ಪಬ್ಲಿಕ್ ಅಲರ್ಟ್
ಮೈಸೂರು: ಭಾರತೀಯ ಜಾತಿ ವ್ಯವಸ್ಥೆಯೇ ಪ್ರಪಂಚದಲ್ಲಿ ಅತ್ಯಂತ ಕ್ರೂರವಾದ ವ್ಯವಸ್ಥೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲುಂದ ಸಂಶೋಧಕರ ಸಂಘ, ದಲಿತರ ವಿದ್ಯಾರ್ಥಿ ಒಕ್ಕೂಟ, ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಸಹಯೋಗದಲ್ಲಿ ಶನಿವಾರ ನಡೆದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಚಾರಿತ್ರಿಕ ಹಿನ್ನೆಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸಾಮಾಜಿಕ ವ್ಯವಸ್ಥೆಗೆ ಅಂಟಿಕೊAಡಿರುವ ದೊಡ್ಡ ರೋಗ ಜಾತಿ ವ್ಯವಸ್ಥೆ. ಜಾತಿ ವ್ಯವಸ್ಥೆ ಅತ್ಯಂತ ಶೋಷಣೆ ಮಾಡುವ ವ್ಯವಸ್ಥೆ. ಹುಟ್ಟಿನಿಂದಲೇ ಮನುಷ್ಯ ಯೋಗ್ಯತೆ, ಸ್ಥಾನಮಾನ ನಿರ್ಧರಿಸಲಿದೆ. ಧರ್ಮ ಬದಲಾಯಿಸುವ ವ್ಯವಸ್ಥೆ ಇದೆ. ಆದರೆ, ಜಾತಿ ಬದಲಾಯಿಸಲು ಅವಕಾಶವಿಲ್ಲ. ಹೀಗಾಗಿ ಜಾತಿ ವ್ಯವಸ್ಥೆಯಷ್ಟು ಕ್ರೂರವಾದ ವ್ಯವಸ್ಥೆ ಪ್ರಪಂಚದಲ್ಲಿಯೇ ಬಹುಶಃ ಇಲ್ಲ ಎಂದು ಹೇಳಿದರು.
ವರ್ಗ ವ್ಯವಸ್ಥೆ ಅಸಮಾನತೆಯನ್ನು ಹೊಗಲಾಡಿಸಬಹುದು. ವರ್ಗ ಅಸಮಾನತೆಯಲ್ಲಿ ಶಿಕ್ಷಣ ಪಡೆದು ಅಥವಾ ವ್ಯವಹಾರದಲ್ಲಿ ಹಣ ಸಂಪಾದಿಸಿ, ಉನ್ನತ ಸ್ಥಾನಗಳನ್ನು ಗಳಿಸಿದರೆ ವರ್ಗ ತಾರತಮ್ಯ ಹೊರಟು ಹೋಗಲಿದೆ. ಜಾತಿ ವ್ಯವಸ್ಥೆಯಲ್ಲಿ ದಲಿತ, ಶೂದ್ರರಾಗಿ ಹುಟ್ಟಿದರೇ, ನೀವು ಎಷ್ಟೇ ಶ್ರೀಮಂತರಾಗಿ, ವಿದ್ಯಾವಂತರಾಗಿ, ಏನೇ ಸಾಧನೆ ಮಾಡಿದರೂ ನೀವು ಅಸ್ಪಶ್ಯರೇ ಆಗಿರುತ್ತೀರಾ. ನಿಮ್ಮನ್ನು ಯಾರು ಕರೆದು ಜನಿವಾರ ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶ ಹಿಂದುಳಿವಿಕೆಗೆ ಜಾತಿ ವ್ಯವಸ್ಥೆಯೇ ಕಾರಣವಾಗಿದೆ. ಸಾವಿರಾರು ವರ್ಷಗಳಿಂದ ದಲಿತ, ಶೂದ್ರರಿಗೆ ವಿದ್ಯೆ, ಅಧಿಕಾರಿ, ಆಸ್ತಿ ಗಳಿಕೆಗೆ ವಂಚನೆ ಮಾಡಲಾಗಿದೆ. ಹೀಗಾಗಿ ಬಹುಸಂಖ್ಯಾತ ಜನರು ಹಿಂದುಳಿದಿದ್ದು, ದೇಶವೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜಾತಿ ವ್ಯವಸ್ಥೆ ಹೊಗಲಾಡಿಸಲು ಬೇಕಾದಷ್ಟು ಮಂದಿ ಹೋರಾಡಿದ್ದಾರೆ. ವೈದಿಕ ಕಾಲದಿಂದಲೂ ಜಾತಿ ವ್ಯವಸ್ಥೆ ಬುದ್ಧ, ಬಸವಣ್ಣ, ಭಕ್ತಿ ಚಳವಳಿಯಲ್ಲಿ ದಾಸರು, ಕಬೀರರು, ಶಿಶುನಾಳ ಶರೀಫರು, ರವಿದಾಸ್ ಪ್ರಯತ್ನ ಪಟ್ಟಿದ್ದಾರೆ. ಇವರು ಪ್ರಯತ್ನದ ಸಂದರ್ಭದಲ್ಲಿ ಸ್ವಲ್ಪ ಸಮಯಕ್ಕೆ ಜಾತಿ ವ್ಯವಸ್ಥೆ ದುರ್ಬಲಗೊಂಡAತೆ ಕಂಡರೇ ಮತ್ತೆ ಯಥಾಸ್ಥಿತಿಗೆ ಮರಳಿ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿದೆ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಮೂಲಕ ಬಲ ತುಂಬಲಾಗುತ್ತಿದೆ. ಇದರ ಜೊತೆಗೆ ಕೆಲವು ಯೋಜನೆಗಳನ್ನು ರೂಪಿಸಿ ಸಮಾಜ ಮುಖ್ಯವಾಹಿನಿಗೆ ತರಬೇಕಿದೆ. ಈ ಕೆಲಸ ಮಾಡಲು ದತ್ತಾಂಶಗಳು ಬಹಳ ಮುಖ್ಯ. ಸಮುದಾಯಗಳ ಸ್ಥಿತಿಗತಿ ಅರಿಯಬೇಕು. ಹೀಗಾಗಿ ಜಾತಿ ಸಮೀಕ್ಷೆ ಅತ್ಯಂತ ಮುಖ್ಯ ಎಂದರು.
ಜಾತಿ ಸಮೀಕ್ಷೆ ಧರ್ಮ ಹೊಡೆಯಲ್ಲ: ಜಾತಿ ಸಮೀಕ್ಷೆ ನಡೆಸುವಾಗಲೂ ಪ್ರಬಲ ಸಮುದಾಯಗಳು ವಿರೋಧ ಮಾಡಿಕೊಂಡು ಬರುತ್ತಿದ್ದಾರೆ. ಹಿಂದುಳಿದವರಿಗೆ ಹಾಗೂ ದಲಿತರಿಗೆ ಸಾವಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ಮೀಸಲಾತಿ ಕೊಡಲಾಗುತ್ತದೆ. ?ಂರು ಹಿಂದುಳಿದಿರುತ್ತಾರೋ ಅವರಿಗೆ ಶಕ್ತಿ ತುಂಬಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ನಮ್ಮ ಸಂವಿಧಾನ ಕೂಡ ಹೇಳುತ್ತದೆ ಎಂದು ಹೇಳಿದರು.
ಜಾತಿ ಸಮೀಕ್ಷೆಗೆ ಮುಂದಾದಾಲೆಲ್ಲಾ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಅಂದಿನ ಆಳರಸರ ಕಾಲದಲ್ಲೂ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ನುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ವಿರೋಧ ವ್ಯಕ್ತವಾಗಿತ್ತು.ಈಗಲೂ ಪ್ರಬಲ ವರ್ಗದಿಂದಲೇ ಈ ಸಮೀಕ್ಷೆ ವಾಡಲು ವಿರೋಧ ವ್ಯಕ್ತವಾಗುತ್ತಿದೆ. ಈ ಸಮೀಕ್ಷೆಯಿಂದ ಮುಂದುವರಿದಿರುವ ಜಾತಿಗಳನ್ನು ತುಂಬಾಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಸಮುದಾಯಗಳನ್ನು ತುಂಬಲು ಸಮೀಕ್ಷೆ ಮಾಡುತ್ತಿಲ್ಲ. ಅಲ್ಲದೇ ಸಮಾಜ ಹಾಗೂ ಜಾತಿಗಳನ್ನು ಒಪುವುದಿಲ್ಲ. ಬದಲಾಗಿ ಸಮಾಜ ಒಗ್ಗೂಡುತ್ತದೆ ಎಂದರು.
ಇನ್ಛೋಸಿಸ್ ನಾರಾಯಣಮೂರ್ತಿ ದಂಪತಿ ಕೂಡ ಹಿಂದುಳಿದ ವರ್ಗಗಳ ಸಮೀಕ್ಷೆಯಾಗಲ್ಲಿ ಭಾಗಿಯಾಗಲ್ಲ ಎಂದಿರುವುದು ಸರಿಯಲ್ಲ. ಈ ಮೂಲಕ ಮುಂದುವರಿದ ಸಮುದಾಯದವರು ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರೆಲ್ಲ ಎಲ್ಲ ಸೌಲಭ್ಯವನ್ನು ಅನುಭವಿಸಿರುವವರು. ಜಾತಿ ಸಮೀಕ್ಷೆಯಿಂದ ತಮಗೆ ಸೌಲಭ್ಯಗಳು ಮೊಟಕಾಗುತ್ತವೆ ಎಂದು ಅನುಕೂಲ ಪಡೆದುಕೊಂಡಿರುವವರು ವಿರೋಧ ವಾಡುತ್ತಿದ್ದಾರೆ. ಹಾಗಾಗಿ ಜಾತಿ ಸಮೀಕ್ಷೆ ಪರವಾಗಿ ಹಿಂದುಳಿದ ವರ್ಗಗಳು ಧ್ವನಿ ಎತ್ತಬೇಕು. ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಸಮಾಜದಲ್ಲಿ ಎಲ್ಲರೂ ದುರ್ಬಲರೆಂದು ಗುರುತಿಸಲು ದತ್ತಾಂಶ ಬಹಳ ಮುಖ್ಯ. ಇದಕ್ಕೆ ಸಮೀಕ್ಷೆ ಅತ್ಯಗತ್ಯ. ಹಿಂದುಳಿದ ವರ್ಗದವರು ಹಿಂದುಳಿದಿದ್ದಾರೆ, ಅವರ ಸಾವಾಜಿಕ ಹಾಗೂ ಔದ್ಯೋಗಿಕ ಸ್ಥಿತಿ ಏನು ಎಂದು ತಿಳಿದುಕೊಂಡರೆ ಹಿಂದುಳಿದ ವರ್ಗದವರಿಗೆ ಬಲ ತುಂಬಲು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಎಲ್ಲಾ ಹಿಂದುಳಿದವರು ಒಗ್ಗಟ್ಟಿನಿಂದ ಈ ಸಮೀಕ್ಷೆ ಬೇಕು ಎಂದು ಕೇಳಬೇಕು. ಇದು ನಮ್ಮ ಅನುಕೂಲಕ್ಕಾಗಿ ಸರ್ಕಾರ ಮಾಡುತ್ತಿರುವುದು ಎಂದು ಇತರರಿಗೆ ನೀವು ಅರಿವು ಮೂಡಿಸಬೇಕು. ಒಗ್ಗಟ್ಟಿನಿಂದ ಇದ್ದರೆ ವಾತ್ರ ಜಾತಿ ಸಮೀಕ್ಷೆ ಫಲಿತಾಂಶವಾಗುತ್ತದೆ ಎಂದರು.
———
ಬಾಕ್ಸ್
ಕೇಂದ್ರ ಸಚಿವ ವಿ.ಸೋಮಣ್ಣ ಜಾತಿ ಸಮೀಕ್ಷೆಯಿಂದ ಮೇಲ್ಜಾತಿ ತುಳಿಯಲಾಗುತ್ತದೆ ಎಂದಿದ್ದಾರೆ. ಜಾತಿಯಲ್ಲಿ ಮೇಲು-ಕೀಳು ಎಂಬ ಮನಸ್ಥಿತಿಯೇ ಮೊದಲು ಖಂಡಿಸಬೇಕು. ಯಾವ ಜಾತಿಯು ಶ್ರೇಷ್ಠವೂ ಅಲ್ಲ-ಕನಿಷ್ಠವೂ ಅಲ್ಲ. ಕೆಲವು ಜಾತಿಗಳು ಅವಕಾಶ ಸಿಕ್ಕಿ ಮುಂದುವರಿದಿವೆ. ಆದರೆ, ಸಾಮಾಜಿಕ ಅವಕಾಶ ವಂಚಿತ ಹಿಂದುಳಿದಿದ್ದೇವೆ. ಹೀಗಾಗಿ ಹಿಂದುಳಿದವರು ನಮಗೂ ಅವಕಾಶ ಕೊಡಿ ಎಂದರೆ ಹೇಗೆ ಜಾತಿ ತುಳಿಯಲು ಸಾಧ್ಯ? ವಿ.ಸೋಮಣ್ಣ ಅವರ ಈ ಪದ ಬಳಕೆ ಅವರಲ್ಲಿ ಜಾತಿಯ ಶ್ರೇಷ್ಠತೆ ಮನೋಭಾವ ಇದೆ ತೋರಲಿದೆ.
-ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ.
ಬಾಕ್ಸ್
ನನ್ನ ಹೇಳಿಕೆಗೆ ಈಗಲೂ ಬದ್ಧ: ಯತೀಂದ್ರ
ಮೈಸೂರು: ನಾಯಕತ್ವ ವಿಚಾರವಾಗಿ ನಾನು ಹೇಳಿದ ಮಾತಿಗೆ ಈಗಲೂ ಬದ್ಧ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿಯೂ ಇಲ್ಲ, ಡಿಸೆಂಬರ್ ಕ್ರಾಂತಿ ಯಾವ ಕ್ರಾಂತಿಯೂ ಇಲ್ಲ. ೫ ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಈಗಿನ ಪರಿಸ್ಥಿತಿಗೆ ಸಿದ್ದರಾಮಯ್ಯನವರೇ ೫ ವರ್ಷ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು.
ನಾಯಕತ್ವ ವಿಚಾರವಾಗಿ ಹೇಳಿದ ಮಾತಿಗೆ ಈಗಲೂ ಬದ್ದ. ನನ್ನ ಹೇಳಿಕೆಗೆ ನಾನು ಸ್ಪಷ್ಟೀಕರಣ ಕೂಡ ಕೊಟ್ಟಿದ್ದೇನೆ. ಪಕ್ಷ ನನಗೆ ನೋಟಿಸ್ ಕೊಟ್ಟರೆ ಉತ್ತರ ಕೊಡುತ್ತೇನೆ. ನನ್ನ ಹೇಳಿಕೆಯನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುತ್ತೇನೆ. ಮಾದ್ಯಮಗಳ ಮುಂದೆ ಹೇಳಿಕೆ ನೀಡಲ್ಲ ಎಂದರು.
