ಪಬ್ಲಿಕ್ ಅಲರ್ಟ್
ಮೈಸೂರು: ನಗರದ ವಿವಿಧೆಡೆ ಸಾಮಾಜಿಕ ಕಾರ್ಯ, ಅನ್ನಸಂತರ್ಪಣೆ, ವಿಶೇಷ ಚೇತರಿಗೆ ಹಣ್ಣು ಹಂಪಾಲು ವಿತರಿಸಿ ರಾಜಕಾರಣಿಯೂ ಆದ ಚಿತ್ರನಟ ಡೇರಿಂಗ್ ಸ್ಟಾರ್ ಎಸ್.ಜಯಪ್ರಕಾಶ್ (ಜೆಪಿ) ಅವರ ಹುಟ್ಟುಹಬ್ಬವನ್ನು ಆದ್ಧೂರಿಯಾಗಿ ಆಚರಿಸಲಾಯಿತು.
ಮೊದಲಿಗೆ ನಂಜನಗೂಡಿನ ನಂಜುಂಡೇಶ್ವರ ಮತ್ತು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಎಸ್.ಜಯಪ್ರಕಾಶ್ ಪೂಜೆ ಸಲ್ಲಿಸಿದರು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಜೆಪಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಯಸ್ಸು, ಆರೋಗ್ಯ ಕೊಟ್ಟು ನಾಡು, ನುಡಿ ಹೋರಾಟದ ಜೊತೆಗೆ ಪೂರಕವಾದ ಸಿನಿಮಾಗಳನ್ನು ನೀಡಬೇಕು ಎಂದು ಪ್ರಾರ್ಥಿಸಿದರು.
ಬಳಿಕ ಹೂವಿನ ಹಾರ ಹಾಕಿ ಮೆರವಣಿಗೆಯ ಮೂಲಕ ಪಕ್ಕದಲ್ಲಿದ್ದ ಡಾ.ರಾಜ್ ಕುಮಾರ್ ಉದ್ಯಾನಕ್ಕೆ ಕರೆದ್ಯೊಯ್ದ ಅಭಿಮಾನಿಗಳು ಡಾ.ರಾಜ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ಬೃಹತ್ ಕೇಕ್ ಕತ್ತರಿಸಿ ಶುಭಾ ಕೋರಿದರು. ನೆರೆದಿದ್ದ ನೂರಾರು ಅಭಿಮಾನಿಗಳು ಜೆಪಿ ಅವರಿಗೆ ಶುಭಾ ಕೋರಿದರು. ಜೈಕಾರ, ಶಿಳ್ಳೆ, ಚಪ್ಪಾಳೆಯ ಮೂಲಕ ಅಭಿಮಾನ ತೋರ್ಪಡಿಸಿದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.


ನಂತರ ಬೃಂದಾವನ ಬಡಾವಣೆಯ ಚಾಮುಂಡಿ ಚಿಲ್ಡ್ರನ್ಸ್ ಹೋಂ ವಿಶೇಷ ಚೇತನ ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಬಾಪೂಜಿ ಆನಂದ ಆಶ್ರಮದ ವಯೋವೃದ್ಧರಿಗೆ ಮಧ್ಯಾಹ್ನದ ಊಟ, ಹೆಬ್ಬಾಳಿನ ಚಿಗುರು ಸಂಸ್ಥೆಯ ವಿಶೇಷಚೇತನರಿಗೆ ಅನ್ನದಾಸೋಹ ನಡೆಯಿತು.
ಹುಟ್ಟುಹಬ್ಬ ಆಚರಿಸಿಕೊಂಡ ಎಸ್.ಜಯಪ್ರಕಾಶ್ ಮಾತನಾಡಿ, ನಾಡಿನ ಬಹುತೇಕ ಜನರು ವೀಕ್ಷಣೆ ಮಾಡಿದ ಫಲವಾಗಿ ನನ್ನ ಭಗೀರಥ ಸಿನಿಮಾ ಶತ ದಿನಕ್ಕೂ ಹೆಚ್ಚು ಕಾಲ ಭರ್ಜರಿ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿದೆ. ಹೀಗಾಗಿ ನಿರೀಕ್ಷೆ ಮೀರಿ ನನ್ನ ಹುಟ್ಟುಹಬ್ಬದ ಆಚರಣೆಗೆ ಜನ ಸೇರಿದ್ದಾರೆ ಸಂತಸ ವ್ಯಕ್ತಪಡಿಸಿದರು.
ಭಗೀರಥ ಚಿತ್ರದ ಬಳಿಕ ಅನೇಕ ಕಥೆಗಳು ಬರುತ್ತಿವೆ. ಸವಾಜಕ್ಕೆ ಸಂದೇಶ ನೀಡುವ ಭಾಗ್ಯವಂತ ಚಿತ್ರಕ್ಕೆ ಒಪ್ಪಿದ್ದೇನೆ. ಜೀವದಾತ ಚಿತ್ರ ನ.೧ಕ್ಕೆ ಮುಹೂರ್ತ ನಿಗಧಿಾಂಗಿದ್ದು ಬೆಂಗಳೂರಿನಲ್ಲಿ ಬಿಡುಗಡೆ ಆಗಲಿದೆ.ಈ ದಿನ ೧೦ ವೃದ್ಧ, ವಿಶೇಷ ಚೇತನ ಆಶ್ರಮಗಳಲ್ಲಿ ಉಪಹಾರ, ಸಿಹಿ ವಿತರಣೆ ಕಾಂರ್ುಕ್ರಮದಲ್ಲಿ ಭಾಗವಹಿಸಲಿದ್ದೇನೆ. ಬಳಿಕ ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ, ಚಾಮರಾಜ ಪೇಟೆಯ ಮಲೆ ಮಹದೇಶ್ವರ ಸ್ವಾಮಿ ದೇವಾಲುಂದಲ್ಲಿ ವಿಶೇಷಪೂಜೆ ಸಲ್ಲಿಸಲಿದ್ದೇನೆಂದರು. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸವಾಜಸೇವಾ ಕಾರ್ಯಕ್ರಮ ಆಯೋಜಿಸಲು ಅಭಿಮಾನಿಗಳು, ಕಾರ್ಯಕರ್ತರಲ್ಲಿ ಹುರುದುಂಬಿಸಲಾಗುವುದು. ನನ್ನ ಮುಂದಿನ ಸಿನಿಮಾ ದಿಗ್ದರ್ಶಕ ಮುಂದಿನ ಡಿಸೆಂಬರ್‌ನಲ್ಲಿ ತೆರೆ ಕಾಣಲಿದ್ದು, ಎಲ್ಲರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನಿರ್ಮಾಪಕ ಚೇತನ್ ರಮೇಶ್ ಮಾತನಾಡಿ, ಮೈಸೂರು ಜಿಲ್ಲೆ ದಿಗ್ಗಜ ನಟ ಡಾ.ರಾಜ್ ಕುಮಾರ್, ಡಾ.ವಿಷ್ಣು ವರ್ಧನ್ ಸೇರಿ ಕನ್ನಡಿ ಸಿನಿಮಾದ ಕಣ್ಮಣಿಗಳನ್ನು ಕೊಟ್ಟಿರುವ ಜಿಲ್ಲೆಯಾಗಿದೆ. ಎಸ್.ಜಯಪ್ರಕಾಶ್ ಅವರು ಕೂಡ ಇಲ್ಲಿನವರೆಯಾಗಿದ್ದು, ಸ್ಯಾಂಡವುಡ್‌ನಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಕೋರಿದರು.
ಸಂಜೆ ಬೆಂಗಳೂರು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಚಾಮರಾಜಪೇಟೆಯ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಯಪ್ರಕಾಶ್ ಪೂಜೆ ಸಲ್ಲಿಸಲಿದ್ದಾರೆ. ತೇಜಸ್ ಲೋಕೇಶ್ ಗೌಡ,
ಸಿಂಧುವಳ್ಳಿ ಶಿವಕುಮಾರ್, ಕೃಷ್ಣಪ್ಪ, ಮಹದೇವಸ್ವಾಮಿ, ರಘು ಅರಸ್, ಅಶೋಕ್‌ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
