ಮೈಸೂರಿನಲ್ಲಿ ಬಾಡಿ ಕ್ರಾಫ್ಟ್ ಕ್ಲಿನಿಕ್-ಸಲೂನ್ ಪ್ರಾರಂಭ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಚರ್ಮರೋಗ ಶಾಸ್ತ್ರ-ಆಧಾರಿತ ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಲೂನ್ ಪರಿಣತಿಯಲ್ಲಿ ಭಾರತದ ಅಗ್ರಗಣ್ಯ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾದ ಬಾಡಿ ಕ್ರಾಫ್ಟ್ ಕ್ಲಿನಿಕ್ ಮತ್ತು ಸಲೂನ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಮೊತ್ತಮೊದಲ ಬೃಹತ್ ಮಳಿಗೆಯನ್ನು ಅನಾವರಣಗೊಳಿಸಿತು.
ಸಂಸದ ಸುನೀಲ್‌ ಬೋಸ್‌, ನಗರ ಪೊಲೀಸ್‌ ಆಯುಕ್ತೆ ಸೀಮಾಲಾಟ್ಕರ್‌ ವಿಶೇಷ ಅತಿಥಿಗಳಾಗಿ ನೂತನ ಮಳಿಗೆ ಲೋಕಾರ್ಪಣೆಗೊಳಿಸಿದರು. ೩,೯೫೦ ಚದರ ಅಡಿಗಳ ವಿಸ್ತಾರವಾದ ಈ ಕೇಂದ್ರವನ್ನು ಚಾಮರಾಜನಗರ ಲೋಕಾಸಭಾ ಕ್ಷೇತ್ರದ ಸಂಸದರಾದ ಸುನೀಲ್‌ಬೋಸ್ ಮತ್ತು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಉದ್ಘಾಟಿಸಿದರು. ಸಂಸ್ಥೆಯ ವಿಶಿಷ್ಟವಾದ ’ಸಿಗ್ನೇಚರ್ ಹೈಬ್ರಿಡ್ ಎಕ್ಸ್‌ಪೀರಿಯನ್ಸ್’ (ಚರ್ಮರೋಗ ಚಿಕಿತ್ಸೆ, ಕಾಸ್ಮೆಟಾಲಜಿ ಮತ್ತು ಸಲೂನ್ ಸೇವೆಗಳ ಸಮಗ್ರ ಸಂಗಮ) ಅನ್ನು ಮೈಸೂರು ನಗರಕ್ಕೆ ಪ್ರಥಮ ಬಾರಿಗೆ ಪರಿಚಯಿಸುತ್ತಿದೆ. ೧೯೯೭ರಲ್ಲಿ ಮಂಜುಳಾ ಗುಪ್ತಾ ಅವರಿಂದ ಸ್ಥಾಪಿಸಲ್ಪಟ್ಟ ಬಾಡಿ ಕ್ರಾಫ್ಟ್, ೨೮ ವರ್ಷಗಳ ತನ್ನ ಸಮೃದ್ಧ ಪರಂಪರೆಯಲ್ಲಿ, ತಜ್ಞರ ನೇತೃತ್ವದ ಸೌಂದರ್ಯ ಮತ್ತು ಸ್ವಾಸ್ಥ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ಈ ಮಳಿಗೆಯ ಸ್ಥಾಪನೆಯೊಂದಿಗೆ, ಸಂಸ್ಥೆಯು ತನ್ನ ೩೧ನೇ ಕ್ಲಿನಿಕ್ ಹಾಗೂ ೩೨ನೇ ಸಲೂನ್‌ಗೆ ಚಾಲನೆ ನೀಡಿದ್ದು, ಮಹಾನಗರಗಳನ್ನು ಮೀರಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಬಾಡಿ ಕ್ರಾಫ್ಟ್ ಸಂಸ್ಥಾಪಕಿ ಮಂಜುಳಾ ಗುಪ್ತಾ ಮಾತನಾಡಿ, “ಬಾಡಿ ಕ್ರಾಫ್ಟ್ ಅನ್ನು ಮೈಸೂರಿಗೆ ತರುತ್ತಿರುವುದು ನನಗೆ ಅಪಾರ ಹರ್ಷವನ್ನುಂಟುಮಾಡಿದೆ. ಸುಮಾರು ಮೂರು ದಶಕಗಳಿಂದ, ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ, ಚರ್ಮರೋಗ ತಜ್ಞರ ಬೆಂಬಲಿತ ಸೇವೆಗಳನ್ನು ವೈಯಕ್ತಿಕ ಕಾಳಜಿಯೊಂದಿಗೆ ನೀಡುವುದೇ ನಮ್ಮ ಧ್ಯೇಯ. ಈ ಮಳಿಗೆಯು ನಮ್ಮ ಈ ಸುದೀರ್ಘ ಪಯಣದ ದ್ಯೋತಕ. ಮೈಸೂರಿನ ಜನರು ಬಾಡಿ ಕ್ರಾಫ್ಟ್‌ನ ಸಮಗ್ರ ಸೌಂದರ್ಯ ಮತ್ತು ಸ್ವಾಸ್ಥ್ಯದ ಅನುಭವವನ್ನು ಪಡೆಯಲಿದ್ದಾರೆ ಎಂಬುದು ನನಗೆ ಸಂತಸ ತಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಬಾಡಿ ಕ್ರಾಫ್ಟ್ ಕ್ಲಿನಿಕ್ಸ್ ಮತ್ತು ಸಲೂನ್ಸ್‌ನ ಸಿಇಒ ಸಾಹಿಲ್ ಗುಪ್ತಾ ಮಾತನಾಡಿ, “ಬಾಡಿ ಕ್ರಾಫ್ಟ್‌ನಲ್ಲಿ, ನಾವು ಕೇವಲ ವಿಸ್ತರಣೆಗಾಗಿ ಬೆಳೆಯುವುದಿಲ್ಲ, ಒಂದು ಉದ್ದೇಶದೊಂದಿಗೆ ಬೆಳೆಯುತ್ತೇವೆ. ಮೈಸೂರಿಗೆ ನಮ್ಮ ಪ್ರವೇಶವು, ಪ್ರತಿ ಹೊಸ ಮಾರುಕಟ್ಟೆಯಲ್ಲೂ ಗುಣಮಟ್ಟ, ಸ್ಥಿರತೆ ಮತ್ತು ಗ್ರಾಹಕರ ನಂಬಿಕೆಗೆ ಆದ್ಯತೆ ನೀಡುವ ನಮ್ಮ ಚಿಂತನಶೀಲ ವಿಸ್ತರಣಾ ಯೋಜನೆಯ ಭಾಗವಾಗಿದೆ ಎಂದು ಹೇಳಿದರು.

Share This Article
Leave a Comment