ಸೂಕ್ಷ್ಮ ಮತ್ತು ಅರಣ್ಯಾಧಾರಿತ ಆದಿವಾಸಿ ಸಮುದಾಯಗಳ ಮುಖಂಡರ ಸಮಾಲೋಚನಾ ಕಾರ್ಯಾಗಾರ
ಮೈಸೂರು,ಜ.5(ಕರ್ನಾಟಕ ವಾರ್ತೆ):- : ಇಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳಲ್ಲಾಗಿದ್ದ ಪಿ.ವಿ.ಟಿ.ಜಿ ಮತ್ತು ಅರಣ್ಯಾಧಾರಿತ ಅದಿವಾಸಿ ಸಮುದಾಯಗಳ ಯುವಕ-ಯುವತಿಯರು, ಮುಖಂಡರು ಹಾಗೂ ಮಹಿಳಾ ಪ್ರತಿನಿಧಿಗಳ ಒಂದು ದಿನದ “ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಗಾರ” ದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ವಹಿಸಿ ಸಭೆಯನ್ನು ನಡೆಸಿಕೊಟ್ಟರು.
ಬುಡಕಟ್ಟು ಸಮುದಾಯಗಳ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಬುಡಕಟ್ಟು ಸಮುದಾಯದ ಯುವಕ ಯುವತಿಯರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಯನ್ನು ಪರಿಶೀಲಿಸಿದರು.
ಬುಡಕಟ್ಟು ಸಮುದಾಯದ ಮುಖಂಡರು ಬುಡಕಟ್ಟು ಸಮುದಾಯ ವಾಸಿಸುವ ಸ್ಥಳಗಳಲ್ಲಿ ಇರುವ ಶೈಕ್ಷಣಿಕ, ವಸತಿ, ಉದ್ಯೋಗ, ಕುಡಿಯುವ ನೀರು, ವಿದ್ಯುತ್, ರಸ್ತೆ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಸಚಿವರು ಅಧಿಕಾರಿಗಳು ನಿಯಮಾನುಸಾರ ಅಹವಾಲುಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ತಿಳಿಸಿದರು.
ಬುಡಕಟ್ಡು ಸಮುದಾಯದವರಿಗೆ ಹೆಚ್ಚಿನ ಕೌಶಲ್ಯಾಧರಿತ ತರಬೇತಿಗಳನ್ನು ಹೆಚ್ಚುಗೊಳಿಸಿ.ಪೌಷ್ಠಿಕಾಂಶ ಆಹಾರ ಸೇವನೆಯ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಯೋಗೇಶ್.ಟಿ ಅವರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬುಡಕಟ್ಟು ಸಮುದಾಯಗಳು ಮತ್ತು ಅದಿವಾಸಿ ಸಮುದಾಯದ ಯುವಕ ಯುವತಿಯರು ಉಪಸ್ಥಿತರಿದ್ದರು.
