ಕುವೆಂಪು ಅವರಿಗೆ ಮರೋಣತ್ತರ ಭಾರತ ರತ್ನಕ್ಕೆ ಆಗ್ರಹ

Pratheek
1 Min Read

  ಪಬ್ಲಿಕ್ ಅಲರ್ಟ್


ಮೈಸೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕೆಂದು ಕೋರಿ ಹಾಗೂ ಪ್ರಧಾನಿಯವರಿಗೆ ಈ ನಿಟ್ಟಿನಲ್ಲಿ ಮನವಿ ಮಾಡಲೆಂದು ಇದೇ ಆ. ೩೧ ರಂದು ನಗರಕ್ಕೆ ಆಗಮಿಸುವ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸುವುದಾಗಿ ಕುವೆಂಪು ವಿಶ್ವ ಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ತಿಳಿಸಿದೆ.
ಈ ಕುರಿತು ನಗರದಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಸುದ್ದಿಗಾರರೊಡನೆ ಮಾತನಾಡಿ, ರಾಷ್ಟçಕವಿ ಕುವೆಂಪು ಅವರ ಹೆಸರನ್ನು ಕೇಳದವರಿಲ್ಲ. ಅವರು ಕನ್ನಡ ಸಾಹಿತ್ಯ, ಸಂಸ್ಕೃತಿಯ ಶತ ಪುರುಷರೂ ಆಗಿದ್ದಾರೆ. ಯುಗದ ಕವಿ, ಜಗದ ಕವಿ ಎಂದೇ ಬಣ್ಣಿತರಾದವರಾಗಿದ್ದಾರೆ. ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಇವರನ್ನು ವಿಶ್ವ ಮಾನವ ಸಂದೇಶದ ಕಾರಣರಿಂದಾಗಿ ವಿಶ್ವರತ್ನರೆಂದರೂ ತಪ್ಪೇನಿಲ್ಲವೆಂದರು.
ಅವರ ಬದುಕಿದ್ದಾಗಲೇ ಭಾರತ ರತ್ನ ನೀಡಿದ್ದರೆ ವಿಶೇಷವಾದ ಅರ್ಥ ಇರುತ್ತಿತ್ತು. ದುರದೃಷ್ಟವಶಾತ್ ಸಿಗಲಿಲ್ಲ. ಅವರ ಕೃತಿಗಳೇನಾದರೂ ಆಗಲೇ ಇಂಗ್ಲಿಷ್‌ಗೆ ಅನುವಾದಗೊಂಡಿದಿದ್ದಲ್ಲಿ ನೊಬೆಲ್ ಪ್ರಶಸ್ತಿ ಖಂಡಿತ ದೊರಕುತ್ತಿತ್ತು. ಆದ ಕಾರಣ ಈಗಲಾದರೂ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೋರಿದರು.
ಪ್ರೊ.ಸಿ. ನಾಗಣ್ಣ ಮಾತನಾಡಿ, ನಾವೀಗ ಸಕಾರಾತ್ಮಕ ಯೋಚನೆ ಕಾಲಘಟ್ಟದಲ್ಲಿದ್ದೇವೆ. ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ಕನ್ನಡಿಗರ ಮನಸ್ಸಿನಲ್ಲಿ ಮೂಡಿದೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಆಗುತ್ತದೆ. ಕನ್ನಡಿಗರ ದೃಷ್ಟಿಯಿಂದ ಹೊಸ ಸಂಚಲನವುAಟಾಗುತ್ತದೆ. ಅಲ್ಲದೆ ರಾಜ್ಯದ ಅಭಿವೃದ್ಧಿಗೂ ನಾಂದಿ ದೊರೆಯುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಎಚ್.ಕೆ. ರಾಮು ಮಾತನಾಡಿ, ಈ ಮನವಿಪತ್ರ ಸಲ್ಲಿಕೆಯನ್ನು ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್‌ಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮೊದಲಾದವರು ಬೆಂಬಲಿಸಿದ್ದು, ಸಿಎಂಗೆ ಮನವಿ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಮದ್ರಶೇಖರ ಕಂಬಾರ, ಸಂಸದ ಯದುವೀರ್ ಮೊದಲಾದವರು ಸಹಾ ಬೆಂಬಲಿಸಿದ್ದಾರೆಂದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಜಯಣ್ಣ ಹಾಗೂ ಇನ್ನಿತರರು ಇದ್ದರು.

TAGGED:
Share This Article
Leave a Comment