ಪಬ್ಲಿಕ್ ಅಲರ್ಟ್
ಮೈಸೂರು: ರೋಟರಿ ಮೈಸೂರು ಮತ್ತು ಅಖಿಲ ಭಾರತ ತೇರಾಪಂತ್ ಯುವಕ ಮಂಡಳಿ ಸಹಯೋಗದಲ್ಲಿ ರಕ್ತದಾನ ಅಮೃತ ಮಹೋತ್ಸವದ ಮಹಾ ಸಪ್ತಾಹವನ್ನು ಸೆ.೧೭ ರಂದು ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತಿದೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗ್ಗೆ ೮ ರಿಂದ ಸಂಜೆ ನಾಲ್ಕರವರೆಗೆ ನಗರದ ೧೬ ಕಡೆಗಳಲ್ಲಿ ಹಾಗೂ ಎಚ್.ಡಿ. ಕೋಟೆ, ಕೆ.ಆರ್. ನಗರ, ಪಿರಿಯಾಪಟ್ಟಣ ಮೊದಲಾದ ಕಡೆಗಳಲ್ಲಿ ಈ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ. ಆಗಮಿಸುವವರಿಗೆ ಹಣ್ಣು, ಜ್ಯೂಸ್, ಬಿಸ್ಕೆಟ್, ಪ್ರಮಾಣಪತ್ರ ನೀಲಾಗುವುದು. ಈ ರೀತಿ ಒಟ್ಟಾರೆ ಸುಮಾರು ಒಂದೂವರೆ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು. ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಚಿರಾಗ್, ಮುಕೇಶ್, ಪ್ರಮೋದ್, ರವಿಶಂಕರ್, ಸಂಜಯ್ ಹಾಜರಿದ್ದರು.
ಸೆ.೧೭ಕ್ಕೆ ರಕ್ತದಾನ ಮಹಾಸಪ್ತಾಹ:ಗಿರೀಶ್
Leave a Comment
Leave a Comment
