ಮೈಸೂರಿನಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ದ ಮೊದಲ ದಿನದ ಸ್ಪರ್ಧೆಗಳಲ್ಲಿ ಕೇರಳದ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆಯಿತು

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ದ ಮೊದಲ ದಿನದ ಸ್ಪರ್ಧೆಗಳಲ್ಲಿ ಕೇರಳದ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆದು  ಹತ್ತು ಪ್ರಥಮ ಬಹುಮಾನಗಳನ್ನು ಹಾಗೂ ಒಂದು ದ್ವಿತೀಯ ಬಹುಮಾನವನ್ನು ಪಡೆದು ಒಟ್ಟು 53 ಅಂಕಗಳನ್ನು ಗಳಿಸಿದೆ.ದ್ವಿತೀಯ ಸ್ಥಾನವನ್ನು  ಕರ್ನಾಟಕದ ಅಂಚೆ ವೃತ್ತವು ಐದು ಪ್ರಥಮ ಬಹುಮಾನಗಳನ್ನು ಏಳು ದ್ವಿತೀಯ ಬಹುಮಾನಗಳನ್ನು ಒಂದು ತೃತೀಯ ಬಹುಮಾನವನ್ನು ಪಡೆದಿದ್ದು ಒಟ್ಟು 47 ಅಂಕಗಳನ್ನು ಪಡೆದಿದೆ. ತೃತೀಯ ಸ್ಥಾನವನ್ನು ಒಡಿಶಾ ಅಂಚೆ‌ ವೃತ್ತವು ಎರಡು ಪ್ರಥಮ ಬಹುಮಾನಗಳನ್ನು ಒಂದು ದ್ವಿತೀಯ ಬಹುಮಾನವನ್ನು ಒಂದು ತೃತೀಯ ಬಹುಮಾನವನ್ನು ಪಡೆದಿದ್ದು ಒಟ್ಟು 14 ಅಂಕಗಳನ್ನು ಪಡೆದಿದೆ.
ಕೇರಳ ಅಂಚೆ ವೃತ್ತದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯರ ವಿಭಾಗದಲ್ಲಿ ಶ್ರೀಹರಿ, ಹಿರಿಯರ ವಿಭಾಗದಲ್ಲಿ ತೀರ್ಥ ಪ್ರಕಾಶ್, ಹಿರಿಯರ ವಿಭಾಗದ ಕೊಳಲು ವಾದನ ಮತ್ತು ಮೃದಂಗ ವಾದನದಲ್ಲಿ ವಿಷ್ಣು ವಿಜಯ್ ವಿಜೇತರಾದರು.
ಕರ್ನಾಟಕ ಅಂಚೆ ವೃತ್ತದ ಗಿರೀಶ್ ಆರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಹಿರಿಯರ ವಿಭಾಗಗದಲ್ಲಿ ಪ್ರಥಮ ಸ್ಥಾನವನ್ನು, ಕರ್ನಾಟಕ ಶಾಸ್ತ್ರೀಯ ಶೈಲಿಯ ಲಘು ಸಂಗೀತದ ಕಿರಿಯರ ವಿಭಾಗದಲ್ಲಿ ಚಾರ್ಮಿ ಎಸ್, ಘಟಂ ಮತ್ತು ಮೃದಂಗ ವಾದನದ ಹಿರಿಯರ ವಿಭಾಗದಲ್ಲಿ ಆರ್.ಚಂದ್ರಶೇಖರ್, ಕೊಳಲು ವಾದನದ ಕಿರಿಯರ ವಿಭಾಗದಲ್ಲಿ ಪ್ರಥಮ್ ಕೆ ಆರ್, ವೀಣಾ ವಾದನದ ಹಿರಿಯರ ವಿಭಾಗದಲ್ಲಿ ದೀಕ್ಷಾ.ಜೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕಿರಿಯರ ವಿಭಾಗದಲ್ಲಿ ಅಭಿಜ್ಞ, ವೈಲಿನ್ ವಾದನದ ಹಿರಿಯರ ವಿಭಾಗದಲ್ಲಿ ಪ್ರದ್ಯುಮ್ ಕೌಶಿಕ್. ಸಿ.ಜಿ ಸೇರಿದಂತೆ ಹಲವರು ವಿಜೇತರಾದರು.
ಒಡಿಶಾ ಅಂಚೆ ವೃತ್ತದ ಕುಚುಪುಡಿ ನೃತ್ಯದ ಕಿರಿಯರ ವಿಭಾಗದಲ್ಲಿ ಹೃದ್ಯ ಮಣಿಕರಣಿಕ, ಹಿರಿಯರ ವಿಭಾಗದಲ್ಲಿ ಸಮೀಕ್ಷಾ ಮೋಹಂತಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಿರಿಯರ ವಿಭಾಗದಲ್ಲಿ ಅಭಿಜಿತ್ ಮಹಾಪಾತ್ರ ಸೇರಿದಂತೆ ಹಲವರು ವಿಜೇತರಾದರು.ಅಂಚೆ ಇಲಾಖೆ ಆಯೋಜಿಸಿರುವ ಮತ್ತು ಕರ್ನಾಟಕ ಅಂಚೆ ವೃತ್ತ ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಸಭೆ ಇಲ್ಲಿನ ಅಂಚೆ ತರಬೇತಿ ಕೇಂದ್ರ  ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ  ನಡೆದಿದ್ದು ಭಾರತದಾದ್ಯಂತ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ ಒಟ್ಟು 335 ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇದು ಅಂಚೆ ನೌಕರರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಪ್ರಮುಖ ವೇದಿಕೆ ಎಂದು ಪರಿಗಣಿಸಲಾಗಿದೆ.

Share This Article
Leave a Comment