ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಅಧ್ಯಕ್ಷ ಶ್ರೀನಿವಾಸ್

Chethan
1 Min Read

ಪಬ್ಲಿಕ್‌ ಅಲರ್ಟ್‌


ಬೆಂಗಳೂರು:- ಭೋವಿ ಸಮಾಜ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿಯಲು ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭೋವಿ ಸಂಘದ ಅಧ್ಯಕ್ಷ ಶ್ರೀನಿವಾಸ್ (ಎಚ್‌ವಿಎಸ್) ಹೇಳಿದರು.
ತಾಲೂಕಿನ ಭೋವಿ ಸಂಘದ ಕಚೇರಿಯನ್ನು ದೇವನಹಳ್ಳಿ ಪಟ್ಟಣದ ರಾಣಿ ಸರ್ಕಲ್ ಸಮೀಪದ ಸಹಾಯಕ ಸಾರಿಗೆ ಇಲಾಖೆ (ಎಆರ್‌ಟಿಒ) ಕಚೇರಿ ಮುಂಭಾಗದ ಎಸ್‌.ಬಿ ಬೇಕರಿಯ ನೆಲಮಹಡಿಯಲ್ಲಿ ನೂತನವಾಗಿ ಕಚೇರಿಯನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ
ಉದ್ಘಾಟಿಸಿ ಮಾತನಾಡಿದರು. ಭೋವಿ ಸಮಾಜಕ್ಕೆ ನೂತನ ಕಚೇರಿ ಉದ್ಘಾಟನೆಯಾಗಿದ್ದು ,ಸಮಾಜದ ಪ್ರತಿಯೊಬ್ಬರು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಮುರಳಿ ಮಾತನಾಡಿ ಇಂದು ಇತಿಹಾಸ ಸೃಷ್ಟಿಯಾದ ದಿನ ಕಾರಣ ಭೋವಿ ಸಮಾಜದ ಜನರಿಗೆ ಒಂದು ಕಚೇರಿಯಾಗಿದ್ದು ಅವರ ಸಮಸ್ಯೆಗಳಿಗೆ ಸದಾ ಸ್ಪಂದಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಬಯಪ ಅಧ್ಯಕ್ಷರಾದ ಶಾಂತಕುಮಾರ್.ವಿ, ದಲಿತ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ರಾಮಕೃಷ್ಣ, ಡಿಸಿಕೆ ಡೆವಲಪರ್ ಸಂಸ್ಥಾಪಕ ಅಧ್ಯಕ್ಷ ಡಿಸಿ ಚಂದ್ರು , ದೇವನಹಳ್ಳಿ ತಾಲೂಕು ಬೋವಿ ಸಂಘ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗರಾಜು , ಎಸ್ .ಕೆ .ತಮ್ಮಯ್ಯ, ವಿ. ಗೋಪಾಲ್, ಎಂ .ಎನ್. ನಾರಾಯಣ ಸ್ವಾಮಿ, ದಾಸ ,ಶ್ರೀನಿವಾಸ್, ಸುರೇಶ್, ರವಿ ,ಸಿದ್ದಯ್ಯ, ಚಂದ್ರಶೇಖರ್, ನರಸಿಂಹಯ್ಯ, ಶ್ರೀನಿವಾಸ್ ,ರಮೇಶ್, ಗಣೇಶ್, ನಾರಾಯಣಸ್ವಾಮಿ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment