ಪಬ್ಲಿಕ್ ಅಲರ್ಟ್ ನ್ಯೂಸ್ :-ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಕೂಡಿದಂತ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು: ಡಾ: ಹೆಚ್.ಸಿ ಮಹದೇವಪ್ಪ
ಮೈಸೂರು,ಜ.17(ಕರ್ನಾಟಕ ವಾರ್ತೆ):- :
ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಕೂಡಿದ ವಿಚಾರಗಳ ಮುಖಂತರ ದೇಶದ ಜನರನ್ನ ಸಿದ್ದಮಾಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.
ಇಂದು 2026ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬಹುರೂಪಿ ಬಾಬಾಸಾಹೇಬ್-ಸಮತೆಯೆಡೆಗೆ ನಡಿಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಕಾರ್ಯಕ್ರಮ ದಲ್ಲಿ ಮಾತನಾಡಿ ಅವರು ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಶಾಹು ಮಹಾರಾಜ್ ಅವರು ಕಟ್ಟಿದಂತಹ ಸಮಾಜ ಸತ್ಯಶೋಧ ಸಂಘಟನೆ ಮತ್ತು ಹೋರಾಟದಿಂದ ಕೂಡಿದೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಜುಲೈ 20, 1924 ರಂದು ಬಾಂಬೆಯಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹಾಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗಾಗಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ವನ್ನು ಸ್ಥಾಪಿಸಿದರು ಎಂದರು.
ಸ್ವಾತಂತ್ರ್ಯ ಬಂದು 79 ವರ್ಷ ಆದರೂ ಇನ್ನು ಸಾಮಾಜಿಕ ಭಹಿಷ್ಕರ ಹಾಗೂ ಮರ್ಯಾಧೆ ಹತ್ಯೆ ನಡೆಯುತ್ತಲೇ ಇದೇ ಇದಕ್ಕಾಗಿಯೆ ಒಂದು ಕಾಯ್ದೆ ಮಾಡಬೇಕಾಗಿದೆ ಎಂದು ಹೇಳಿದರು.
ವಿಧಾನ ವಿಧಾನ ಪರಿಷತ್ ಸದಸ್ಯರಾದ ಡಾ: ಕೆ ಶಿವಕುಮಾರ್ ಅವರು ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಕಡೆ ಚಿಂತಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಯಾಗುತ್ತದೆ ಎಂದರು. .
ಈ ಬಾರಿ ಮೈಸೂರಿನಲ್ಲಿ ಆಯೋಜಿಸಿರುವ ಬಹುರೂಪಿ ನಾಟಕವು ಉತ್ತಮ ಸಂದೇಶ ನೀಡುತ್ತಿದ್ದು, ದೇಶಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಬುದ್ದಿಜೀವಿಗಳಿಂದ, ವಿದ್ಯಾರ್ಥಿಗಳು ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ.ಎನ್.ಕೆ.ಲೋಕನಾಥ್ ಅವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮನ್ಯ ವ್ಯಕ್ತಿ ಶಿಕ್ಷಣದಿಂದ ಎಷ್ಟೊಂದು ಬದಲಾದರು ಎಂದು ನಾವು ತಿಳಿದು ಕೊಳ್ಳಬೇಕು.
ಶಿಕ್ಷಣ ಜೀವನವನ್ನು ಬದಲಾವಣೆ ಮಾಡುತ್ತದೆ, ಹಾಗೆಯೇ ತುಂಬಾ ಚೆನ್ನಾಗಿ ಶಿಕ್ಷಣ ಪಡೆದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಉದಾಹರಣೆ ಎಂದು ಹೇಳಿದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ಮಾತನಾಡಿ ಲಕ್ಷಾಂತರ ಜನ,ಕವಿಗಳು, ಲೇಖಕರು, ಕಲಾವಿದರು,, ಹಾಡುಗಾರರು ಚಲನಚಿತ್ರ ನಿರ್ದೇಶಕರು ನಟರು, ಚಿಂತಕರು, ವಿದ್ವಾಂಸರು ಬಾಬಾ ಸಾಹೇಬರ ಪ್ರಭಾವದಿಂದ ತಮ್ಮ ತಮ್ಮ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ ತಮ್ಮಅಭಿವ್ಯಕ್ತಿಗಳನ್ನ ಕಟ್ಟಿಕೊಳ್ಳುತ್ತಾ ಇದ್ದಾರೆ.
ಪ್ರತಿರೋಧ ಹಾಗೂ ಉಪಾಶಕುನ ಈ ಎರಡು ಕೂಡ ಅಭಿವ್ಯಕ್ತಿಗಳಲ್ಲಿ ಬಹಳ ಗಟ್ಟಿಯಾಗಿ ಕಾಣಿಸುತ್ತ ಬಂದಿದೆ. ಸಮಾಜದ ಅನಿಷ್ಠ ಪದ್ಧತಿಗಳಿಂದ ಜನರಿಗೆ ಆದ ಗಾಯಗಳಿಗೆ ಔಷಧಿಯನ್ನು ಬಾಬಾ ಸಾಹೇಬರು ನೀಡಿದ ಸಂವಿಧಾನದಿಂದ ಹಚ್ಚಲಾಗಿದೆ, ಮುಂದೆ ಆಗುವ ಪ್ರತಿರೋದ ಗಾಯಗಳಿಗೆ ಬಾಬಾ ಸಾಹೇಬರ ಮಾರ್ಗದ ಮೂಲಕವೇ ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ದಿ ವೈರ್ ಸಂಸ್ಥಾಪಕ ಸಂಪಾದಕರಾದ ಸಿದ್ದಾಥ್೯ ವರದರಾಜನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್.ನರೇಂದ್ರಕುಮಾರ್, ರಂಗಾಯಣದ ಉಪ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್, ಮತ್ತಿತರರು ಉಪಸ್ಥಿತರಿದ್ದರು.
