ಪಬ್ಲಿಕ್ ಅಲರ್ಟ್
ಮೈಸೂರು:ಬೆಳಗಾವಿ ನಗರದಲ್ಲಿ ಮಾತನಾಡುವ ವೇಳೆ ಮಾಜಿ ಸಂಸದ ಉಮೇಶ್ ಕತ್ತಿ ಅವರು ಬೇಡ ಸಮುದಾಯವನ್ನು ನಿಂದಿಸಿದರೆAದು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಅವರು ಬ್ಯಾಡ ಎಂದರೇ ಹೊರತು ಬೇಡ ಎನ್ನಲಿಲ್ಲ. ಬೇಡ ಎಂಬುದು ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ ಎಂದು ಅಖಿಲ ಭಾರತ ಆದಿವಾಸಿ (ಪ.ಪಂ) ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಸ್ವಾಮಿ ತಿಳಿಸಿದರು.
ಬ್ಯಾಡ ಎಂಬುದು ಇತರೆ ಒಬಿಸಿ ಪಟ್ಟಿಯಲ್ಲಿದೆ. ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸುತ್ತಿರುವವರು ಬೇಡ ಎಂದು ಹೇಳಿ ಮಾಜಿ ಸಂಸದ ನಿಂದಿಸುತ್ತಿದ್ದಾರೆ ಎಂದಿದ್ದಾರೆ. ಆದರೆ ಬ್ಯಾಡ, ಬೇಡ, ಬೇಡರ್ ನಡುವೆ ವ್ಯತ್ಯಾಸವಿದೆ. ಬ್ಯಾಡ ಎಂಬುದು ಒಬಿಸಿ ಪಟ್ಟಿಯಲ್ಲಿರುವ ಕಾರಣ ಮಾಜಿ ಸಂಸದರ ವಿರುದ್ಧದ ದೂರುಗಳು ನಿಲ್ಲುವುದಿಲ್ಲ. ವಾಸ್ತವವಾಗಿ ನಾಯಕ ಸಮುದಾಯ ಮೊದಲಾದವರ ಶೋಷಣೆಯನ್ನು ಮೂಲ ಎಸ್‌ಟಿಗಳು ಅನುಭವಿಸಬೇಕಾಗುತ್ತಿದೆ. ನಿಜವಾದ ಮೂಲ ನಿವಾಸಿಗಳೇ ಸುಮ್ಮನಿರುವಾಗ ಬೇಡ ಎಂಬ ಪದ ಬಳಸಿಕೊಂಡು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನಿತರ ಪದಾಧಿಕಾರಿಗಳಾದ ವೈ.ಕೆ. ಸುಬ್ರಮಣ್ಯ, ರಾಜು, ದೇವಮ್ಮ, ಮಂಗಳಮ್ಮ ಇದ್ದರು.
