ಕಾಸಿಗಾಗಿ ವಿದ್ಯುತ್ ಖಾಸಗೀಕರಣಸರ್ಕಾರದ ನಡೆಗೆ ರೈತ ಕಲ್ಯಾಣ ಖಂಡನೆರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕ-ಚಂದನ್ ಗೌಡ

latha prabhukumar
5 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕಾಸಿಗಾಗಿ ವಿದ್ಯುತ್ ಖಾಸಗೀಕರಣ ಸರ್ಕಾರದ ನಡೆಗೆ ರೈತ ಕಲ್ಯಾಣ ಖಂಡನೆ ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕ-ಚಂದನ್ ಗೌಡ

ಮೈಸೂರು: ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣಾ ಜಾಲವನ್ನು (ಎಸ್ಕಾಂಗಳನ್ನು) ಖಾಸಗೀಕರಣಗೊಳಿಸುವ ಸರ್ಕಾರದ ಪ್ರಸ್ತಾ ವನೆಗೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗೀಕರಣದ ಮೂಲಕ ಈ ಸರ್ಕಾರ ಕಾಸು ಮಾಡುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.
ಸರಕಾರ, ರಾಜ್ಯದ ವಿದ್ಯುತ್ ವಿತರಣಾ ವಲಯವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿರುವುದು ಖಂಡನೀಯ ಎಂದ ಅವರು, ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದು ಅಪಾಯಕಾರಿ ನಡೆ. ಸರಕಾರದ ಈ ಕ್ರಮ ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ ಎಂದರು.
ಈಗಾಗಲೇ ಟಾಟಾ ಪವರ್ ಕಂಪನಿಯು ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ವಿತರಣಾ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿದೆ. ಆದರೆ ಇದನ್ನು ಸರ್ಕಾರ ಪುರಸ್ಕರಿಸಬಾರದು ಎಂದು ಒತ್ತಾಯಿಸಿದರು.
ಬೆಸ್ಕಾಂನಿಂದ ವರ್ಷಕ್ಕೆ ಸರಾಸರಿ ೪೨,೬೭೦ ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ವಾರ್ಷಿಕ ಲಾಭವೇ ೩೩,೩೭೫ ಕೋಟಿ ರೂಗಳಿವೆ. ಅಂತೆಯೇ ಹೆಸ್ಕಾಂನಿಂದ ೧೬೪೨೫ ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ೧೩೮೦೮ ಕೋಟಿ ವಾರ್ಷಿಕ ಲಾಭವಿದೆ. ಜೆಸ್ಕಾಂನಲ್ಲಿ ೧೦೬೩೬ ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ೮೭೫೬ ಕೋಟಿ ವಾರ್ಷಿಕ ಆದಾಯವಿದೆ.ಮೆಸ್ಕಾಂನಿಂದ ೭೬೮೫ ಮಿಲಿಯನ್ ಯೂನಿಟ್ ವಿದುತ್ ಪೂರೈಕೆಯಾಗುತ್ತಿದ್ದು, ೬೨೧೮೨ ಕೋಟಿ ಆದಾಯವಿದೆ. ಮತ್ತು ಚೆಸ್ಕಾಂನಲ್ಲಿ ೯೬೬೯ ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಪೂರೈಕೇ ಮಾಡಲಾಗುತ್ತಿದ್ದು, ವಾರ್ಷಿಕ ೮೬೭೭ ಕೊಟಿ ಆದಾಯ ಇದೆ ಎಂಬ ಮಾಹಿತಿ ಅಂಕಿ ಅಂಶದ ಸಹಿತವಿದೆ. ಒಟ್ಟಾರೆ ೫ ವಿದ್ಯುತ್ ವಿತರಣಾ ಘಟಕಗಳಿಂದ ಗೃಹಜ್ಯೋತಿ, ಗಂಗಾಕಲ್ಯಾಣ ಹಾಗೂ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿಯೂ ಸಹ ಈ ಲಾಭ ಗಳಿಸುತ್ತಿರುವಾಗ, ಅವೈಜ್ಞಾನಿಕ ಖಾಸಗೀಕರಣ ಪ್ರಸಾಪ ಏಕೆ ಎಂದು ಪ್ರಶ್ನಿಸಿದ ಚಂದನ್ ಗೌಡ, ಎಲ್ಲಾ ಘಟಕಗಳಿಂದ ವಾರ್ಷಿಕ ಒಟ್ಟಾರೆ ೭೧೦೦೦ ಕೋಟಿ ಆದಾಯವಿರುವ ಈ ವಲಯವನ್ನು ಖಾಸಗೀಕರಣ ಮಾಡಿ, ಅದರಲ್ಲೂ ಕಿಕ್‌ಬ್ಯಾಕ್ ಪಡೆದು ಜನರಿಗೆ ವಂಚಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ದೂರಿದರು.
ಟಾಟಾ ಪವರ್‌ನಂತಹ ಖಾಸಗಿ ಕಂಪನಿಗಳಿಗೆ ವಿದ್ಯುತ್ ಜಾಲವನ್ನು ವಹಿಸಿಕೊಡುವ ಪ್ರಕ್ರಿಯೆಯಿಂದ ರೈತರಿಗೆ ಮತ್ತು ಬಡವರಿಗೆ ಹೊರೆಯಾಗಲಿದೆ. ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಾಗುತ್ತದೆ. ಇದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸಿಗುವ ಉಚಿತ ವಿದ್ಯುತ್‌ಗೆ ಕತ್ತರಿ ಬೀಳಬಹುದು ಹಾಗೂ ಗ್ರಾಮೀಣ ಜನರಿಗೆ ಆರ್ಥಿಕ ಹೊರೆಯಾಗಲಿದೆ. ವರ್ಷಗಳಿಂದ ಸರ್ಕಾರದ ಬಂಡವಾಳ ಹೂಡಿ ಅಭಿವೃದ್ಧಿಪಡಿಸಿರುವ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಕಂಪನಿಗಳಿಗೆ ಧಾರೆ ಎರೆಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯವಾಗಿದ್ದು, .ಖಾಸಗಿ ಕಂಪನಿಗಳು ಲಾಭದ ಉದ್ದೇಶವನ್ನೇ ಹೆಚ್ಚಾಗಿ ಇಟ್ಟುಕೊಳ್ಳುವುದರಿಂದ ಗ್ರಾಹಕರಿಗೆ ಮತ್ತು ರೈತರಿಗೆ ಸರಿಯಾದ ಸೇವೆ ಅಥವಾ ತುರ್ತು ದುರಸ್ತಿ ಸೌಲಭ್ಯಗಳು ಸಿಗುವುದಿಲ್ಲ ಎಂದರು.
ರಾಜ್ಯದ ಎಲ್ಲಾ ಎಸ್ಕಾಂಗಳು ಈಗಾಗಲೇ ನುರಿತ ಸಿಬ್ಬಂದಿ, ಸಾವಿರಾರು ಕೋಟಿ ರೂ. ಮೌಲ್ಯದ ವಿದ್ಯುತ್ ವಿತರಣಾ ಜಾಲ, ಉಪಕೇಂದ್ರಗಳು ಹಾಗೂ ಯಂತ್ರೋಪಕರಣಗಳ ಬೃಹತ್ ಮೂಲಸೌಕರ್ಯ ಹೊಂದಿವೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಬೃಹತ್ ವ್ಯವಸ್ಥೆಯನ್ನು ಲಾಭದಾಸೆಗೆ ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ವಹಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅದ್ಭುತ ತಾಂತ್ರಿಕ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಸುಗಮ ಆಡಳಿತ ನಿರ್ವಹಣೆ ಇರುವಾಗ ರಾಜ್ಯದ ವಿದ್ಯುತ್ ವಿತರಣಾ ಜಾಲವನ್ನು ಹೊರ ರಾಜ್ಯದ ಲಾಭಕೋರ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಬಿಡುವುದಿಲ್ಲ. ಕೆಇಆರ್‌ಸಿ, ವಿದ್ಯುತ್ ವಿತರಣಾ ಜಾಲದ ಖಾಸಗೀಕರಣ ನಿರ್ಧಾರವನ್ನು ಕೈಬಿಟ್ಟು ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ರೈತ ಕಲ್ಯಾಣ ಸಂಘದ ವತಿಯಿಂದ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಚಂದನ್‌ಗೌಡ ಅವರು ಗುಡುಗಿದರು.

ಬಾಕ್ಸ್..
ಬಿಡದಿ ಟೌನ್‌ಶಿಪ್ ಅವೈಜ್ಞಾನಿಕ
ಮೈಸೂರು: ಕಾನೂನು ಉಲ್ಲಂಘನೆ ಮಾಡಿ ಬಿಡದಿ ಟೌನ್ ಶಿಪ್ ಮಾಡಲು ಸರ್ಕಾರ ಮುಂದಾಗಿದ್ದು, ಇದೊಂದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಸಿ. ಚಂದನ್‌ಗೌಡ ಅವರು ಇದೇ ವೇಳೆ ಕಿಡಿಕಾರಿದರು.
೨೦೧೩ರ ಎಲ್‌ಎಆರ್‌ಆರ್ (ಐಂಖಖ) ಕಾಯ್ದೆಯ ಅನ್ವಯ ಆಹಾರ ಭದ್ರತೆಗೆ ಬಹು ಬೆಳೆ ನೀರಾವರಿ ಭೂಮಿಯ ಭೂಸ್ವಾದಿನವನ್ನು ಈ ಕಾಯ್ದೆ ನಿರ್ಬಂಧಿಸುತ್ತದೆ. ಏಕೆಂದರೆ ಇದು ಆಹಾರ ಭದ್ರತೆಗೆ ಮೂಲವಾಗಿದೆ ಮುಖ್ಯವಾಗಿದೆ ಎಂದರು.
ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ವಸತಿ ಕಾಯಿದೆ ೨೦೧೩ರ ಅನ್ವಯದಂತೆ ಭೂಸ್ವಾದಿನ ನಿರಾಶ್ರಿತರಿಗೆ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಒಳಗೊಂಡಂತೆ ಭಾರತೀಯ ಕಂದಾಯ ವ್ಯವಸ್ಥೆಯಲ್ಲಿ ತಲಾಂತರ ಕಾಲದಿಂದಲೂ ಸರ್ಕಾರಕ್ಕೆ ಕಂದಾಯ ಕಟ್ಟಿ ಭೂಮಿ ಅಭಿವೃದ್ಧಿ ಮಾಡಿ ಬೆಳೆಗಳನ್ನ ಬೆಳೆದು ನಾಡಿನ ಜನತೆಯ ಅನ್ನದ ಹಸಿವನ್ನ ನೀಗಿಸಿ ಬಂದಿರುವಂತ ರೈತ ಬಾಂಧವರು, ನೂರಾರು ವರ್ಷಗಳ ಕಾಲ ಕೃಷಿ ಮಾಡಿ ಬದುಕಿ ಇಂದು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡವರಿಗೆ ಮುಂದಿನ ಭವಿಷ್ಯದ ಭದ್ರತೆಯ ಜೀವನದ ಪ್ರಮಾಣಿಸಿ ಅವರ ಕುಟುಂಬಕ್ಕೆ ರಾಯಲ್ಟಿ ಹಾಗೂ ಗುಡ್‌ವೀಲ್ ಗೌರವಧನ ಕೊಡಬೇಕೆಂದು ಹಾಗೂ ಈ ವಿಶೇಷವಾದ ಕಾನೂನನ್ನ ಭೂಸ್ವಾದಿನ ಪ್ರಕ್ರಿಯೆ ನಿಯಮದಲ್ಲಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.
ಗ್ರೇಟರ್ ಬೆಂಗಳೂರು ಇಂಡಿಗ್ರೇಟೆಡ್ ಟೌನ್ ಷಿಪ್ (ಉಃIಖಿ) ಅಲ್ಲ. ಬದಲಾಗಿ ಗೋಲ್ಡನ್ ಬೆಂಗಳೂರು ಇಂಟಿಗ್ರೇಟೆಡ್ ‘ಕಾಂಕ್ರೀಟ್ ಜಂಗಲ್ ಪ್ರಾಜೆಕ್ಟ್’ ಆಗಿದ್ದು, ಸರ್ಕಾರಕ್ಕೆ ರಿಯಲ್ ಎಸ್ಟೇಟ್ ಆಸಕ್ತಿ ಏಕೆ ಎಂದು ಪ್ರಶ್ನಿಸಿದ ಅವರು, ಯಾವ ಸ್ವಾರ್ಥಕ್ಕೆ ಯಾರ ಲಾಬಿಗೆ, ಸಾವಿರಾರು ಜನರ ಬದುಕಿನ ಮೇಲೆ ಮರಣ ಶಾಸನ ವಿಧಿಸುತ್ತಿದೆ ಎಂದರು.
ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ ಪ್ರಾಧಿಕಾರದಲ್ಲಿ ಬರುವ ಕೆಂಪೇಗೌಡ ಬಡಾವಣೆ, ಶಿವರಾಮ ಕರಾಂತ ಬಡಾವಣೆ, ಅರ್ಕಾವತಿ ಪ್ರತಿಷ್ಠಿತ ಬಡವಣೆಗಳಲ್ಲೇ ಮನೆ ಕಟ್ಟುವವರಿಲ್ಲ. ಆ ಜಾಗ ಅಭಿವೃದ್ಧಿಯಾಗಿಲ್ಲ. ಅಂತಹದರಲ್ಲಿ ಈ ಬಿಡದಿ ಟೌನ್ ಷಿಪ್ ಏಕೆ? ಟೌನ್ ಶಿಪ್ ಮುಖಾಂತರ ೪೦೦೦ ಜನರಿಗೆ ಮನೆ, ಆದರೆ ಸಾವಿರಾರು ಜನರ ರೈತರ ಬಾಯಿಗೆ ಮಣ್ಣು ಎಂಬಂತಾಗಿದೆ ಈ ಸರ್ಕಾರದ ನಡೆ ಎಂದು ಖಂಡಿಸಿದರಲ್ಲದೇ,
ಒಂದು ಗ್ರಾಮ ಒಂದು ಸ್ಮಶಾನ ಎಂಬ ಸರ್ಕಾರದ ಯೋಜನೆಯಂತೆ ರಾಜ್ಯ ದಲ್ಲಿರುವ ೩೦,೭೮೧ ಹಳ್ಳಿಗಳಲ್ಲಿ, ಕಂದಾಯ ಗ್ರಾಮಗಳಲ್ಲಿ ಇಂದಿಗೂ ಕೂಡ ಸ್ಮಶಾನಕ್ಕೆ ಜಾಗ ಕೊಡುವ ಯೋಗ್ಯತೆ ಇಲ್ಲದಿರುವ ಈ ಸರ್ಕಾರ ಈ ಟೌನ್‌ಶಿಪ್ ಹೆಸರಿನಲ್ಲಿ ಹಣ ಮಾಡುವ ಹುನ್ನಾರಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಟ್..
ಗ್ರೇಟರ್ ಬೆಂಗಳೂರು ಇಂಡಿಗ್ರೇಟೆಡ್ ಟೌನ್ ಷಿಪ್ (ಉಃIಖಿ) ಅಲ್ಲ. ಬದಲಾಗಿ ಗೋಲ್ಡನ್ ಬೆಂಗಳೂರು ಇಂಟಿಗ್ರೇಟೆಡ್ ‘ಕಾಂಕ್ರೀಟ್ ಜಂಗಲ್ ಪ್ರಾಜೆಕ್ಟ್’ ಆಗಿದ್ದು, ಸರ್ಕಾರಕ್ಕೆ ರಿಯಲ್ ಎಸ್ಟೇಟ್ ಆಸಕ್ತಿ ಏಕೆ..? ಯಾವ ಸ್ವಾರ್ಥಕ್ಕೆ, ಯಾರ ಲಾಬಿಗೆ, ಸಾವಿರಾರು ಜನರ ಬದುಕಿನ ಮೇಲೆ ಮರಣ ಶಾಸನ ವಿಧಿಸುತ್ತಿದೆ.
ಸಿ.ಚಂದನ್ ಗೌಡ,
ರಾಜ್ಯಾಧ್ಯಕ್ಷ,
ರೈತ ಕಲ್ಯಾಣ ಸಂಘ

Share This Article
Leave a Comment