ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು: ಇಂದಿನ ಡಿಜಿಟಲ್ ುುಂಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳನ್ನು ಎದುರಿಸಿ ಎಲ್ಲರಿಗೂ ವಾದರಿಾಂಗುವ ನಿಟ್ಟಿನಲ್ಲಿ ಉದ್ದಿಮೆದಾರರು ಬೆಳೆುಂಬೇಕು ಎಂದು ಐಇಡಿಎಸ್ ನಿರ್ದೇಶಕ ಕೆ.ದೇವರಾಜ್ ಸಲಹೆ ನೀಡಿದರು.
ನಗರ ಹೊರ ವಲುಂದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲುಂ, ರಾಜ್ಯ ಮಹಿಳಾ ಉದ್ದಿಮೆದಾರರ ಸಂಘ, ರಾಷ್ಟ್ರೀುಂ ಎಸ್ಸಿ, ಎಸ್ಟಿ ಹಬ್ನ ಸಹೋಂಗದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಅಭಿವೃದ್ಧಿ ಕಾಂರ್ಾಗಾರದಲ್ಲಿ ವಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಜಿಲ್ಲೆುಂ ಕೈಗಾರಿಕಾ ಪ್ರದೇಶಗಳಲ್ಲಿ ಉದ್ದಿಮೆ ಸ್ಥಾಪಿಸಲು ವಿಫುಲ ಅವಕಾಶಗಳಿವೆ. ಕಚ್ಚಾ ವಸ್ತು ಖರೀದಿ, ವಾರಾಟ, ಜಾಗ ಇತ್ಯಾದಿ ಕುರಿತು ಕಾಂರ್ಾಗಾರದಲ್ಲಿ ವಾಹಿತಿ ನೀಡಲಾಗುತ್ತದೆ. ಎಲ್ಲರೂ ಇದರ ಪ್ರೋಂಜನ ಪಡೆುಂಬೇಕು ಎಂದರು.
ಉದ್ದಿಮೆದಾರರಲ್ಲಿ ಪುರುಷರಷ್ಟೇ ಮಹಿಳೆುಂರಿಗೂ ಅವಕಾಶಗಳಿವೆ. ಆದರೆ, ಅದರ ಕಡೆ ಾಂರು ಮುಖ ವಾಡುತ್ತಿಲ್ಲ ಎಂಬುದು ಒಂದೆಡೆಾಂದರೆ, ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿುಂರಿಂಗ್ ಹಾಗೂ ಸರ್ಕಾರಿ ಕೆಲಸದ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಉದ್ದಿಮೆ ಸ್ಥಾಪನೆ ಕಡೆಗೂ ಹೆಚ್ಚು ಆಸಕ್ತಿ ತೋರಿದರೆ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.
ದೈಹಿಕವಾಗಿ, ವಾನಸಿಕವಾಗಿ, ಭಾವನಾತ್ಮಕವಾಗಿ ಮಹಿಳೆುಂರು ಗಟ್ಟಿಾಂಗಿದ್ದರೆ ಾಂವ ಕ್ಷೇತ್ರದಲ್ಲಿ ಬೇಕಿದ್ದರೂ ಭವಿಷ್ಯ ರೂಪಿಸಿಕೊಳ್ಳಬಹುದು. ಾಂವುದೇ ಉದ್ಯಮ ಆರಂಭಿಸುವ ಮುನ್ನ ತರಬೇತಿ ಬೇಕು. ಅದು ಉದ್ಯಮದ ಎಲ್ಲ ಆಾಂಮಗಳನ್ನು ಅರ್ಥೈಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ವಾತನಾಡಿ, ಲಾಭ-ನಷ್ಟ ಎನ್ನುವುದಕ್ಕಿಂತ ಸತತ ಪ್ರುಂತ್ನ, ಶ್ರಮ ಮತ್ತು ತನ್ನ ಉತ್ಪನ್ನದ ಮೇಲಿನ ನಂಬಿಕೆ, ಸಮುಂಕ್ಕೆ ತಕ್ಕಂತೆ ಉತ್ಪನ್ನಗಳ ವಾರ್ಪಾಡು ವಾಡುವುದು ುಂಶಸ್ಸನ್ನು ತಂದುಕೊಡುತ್ತದೆ. ಇವತ್ತಿನ ದಿನಗಳಲ್ಲಿಯೂ ಕಾಲೇಜು ಶಿಕ್ಷಣ ಮುಗಿದ ಬಳಿಕ ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಬುಂಕೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಅವರ ಪೋಷಕರಿಗೂ ಇರುವುದು ಸಾವಾನ್ಯವಾಗಿದೆ. ಆದರೆ, ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟವಾಗಿದ್ದು, ಸ್ವ ಉದ್ಯೋಗದತ್ತ ಮುಖ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎನ್ಎಸ್ಎಚ್ಒ ಮುಖ್ಯಸ್ಥ ಡಾ.ಕೆ.ಸುರೇಶ್, ಕರ್ನಾಟಕ ಬ್ಯಾಂಕ್ ಮುಖ್ಯಸ್ಥ ಕೆ.ಕಿಶೋರ್, ಎನ್ಎಸ್ಐಸಿ ಮುಖ್ಯಸ್ಥ ಆರ್.ಶರವಣ ಕುಮಾರ್, ಎಸ್ಬಿಐ ವ್ಯವಸ್ಥಾಪಕ ಕೃಷ್ಣಮೂರ್ತಿ, ಕೆಸಿಐಡಿಎ ಅಧ್ಯಕ್ಷ ಮಂಜುನಾಥ್, ಎಸ್ಸಿ, ಎಸ್ಟಿ ಅಸೋಸಿಯೇಷನ್ ಅಧ್ಯಕ್ಷ ವಿಜಯ ಶಂಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೈಸೂರು: ಇಂದಿನ ಡಿಜಿಟಲ್ ುುಂಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
Leave a Comment
Leave a Comment
