ಒಬ್ಬ ವ್ಯಕ್ತಿ ಸಮಾಜದಲ್ಲಿ ಸುಂದರವಾಗಿ ಕಾಣಲು ಸವಿತಾ ಸಮಾಜದ ಕಲೆ ಮತ್ತು ಶ್ರಮ ಅತಿ ಮುಖ್ಯ- ಸಿ.ಎನ್.ಮಂಜೇಗೌಡ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಒಬ್ಬ ವ್ಯಕ್ತಿ ಸಮಾಜದಲ್ಲಿ ಸುಂದರವಾಗಿ ಕಾಣಲು ಸವಿತಾ ಸಮಾಜದ ಕಲೆ ಮತ್ತು ಶ್ರಮ ಅತಿ ಮುಖ್ಯ- ಸಿ.ಎನ್.ಮಂಜೇಗೌಡ
ಮೈಸೂರು,ಫೆ.13 (ಕರ್ನಾಟಕ ವಾರ್ತೆ):- ಒಬ್ಬ ವ್ಯಕ್ತಿ ಸಮಾಜದಲ್ಲಿ ಸುಂದರವಾಗಿ ಕಾಣಲು ಸವಿತಾ ಸಮಾಜದವರ ಕಲೆ ಮತ್ತು ಶ್ರಮ ಅತಿಮುಖ್ಯವಾಗಿದೆ ಎಂದು ವಿಧಾನ ಪರಿಷತ್ತು ಶಾಸಕರಾದ ಸಿ.ಎನ್.ಮಂಜೇಗೌಡ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ, ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಲಾಮಂದಿರ ಕಿರುರಂಗಮoದಿರದಲ್ಲಿ ಸವಿತಾ ಮಹರ್ಷಿ ಜಯಂತಿಯಲ್ಲಿ ಅವರು ಮಾತನಾಡಿದರು. ಜನರು ಸಮಾಜದಲ್ಲಿ ಸುಂದರವಾಗಿ, ಆಕರ್ಷಕವಾಗಿ ಕಾಣುವುದಕ್ಕೆ ಕಾರಣಕರ್ತರು ಸವಿತಾ ಸಮಾಜದವರು ಇವರನ್ನು ಮರೆಯಬಾರದು ಎಂದು ಹೇಳಿದರು.

ಸವಿತಾ ಮಹರ್ಷಿ ಅವರು ಸೂರ್ಯವಂಶದ ಮೂಲ ಪುರುಷರು ಆಗಿದ್ದಾರೆ. ಸವಿತಾ ಮಹರ್ಷಿ ಅವರ ಇತಿಹಾಸವನ್ನ ಓದುವುದರ ಮೂಲಕ ಈ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಸವಿತಾ ಮಹರ್ಷಿ ಅವರ ಸಾಧನೆಗಳನ್ನು ತಿಳಿದುಕೊಂಡು ಸಮಾಜವನ್ನ ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ನಾವು ಗುರುತಿಸಿ ಕೊಳ್ಳಬೇಕು ಅಂದರೆ ಇಂದಿನ ಕಾಲದಲ್ಲಿ ಜಾತಿ, ಧರ್ಮ ಮುಖ್ಯವಾಗಿ ಬಿಟ್ಟಿದೆ ಎಂದು ಅಭಿಪ್ರಾಯಪಟ್ಟರು. ಸವಿತಾ ಮಹರ್ಷಿ ಅವರ ಬಗ್ಗೆ ಹಾಗೂ ಈ ಸಮಾಜದ ಜಯಂತಿ ಆಚರಣೆ ಗಳು ತಿಳಿಸಿ ನಿಮ್ಮ ಮಕ್ಕಳನ್ನು ಹಾಗೂ ನಿಮ್ಮ ಕುಟುಂಬದವರು ಜಯಂತಿಗಳ ಆಚರಣೆಗೆ ಬರಬೇಕು ಸವಿತಾ ಸಮಾಜಕ್ಕೆ ಸರ್ಕಾರ 18 ಕೋಟಿ ಅನುದಾನವನ್ನು ನೀಡಿದೆ ಎಂದು ಹೇಳಿದರು.

ಸವಿತಾ ಸಮಾಜದ ಅಧ್ಯಕ್ಷರಾದ ಮುತ್ತುರಾಜ್ ಅವರು ಮಾತನಾಡಿ ಅಂದು ಡಿ ದೇವರಾಜ ಅರಸು ಹಾಕಿ ಕೊಟ್ಟಂತಹ ದಾರಿಯಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲರಿಗೂ ಮೀಸಲಾತಿಯನ್ನು ಹಾಕಿ ಕೊಟ್ಟಂತಹ ಮಹಾನ್ ವ್ಯಕ್ತಿ. ಸವಿತಾ ಸಮಾಜದ ವರ್ಗದ ಜನರು ಹಿಂದಿನ ಕಾಲದಲ್ಲಿದ್ದಂತಹ ಕೆಟ್ಟ ವ್ಯವಸ್ಥೆಯ ಬಗ್ಗೆ ಗಮನಹರಿಸದೆ ವರ್ತಮಾನದಲ್ಲಿ ನಾವು ಜೀವನ ನಡೆಸಬೇಕು ಎಂದರು.
ಇಂದಿನ ಜೀವನ ಬಹಳ ಚಿಕ್ಕದು ಜೀವನದಲ್ಲಿ ಎಲ್ಲರನ್ನೂ ಪ್ರೀತಿಸಬೇಕು ಯಾವುದೇ ಜಾತಿ ಧರ್ಮ ಎಲ್ಲವನ್ನು ಬಿಟ್ಟು ಒಂದಾಗಿ ಬದುಕಬೇಕು. ಸಮಾಜದಲ್ಲಿ ನಾವು ಸ್ವಾಭಿಮಾನದಿಂದ ಬದುಕಬೇಕು ಹೋರಾಟಗಳಿಂದ ನಮ್ಮ ಹಕ್ಕುಗಳನ್ನು ಪಡೆಯಬೇಕು. ಸವಿತಾ ಸಮುದಾಯದ ಮೇಲೆ ನಂಬಿಕೆ ಮತ್ತು ಪ್ರೀತಿ ಇರಬೇಕು. ನಮ್ಮ ವೃತ್ತಿಯ ಮೇಲೆ ನಮಗೆ ಅಪಾರವಾದ ಪ್ರೀತಿ ಗೌರವ ಇರಬೇಕು. ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡಿ ಮಕ್ಕಳ ಬದುಕಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ. ಸಂವಿಧಾನ ಹಾಕಿಕೊಟ್ಟಂತಹ ದಾರಿಯಲ್ಲಿ ಇಂದು ನಾವು ನಡೆಯಬೇಕೆಂದು ಹೇಳಿದರು.

ಸಾಹಿತಿಗಳು ಮತ್ತು ಅಂಕಣಕಾರದ ಮೈ. ನಾ ಲೋಕೇಶ್ ಅವರು ಮಾತನಾಡಿ ಇಂದು ಎಲ್ಲರೂ ಒಂದೇ ಕಡೆ ಸೇರುವುದೇ ವಿಶೇಷವಾದ ದಿನ. ಸವಿತಾ ಮಹರ್ಷಿಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಹಡಪ ಅಂದರೆ ಕ್ಷೌರದ ವಸ್ತುಗಳು ಎಂದರ್ಥ ಸವಿತಾ ಮಹರ್ಷಿಯವರು ಅಂದಿನ ಯುಗದಲ್ಲಿ ತುಂಬಾ ಪ್ರಾವಿಣ್ಯತೆಯನ್ನು ಹೊಂದಿದವರು ಎಂದರು.

ಭಕ್ತಿ ಭಂಡಾರಿ ಬಸವಣ್ಣನವರ ಅನುಭವ ಮಂಟಪದಲ್ಲಿ ಒಬ್ಬರಾಗಿದ್ದವರು ಈ ಹಡಪದ ಅಣ್ಣಪ್ಪನವರು ಅಂದು ಅನುಭವ ಮಂಟಪದ ಉಸ್ತುವಾರಿ ವಯಿಸಿದವರು ಈ ಹಡಪದ ಅಣ್ಣಪ್ಪನವರು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅಣ್ಣಪ್ಪನವರ ದರ್ಶನವನ್ನು ಪಡೆದು ಬರಬೇಕೆಂದು ಬಸವಣ್ಣವರು ಹೇಳಿದರಂತೆ. ಇವರು 250ಕ್ಕೂ ಹೆಚ್ಚು ವಚನ ರಚಿಸಿದ್ದಾರೆ ಮತ್ತು ಇವರ ಹೆಂಡತಿ 200ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಮೌರ್ಯ, ಕಲಚೂರಿ, ನಂದರು ಸೂರ್ಯವಂಶದ ವಂಶಸ್ಥರು ಅದರಂತೆ ಸವಿತಾ ಅಂದರೆ ಸೂರ್ಯವಂಶದವರು.

ಇoದು ಸಮಾಜದಲ್ಲಿ ಸಮುದಾಯಗಳ ಸಂಘಟನೆ ಬಹಳ ಮುಖ್ಯ ಕಾರ್ಯಕ್ರಮಗಳಿಗೆ ಕುಟುಂಬವನ್ನು ಕರೆ ತರಬೇಕು. ಅವರಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವಂತಹ ಕೆಲಸ ಆಗಬೇಕು. ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕ ಕುಟೀರ ನಿರ್ಮಾಣ ಮಾಡಬೇಕು. ಸವಿತ ಸಮಾಜ ವರ್ಗದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕು ಹಾಗೂ ಹೆಚ್ಚು ವಿದ್ಯಾವಂತರಾಗಬೇಕು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಮುಂದಾಗಬೇಕೆoದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್, ಎನ್.ಆರ್ ನಾಗೇಶ್, ಎಂ. ಡಿ ರಾಜೇಶ್, ಹರೀಶ್ ರೆಡ್ಡಿ, ಆನಂದ್, ನಾಗೇಂದ್ರ, ಮುರುಳಿದರ್, ರಾಮಣ್ಣ, ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment