೀಮು ನೀಡಲಾಗುತ್ತದೆ.
ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯಯ, ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಭುಗೌಡ, ಡಿಸಿಪಿ ಬಿಂದುಮಣಿ, ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್, ಇನ್ಸ್ಪೆಕ್ಟರ್ ಆನಂದ್ ಸೇರಿ ಪ್ರಮುಖರಿದ್ದರು.
ಬಾಕ್ಸ್
ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಗಿದೆ. ಆನೆಗಳು ಹಾಗೂ ಕುದುರೆಗಳಿಗೆ ಶಬ್ದ ಅಸ್ವಾಭಾವಿಕ ಎನಿಸಬಾರದು ಎನ್ನುವ ಕಾರಣಕ್ಕೆ ಮರ್ನಾಲ್ಕು ಸುತ್ತಿನ ತಾಲೀಮು ಮಾಡುತ್ತೇವೆ. ದಸರಾ ಸಿದ್ಧತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ.
– ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ
ದಸರಾ ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ

Leave a Comment
Leave a Comment