ಪಬ್ಲಿಕ್ ಅಲರ್ಟ್
ಮೈಸೂರು: ಯುವಜನತೆಯ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಸಂಘಟನೆಗಳ ಹಾಗೂ ವಿವಿಧ ವಿದ್ಯಾಸಂಸ್ಥೆಗಳ ಸಂಘಗಳ ಸಹಯೋಗದಲ್ಲಿ ಸೆ.೭ರಂದು ಬೆಳಿಗ್ಗೆ ೮ಕ್ಕೆ ಬೈಕ್ ರ್ಯಾಲಿ ಆಯೋಜಿಸಿದ್ದು, ಕನ್ನಡ ಚಲನಚಿತ್ರ ನಟ ಧನಂಜಯ್ ಚಾಲನೆ ನೀಡಲಿದ್ದಾರೆ ಎಂದು ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್ಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಮೈಸೂರಿನಲ್ಲಿ ,ಆದಕ ದ್ರವ್ಯಗಳ ಪಿಡುಗು ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕ ಸುರಕ್ಷತಾ ಬಿಕ್ಕಟ್ಟು ನಿರ್ಮಾಣವಾಗಿದೆ. ಇದರ ಸಲುವಾಗಿ ಮಾದಕ ದ್ರವ್ಯದದ ವಿರುದ್ಧವಾಗಿ ಹೋರಾಡಲು ಈ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಅಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ರ್ಯಾಲಿಗೆ ಚಾಲನೆ ದೊರೆಯಲಿದ್ದು, ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಜಾಥ ನಡೆಸಲಾಗುವುದು ಎಂದು ತಿಳಿಸಿದರು. ಜಾಥ ಕಾರ್ಯಕ್ರಮವು ಯಾವುದೇ ರಾಜಕೀಯ ಪ್ರೇಪಿತವಲ್ಲದೇ ಪಕ್ಷಾತೀತವಾಗಿ ವಿವಿಧ ಸಂಘ ಸಂಸ್ಥೆಗಳು ಸಹಯೋಗಲ್ಲಿ ನಡೆಯಲಿದ್ದು, ವಿನಯ್ ಗೂರೂಜಿ ಸಾರಥ್ಯದಲ್ಲಿ ನಟ ಧನಂಜಯ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್, ಯೋಗಪಟು ಯೋಗಾತ್ಮ ಶ್ರೀಹರಿ, ಡಾ.ಎಚ್.ಕೆ ಚೇತನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇವರೊಂದಿಗೆ ಮೈಸೂರಿನ ಸಾರ್ವಜನಿಕರು ಹಾಗೂ ನಾಗರೀಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಮಾದಕ ವಸ್ತುಗಳ ಮಾರಾಟದ ಕೃತ್ಯಗಳು ನಡೆದಿವೆ. ಇದೀಗ ನಗರದಲ್ಲಿ ಮಹರಾಷ್ಟ್ರ ಪೊಲೀಸರಿಂದ ಸುಮಾರು ೩೯೦ ಕೋಟಿ ರೂ.ಗಳ ೧೯೨ ಕೆಜಿ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದು, ಇದೊಂದು ಸಮಾಜವನ್ನೇ ವಿನಾಸ ಹಾದಿಗೆ ಕರೆದೊಯ್ಯುತ್ತಿರುವ ಭೀತಿ ಉಂಟಾಗುತ್ತಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಈ ರೀತಿಯ ಘಟನೆ ನಡೆದಿದ್ದು, ಮಹಾರಾಷ್ಟ್ರದ ಪೊಲೀಸರು ಈ ಕೃತ್ಯವನ್ನು ಪತ್ತೆ ಹಚ್ಚಿ ಬಯಲು ಮಾಡಿದ್ದಾರೆ. ಆದರೆ ಸರ್ಕಾರ, ಆಡಳಿತ ವ್ಯವಸ್ಥೆಗಳು ಏನು ಕಾರ್ಯನಿರ್ವಹಿಸುತ್ತಿವೆ ಎಂದು ಕಿಡಿಕಾರಿದರು. ಇಂತಹ ಪ್ರಕರಣಗಳ ವಿರುದ್ಧ ಸರ್ಕಾರ ಕಟ್ಟೆಚ್ಚವಹಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.ಇನ್ನೆಂದು ಇಂತಹ ಮಾದಕ ವಸ್ತುಗಳ ಪ್ರಕರಣಗಳು ತಲೆ ಎತ್ತದಂತೆ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸಮಾಜ ಸೇವಕಾರದ ದಿನೇಶ್ಗೌಡ, ರವಿಶಂಕರ್, ಸೋಮಣ್ಣ, ಸಾಹಿತಿ ಲೋಕೇಶ್ ಉಪಸ್ಥಿತರಿದ್ದರು.

