ಮೈಸೂರು ಮಹಾನಗರ ಪಾಲಿಕೆ / 216 – ಕೃಷ್ಣರಾಜ ವಿಧಾನಸಭಾ ಕ್ಷೇತ್ರ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು ಮಹಾನಗರ ಪಾಲಿಕೆ / 216 – ಕೃಷ್ಣರಾಜ ವಿಧಾನಸಭಾ ಕ್ಷೇತ್ರ

ಪತ್ರಿಕಾ ಪ್ರಕಟಣೆ

216 – ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ

ಮೈಸೂರು: 216 – ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ, ಕ್ಷೇತ್ರದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅಂತಿಮ ಮತದಾರರ ಸಂಖ್ಯೆಯ ವಿವರಗಳನ್ನು ಹಂಚಿಕೊಳ್ಳಲಾಯಿತು.

ಸಭೆಯಲ್ಲಿ, SIR ಪ್ರಕ್ರಿಯೆಗೂ ಮುನ್ನ, ಕರಡು ಮತದಾರರ ಪಟ್ಟಿ ಪ್ರಕಟಣೆಯ ಸಂದರ್ಭದಲ್ಲಿ ಹಾಗೂ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.

ವಿವರಗಳ ಪ್ರಕಾರ, SIR ಪೂರ್ವದ ಮತದಾರರ ಸಂಖ್ಯೆ 2,63,632 ಇದ್ದು, ಕರಡು ಪಟ್ಟಿಯಲ್ಲಿ 1,76,831 ಮತದಾರರು ದಾಖಲಾಗಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 1,81,044 ಮತದಾರರು ದಾಖಲಾಗಿದ್ದು, ಕರಡು ಪಟ್ಟಿಗೆ ಹೋಲಿಸಿದರೆ 4,213 ಮತದಾರರ ಹೆಚ್ಚಳವಾಗಿದೆ. SIR ಪೂರ್ವದ ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಒಟ್ಟು 82,588 ಮತದಾರರ ನಿವ್ವಳ ಇಳಿಕೆ ಕಂಡುಬಂದಿದೆ.

ಅಂತಿಮ ಪಟ್ಟಿಯ ಲಿಂಗವಾರು ವಿವರಗಳು ಹೀಗಿವೆ:

  • ಪುರುಷ ಮತದಾರರು: 85,865
  • ಮಹಿಳಾ ಮತದಾರರು: 95,162
  • ತೃತೀಯ ಲಿಂಗದ ಮತದಾರರು: 17
  • ಒಟ್ಟು ಮತದಾರರು: 1,81,044

ಮತದಾರರ ಪಟ್ಟಿಗೆ ಸಂಬಂಧಿಸಿದ ಅಂಕಿಅಂಶಗಳ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಮನ್ವಯಕ್ಕೆ ಒತ್ತು ನೀಡಲಾಯಿದೆ ಎಂದು ತಿಳಿಸಲಾಯಿತು &
ಸಹಕಾರ ನೀಡಿದ ಎಲ್ಲಾ ರಾಜಕೀಯ ಪಕ್ಷದ BLO ಗಳಿಗೆ ಧನ್ಯವಾದಗಳನ್ನು ತಿಳಿಸಲಾಯಿತು
ERO
ಮೈಸೂರು ಮಹಾನಗರ ಪಾಲಿಕೆ
ಮೈಸೂರು

Share This Article
Leave a Comment