ಮದ್ದೂರಿನ  ಘಟನೆ ಖಂಡಿಸಿ ಪ್ರತಿಭಟನೆ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮದ್ದೂರಿನಲ್ಲಿ ನ
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಮುದಾಯದ ಗುಂಪಿನಿಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆ ಬರುತ್ತಿದ್ದಂತೆ ಪೂರ್ವ ನಿಯೋಜಿತವಾಗಿ,ಸಮುದಾಯದ ಗುಂಪೊಂದು ಪ್ಲಾನ್ ಮಾಡಿ ಕಲ್ಲುಗಳನ್ನು ಇಟ್ಟುಕೊಂಡು, ರಸ್ತೆಯ ಎಲ್ಲಾ ಲೈಟ್ ಗಳನ್ನು ಹಾಗೂ ಮಸೀದಿ ಲೈಟ್ ಗಳನ್ನು ಆಫ್ ಮಾಡಿ, ಏಕಾಏಕಿ ಕಲ್ಲುಗಳನ್ನು ಎಸೆದಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಈ ಘಟನೆಯಿಂದ ಹಲವಾರು ಹಿಂದೂಗಳಿಗೆ ಹಾಗೂ ಪೊಲೀಸರಿಗೂ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಈ ಘಟನೆ ನೋಡಿದರೆ ನಾವು ಪಾಪಿಸ್ತಾನದಲ್ಲಿದ್ದೆವೋ, ಕರ್ನಾಟಕದಲ್ಲಿದ್ದೇವೋ ಅನಿಸುತ್ತಿದೆ. ತಲತಲಾಂತರ ಗಳಿಂದ ರಾಜ್ಯದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವುದು ಸಾರ್ವಜನಿಕ ರಸ್ತೆಯಲ್ಲಿಯೇ ಹೊರತು,ಬೇರೆ ಕಡೆ  ರಸ್ತೆಯಲ್ಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಬ್ಬಗಳು ನಮ್ಮ ದೇಶದಲ್ಲಿ ಯಾವುದೇ ಗಲಾಟೆಗಳಿಲ್ಲದೆ ನಡೆಯುತ್ತವೆ. ಆದರೆ ದೇಶದ ಬಹು ಸಂಖ್ಯಾತ ಸಹಿಷ್ಣುಗಳಾದ ನಮ್ಮ ಹಿಂದೂಗಳ ಹಬ್ಬಗಳಿಗೆ ಇವರು ಪದೇ ಪದೇ ತೊಂದರೆ ಕೊಡುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಕಳೆದ ವರ್ಷ ನಾಗಮಂಗಲದಲ್ಲಿ ಹಾಗೂ ಇತ್ತೀಚೆಗೆ ಮೈಸೂರಿನ ಉದಯಗಿರಿಯಲ್ಲೂ ಈ ರೀತಿ ಹಿಂದೂಗಳು ಹಾಗೂ ಪೊಲೀಸರ ಮೇಲೆ ಸಮುದಾಯದ ಗುಂಪೊಂದು ಕಲ್ಲುತೂರಾಟ ನಡೆಸಿದ್ದರು‌.  ಮುಖ್ಯಮಂತ್ರಿಗಳು ಸಮುದಾಯವೊಂದರ ಅತಿಯಾದ ಓಲೈಕೆಗಾಗಿ ಇವರನ್ನು ಎರಡು ದಿನದ ಹಿಂದೆ  ಕಾರ್ಯಕ್ರಮದಲ್ಲಿ ಮುಸ್ಲಿಮರು  ಶಾಂತಿ ಪ್ರಿಯರು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ವಿಜಯಪುರ ಹಾಗೂ ಹಾವೇರಿಯಲ್ಲಿ ಇದೇ ಮುಸ್ಲಿಮರು ಮೊನ್ನೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲೇಸ್ತಿನ್ ಧ್ವಜ ಹಾರಿಸಿರುವುದು ದೇಶ ದೋಹದ ಪ್ರಕರಣವಾಗಿದೆ. ಅವರ ಮೇಲೆ ಸರ್ಕಾರ ಸುಮೋಟೋ ಕೇಸ್ ದಾಖಲಿಸಬೇಕು ಒತ್ತಾಯಿಸಿದರು.
ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ಪ್ರಕರಣದಲ್ಲಿ, ಚಾಮುಂಡಿ ಬೆಟ್ಟದ ವಿಚಾರದಲ್ಲಿ ಹಾಗೂ ನಾಡ ಧಾರ್ಮಿಕ ಹಬ್ಬ ದಸರಾ ಉದ್ಘಾಟನೆಯಲ್ಲಿ ಹಿಂದೂ ವಿರೋಧಿ ಧೋರಣೆ ತೋರಿದೆ. ಈ ಸರ್ಕಾರದಲ್ಲಿ ಮುಸ್ಲಿಮರ ಹಬ್ಬ ಆಚರಣೆಗಳಿಗೆ ಯಾವುದೇ ನಿರ್ಬಂಧ ವಿಲ್ಲ. ಆದರೆ ಹಿಂದೂಗಳ ಹಬ್ಬ ಆಚರಣೆಗಳಿಗೆ, ಸರ್ಕಾರ ಬಹಳಷ್ಟು ನಿಬಂಧನೆಗಳನ್ನು ಹಾಕುತ್ತಿರುವುದನ್ನು ರಾಜ್ಯದ ಹಿಂದೂಗಳೆಲ್ಲ ಖಂಡಿಸಲೇಬೇಕು ಎಂದು ಒತ್ತಾಯಿಸಿದರು.

ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಪೊಲೀಸ್ ಇಲಾಖೆ ಸರ್ಕಾರದ, ಗೃಹ ಸಚಿವರ ಕೈಗೊಂಬೆಯಾಗಿದೆ.ಈ ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ, ಮತ್ತೆ ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ಪುನರಾವತನೆಯಾಗದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆ  ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ,ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಪ್ರಜೀಶ್, ಮಧುವನ ಚಂದ್ರು, ಗಿರೀಶ್, ಕೃಷ್ಣಪ್ಪ,  ಶಿವಲಿಂಗಯ್ಯ, ವರಕೂಡು ಕೃಷ್ಣೆಗೌಡ, ನೇಹ, ಭಾಗ್ಯಮ್ಮ ಮತ್ತಿತರರು ಪಾಲ್ಗೊಂಡಿದ್ದರು.

TAGGED:
Share This Article
Leave a Comment