ಪಬ್ಲಿಕ್ ಅಲರ್ಟ್ ನ್ಯೂಸ್:-ಬಿಜೆಪಿ ಮುಖಂಡರು ಹಾಗೂ ಚಲನಚಿತ್ರ ನಾಯಕ ನಟರಾದ ಎಸ್ ಜೈಪ್ರಕಾಶ್ ಜಿಪಿ ರವರು ಇಂದು ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿ ಚಾಮರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕಾರ್ಯಕರ್ತರು ಗುಂಪುಗಳಾಗುತ್ತಿದ್ದಾರೆ ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜೇಂದ್ರ ರವರು ಶಿಸ್ತು ಸಮಿತಿಯ ನೆರವಿನಿಂದ ಮಧ್ಯಪ್ರವೇಶಿಸಿ ಎಲ್ಲರಿಗೂ ಬುದ್ಧಿವಾದ ಹೇಳಬೇಕೆಂದು ಎಸ್ ಜಯಪ್ರಕಾಶ್ ರವರು ವಿಜಯೇಂದ್ರ ರವರಲ್ಲಿ ಮನವಿ ಮಾಡಿದ್ದಾರೆ ಚುನಾವಣೆ ಇನ್ನೂ ದೂರವಿರುವುದರಿಂದ ಉಮೇದರಿಕೆ ಬಗ್ಗೆ ಈಗಲೇ ಚರ್ಚಿಸುವ ಮತ್ತು ಲಾಬಿ ಮಾಡುವ ಅವಶ್ಯಕತೆ ಇಲ್ಲವೆಂದು ಎಷ್ಟೇ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ ಈ ವಿಚಾರವುಗಳು ತಮ್ಮ ಗಮನಕ್ಕೆ ಈಗಾಗಲೇ ಬಂದಿರುವುದಾಗಿ ಮತ್ತು ಕೆಲವು ಜಿಲ್ಲೆಗಳ ತಮ್ಮ ಪ್ರವಾಸ ಮುಗಿದ ನಂತರ ಇದರ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದೆಂದು ವಿಜೇಂದ್ರ ರವರು ಎಸ್ ಜಯಪ್ರಕಾಶ್ ಅವರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ
