ನಾಳೆ ಕನ್ನಡ ಗಾಯನ ರಸಮಂಜರಿ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಡಾ. ನಯನ ಮ್ಯೂಸಿಕಲ್ ಗ್ರೂಪ್ ವತಿಯಿಂದ ನ. ೧ ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಧ್ಯಾಹ್ನ ೩.೩೦ ರಿಂದ ರಾತ್ರಿ ೯.೩೦ ರವೆಗೆ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕನ್ನಡ ಚಲನ ಚಿತ್ರಗೀತೆಗಳ ಕರೋಕೆ ಗಾಯನದ ರಸಮಂಜರಿ  ಆಯೋಜಿಸಲಾಗಿದೆ.
ಕನ್ನಡದ ಹಿರಿಮೆ ಕುರಿತ ಹಾಗೂ ೯೦ ರ ದಶಕ ಮತ್ತು ಇತ್ತೀಚಿನ ಸುಮಧುರವಾದ ಸುಮಾರು ೫೩ ಹಾಡುಗಳನ್ನು ೨೧ ಮಂದಿ ಗಾಯಕ, ಗಾಯಕಿಯರು ಹಾಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ  ಎಂದು ಆಯೋಜಕರಾದ ಡಾ. ನಯನ ಗುರುವಾರ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಭೈರಿ ಕಾರ್ಯಕ್ರಮವ ಉದ್ಘಾಟಿಸುವರು. ಚನ್ನಕೇಶವ ವಿದ್ಯಾಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಅಧ್ಯಕ್ಷತೆ ವಹಿಸುವರು. ಎಚ್.ವಿ. ರಾಜೀವ್, ಅಂಶಿ ಪ್ರಸನ್ನಕುಮಾರ್, ಶಂಕರ್ ದೇವನೂರು, ರಘುರಾಂ ವಾಜಪೇಯಿ, ಸ್ವಾಮಿ, ಚನ್ನಮಲ್ಲಯ್ಯ, ಪಾರ್ಥಸಾರಥಿ, ರವಿ ಶಾಸ್ತ್ರಿ ಮುಖ್ಯ ಅತಿಥಿಗಳಾಗಿರುವರು ಎಂದರು.
ಮ್ಯೂಸಿಕಲ್ ಗ್ರೂಪ್‌ನ ಚನ್ನಮಲ್ಲಯ್ಯ, ಶ್ರೀಕಂಠರಾವ್, ರಾಜ್‌ಕಿಶೋರ್ ಸುದ್ದಿಗೋಷ್ಠಿಯಲ್ಲಿ  ಹಾಜರಿದ್ದರು.

Share This Article
Leave a Comment