ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಿಬಿರ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ ಕಣ್ಣಿನ ಸುರಕ್ಷತೆಯ ಜಾಗೃತಿಗಾಗಿ ನಗರದ ಎಎಸ್‌ಜಿ ಕಣ್ಣಿನ  ಆಸ್ಪತ್ರೆಯಲ್ಲಿ ಅ.17ರಿಂದ 24ರವರೆಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆ ವೈದ್ಯ ಎಚ್.ಎಂ.ಮಹೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದಲ್ಲಿ ಪಟಾಕಿ ಬಳಸುವಾಗ ಪ್ರತಿಯೊಬ್ಬರು ಎಚ್ಚರಿಕೆಯನ್ನು ವಹಿಸಬೇಕು. ಮುಖ್ಯವಾಗಿ ಮಕ್ಕಳನ್ನು ಜಾಗ್ರತೆಯಿಂದ ಗಮನಿಸಬೇಕು. ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾದರೆ ಸ್ವಯಂ ಚಿಕಿತ್ಸೆ ಮಾಡದೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಕೇಂದ್ರದ ನಿರ್ವಾಹಕ ಪ್ರದೀಪ್ ಪ್ರಸಾದ್ ಇದ್ದರು.

Share This Article
Leave a Comment