ಜಾಗೃತಿ ಸಾರಿದ ನಶಮುಕ್ತ ಮೈಸೂರು ಅಭಿಯಾನ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಜಾಗೃತಿ ಸಾರಿದ ನಶಮುಕ್ತ ಮೈಸೂರು ಅಭಿಯಾನ

ಮೈಸೂರು: ರ್ಯಾಂಬೋ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಜೆ.ಪಿ.ನಗರದ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಭಾನುವಾರ ಅಯೋಜಿಸಿದ್ದ ನಶಾಮುಕ್ತ ಮೈಸೂರು ಅಭಿಯಾನ ಮತ್ತು ಮಹಿಳೆಯರ ಸ್ವಯಂ ರಕ್ಷಣಾ ತರಬೇತಿ ಶಿಬಿರದ
ಅಭಿಯಾನದ ಜಾಥಾ ಯಶಸ್ವಿ ಜಾಗೃತಿ ಸಂದೇಶ ಸಾರಿತು.
ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಅಯುಕ್ತ ಕೆ.ಎಸ್
ಸುಂದರ್ ರಾಜ್ ಮಾತನಾಡಿ
ನಮ್ಮ ಮನಸ್ಸು ಸಧೃಢರಾಗಬೇಕೆಂದರೆ ಯಾವುದಾದರು‌ ಒಂದು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತು­ಗಳನ್ನು ಬಳಸಿ ತೊಂದರೆಗೆ ಒಳಗಾ­ಗುತ್ತಿದ್ದು, ತಂಬಾಕು ಉತ್ಪನ್ನಗಳಿಂದ ಮೃತ­ಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಂತಕಕಾರಿ ಬೆಳವಣಿಗೆಯಾಗಿದೆ ಎಂದರು.

ನಮ್ಮ‌ ನಗರದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ವಾಯುವಿಹಾರಕ್ಕೆ ಮಹಿಳೆಯರು, ವಯೋವೃದ್ದರು ಹೋಗುವ ಸಂದರ್ಭದಲ್ಲಿ ಚೈನ್ ಕಳ್ಳರು ಅವರನ್ನು ಗಮನಿಸಿ ಅವರ ಕತ್ತಿನಲ್ಲಿರುವ ಚೈನ್ ಗಳನ್ನು ಕಸಿದು ಪರಾರಿಯಾಗುತ್ತಿದ್ದು ಅದೇ ಸಂದರ್ಭದಲ್ಲಿ ವಯೋವೃದ್ಧರು ಕೆಳಗಡೆ ಬಿದ್ದು ಪ್ರಾಣ ಬಿಟ್ಟಿರುವ ಸಂದರ್ಭ ಕೂಡ ಮೂಡಿತ್ತು‌ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿಗಳು ಇಂತಹ ಪ್ರಕರಣಗಳನ್ನು ತಡೆಗಟ್ಟಲು
ಸದಾ ಗಸ್ತಿನಲ್ಲಿದ್ದು ಕಳ್ಳರಿಗೆ ಹೆಡೆಮುರಿಕಟ್ಟಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತಿರುವುದರಿಂದ ಇಂತಹ ಪ್ರಕರಣಗಳು ಕಾಲ ಕ್ರಮೇಣ ಕಡಿಮೆಯಾಗುತ್ತಿದೆ ಹಾಗಾಗಿ ಯಾವುದೇ ಅನುಮಾನ ವ್ಯಕ್ತಿಗಳು ಕಂಡು ಮಹಿಳೆಯರು ವಯೋವೃದ್ಧರು ಹೆದರದೇ 112 ಗೆ ಕರೆ ಮಾಹಿತಿ ನೀಡಿದಾಗ ತಕ್ಷಣ ನಮ್ಮ ಸಿಬ್ಬಂದಿಗಳು ನಿಮಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.
ಡಿ.ಸಿ.ಎಫ್. ಕೆ.ಪರಮೇಶ್ ಮಾತನಾಡಿ ನಶೆಯು ಜೀವನವನ್ನು ಕತ್ತಲಿಗೆ ತಳ್ಳುತ್ತದೆ.ಆದರೆ ನಶಾ ಮುಕ್ತ ಜೀವನವು ನಮ್ಮ ಆರೋಗ್ಯವನ್ನು ಕಾಪಾಡಿ ನಮ್ಮ ಸುಂದರ ಜೀವನಕ್ಕೆ ಬೆಳಕನ್ನು ನೀಡುತ್ತದೆ
ಬದುಕು ಅತ್ಯಂತ ಅಮೂಲ್ಯವಾದದು ದುಶ್ಚಟಗಳಿಗೆ ದಾಸರಾಗದೆ ಆ ಬದುಕನ್ನು ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಈ ನಿಟ್ಟಿನಲ್ಲಿ ಬದುಕನ್ನು ಹಸನಾಗಿಸಬೇಕು ಎಂದು ಹೇಳಿದರು.
ಜಾಥಾವು ಜೆ.ಪಿ.ನಗರ ಸ್ಪೋರ್ಟ್ ಕ್ಲಬ್ ರಸ್ತೆಯಿಂದ ಗೊಬ್ಬಳ್ಳಿ ಮರದ ರಸ್ತೆ, ಕವಿತಾ ಬೇಕರಿ ಸರ್ಕಲ್. ಪುಟ್ಟರಾಜ ಗವಾಯಿ ಕ್ರೀಡಾಂಗಣ ಜೆ ಎಸ್ ಎಸ್ ಪಬ್ಲಿಕ್ ಶಾಲೆ,ಪೆನಿಸಿಯಾ ಆಸ್ಪತ್ರೆ ರಸ್ತೆ ಮೂಲಕ ಜೆ.ಪಿ.ನಗರ ಸ್ಪೋರ್ಟ್ಸ್ ಕ್ಲಬ್ ಆವರಣ ತಲುಪಿತು‌.

ಕಾರ್ಯಕ್ರಮದಲ್ಲಿ ಸಿ.ಎ.ಆರ್.ಉಪಪೊಲೀಸ್ ನಿವೃತ್ತ ಅಯುಕ್ತ ಶಿವರಾಜು
ಸಿ.ಡಿ.ಬಸವರಾಜು, ರಾಜಶೇಖರ್ ಮೂರ್ತಿ, ಎಸ್‌‌‌.ಎನ್.ಅರ್ಚನಾ ,ಅನುರಾಧ,ಉಷಾ ಹೆಗ್ಡೆ, ಭೈರವಿ, ರ್ಯಾಂಬೋ ಕಿರಣ್, ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮಾಜಿ ಮೇಯರ್ ಪುರುಷೋತ್ತಮ, ಲಯನ್ ಎಸ್.ವೆಂಕಟೇಶ್, ಎಂ.ಎನ್.ನಟರಾಜು ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್
ಸಾಂಸ್ಕೃತಿಕ ನಗರಿ ಮೈಸೂರನ್ನು ನಶಾಮುಕ್ತ ನಗರವನ್ನಾಗಿಸುವಲ್ಲಿ ಸಾಮೂಹಿಕ ಅರಿವು ಅಗತ್ಯವಿದೆ. ಮಾತ್ರವಲ್ಲದೆ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ಮೂಲಕ ಅವರನ್ನು ಸಮಾಜದಲ್ಲಿ ಮುನ್ನಲೆಗೆ ತರುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಇಂದು ವಾಕಥಾನ್, ತರಬೇತಿ ಸೇರಿ ಇಡೀ ದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ.

  • ರ್ಯಾಂಬೋ ಕಿರಣ್, ಸಂಸ್ಥಾಪಕ, ರ್ಯಾಂಬೋ ಕಿರಣ್ ಕರಾಟೆ ಅಕಾಡೆಮಿ
Share This Article
Leave a Comment