ಕೋಲಾರ : ಜಿಲ್ಲೆಯ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ವಂಶೋದಯ ಅಡ್ವಾನ್ಸ್ಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು 26 ವಾರಗಳ ಅವಧಿಗೆ ಮುಂಚಿತವಾಗಿ ಜನಿಸಿದ 650 ಗ್ರಾಂ ತೂಕದ ನವಜಾತ ಶಿಶುವಿನ ಜೀವವನ್ನು ಯಶಸ್ವಿಯಾಗಿ ಉಳಿಸಿ ಗಮನ ಸೆಳೆದಿದ್ದಾರೆ.
ಕೋಲಾರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಂಶೋದಯ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರ ತಂಡ 77 ದಿನಗಳ ಕಾಲ ದಿನದ 24 ಗಂಟೆ ಆರೈಕೆ ಮಾಡಿ ಪಾಲಕರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ನವಜಾತ ಶಿಶುಗಳ ತಜ್ಞ ವೈದ್ಯ ಡಾ.ಮನೋಜ್ ಕುಮಾರ್ ತಿಳಿಸಿದ್ದಾರೆ.
ಮಗು ಜನಿಸಿದಾಗ ಕೇವಲ 650 ಗ್ರಾಂ ಇದ್ದು ಶಿಶುವನ್ನು ತಕ್ಷಣ ವಂಶೋದಯ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಘಾ ಘಟಕ (NICU)ನಲ್ಲಿ ಆರೈಕೆ ಆರಂಭ ಮಾಡಲಾಯಿತು.
ಬಳಿಕ ಮಗುವನ್ನು ಸುಮಾರು 50 ದಿನಗಳ ಕಾಲ ಕೃತಕ ಉಸಿರಾಟದ ಯಂತ್ರದಲ್ಲಿ ಆರೈಕೆ ಮಾಡಲಾಯಿತು ನಂತರ ಆಮ್ಲಜನಕದ ಸಹಾಯದೊಂದಿದೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಿ ನಂತರ ಆಮ್ಮಜನಕವನ್ನು ತೆಗೆದು ಸಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಯಿತು.
ವಿಶೇಷ ಆರೈಕೆಯ ಜೊತೆಗೆ ಉತ್ತಮ ಚಿಕಿತ್ಸೆ ನೀಡಿದ ಪರಿಣಾಮ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದೊಂದು ಅಭೂತಪೂರ್ವ ಸಾಧನೆಯಾಗಿದೆ ಎಂದರು.
ಸಾಮಾನ್ಯವಾಗಿ ಈ ರೀತಿಯ ಶಿಶುಗಳು ಮಗು ಬದುಕುವುದೇ ಕಷ್ಟ. ವೈದ್ಯರು, ನರ್ಸಿಂಗ್ ಸ್ಟಾಪ್ ಹಾಗೂ ಸಿಬ್ಬಂದಿ ಪೋಷಕರು ಹಾರೈಕೆಯಿಂದ ಡಿಸ್ಟಾರ್ಜ್ ಮಾಡುವ ವೇಳೆಗೆ ಮಗು 1.66 ಕೆ.ಜಿ. ತೂಕ ಹೊಂದಿದೆ.
ಅವಧಿ ಪೂರ್ಣವಾಗುವ ಮುನ್ನವೇ ಜನಿಸಿದ ಶಿಶುಗಳಲ್ಲಿ ಕಡಿಮೆ ತೂಕ, ಉಸಿರಾಟದ ತೊಂದರೆ, ಹಾಲಿನ ಅಜೀರ್ಣತೆ, ನಂಜು, ಮೆದುಳಿನಲ್ಲಿ ರಕ್ತಸ್ರಾವ, ಹೃದಯ ತೊಂದರೆ ಇರುತ್ತವೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಮಗುವನ್ನು ಆರೈಕೆ ಮಾಡಲಾಗಿದೆ ಎಂದರು.
ಒಟ್ಟಾರೆ ವಂಶೋದಯ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮನೋಜ್, ಡಾ.ಚೇತನ್, ಡಾ.ಕುಮಾರಸ್ವಾಮಿ ಹಾಗು ನರ್ಸಿಂಗ್ ಸಿಬ್ಬಂದಿಯ ಸತತ ಪರಿಶ್ರಮದಿಂದ ಪುಟ್ಟ ಕಂದಮ್ಮನಿಗೆ ಪುನರ್ಜನ್ಮ ನೀಡಿದ ಹೆಗ್ಗಳಿಕೆಗೆ ವಂಶೋದಯ ಆಸ್ಪತ್ರೆ ಭಾಜನವಾಗಿದೆ.
ಈ ವಿಶೇಷ ಉತ್ತಮ ಚಿಕಿತ್ಸೆಗೆ ಮಗುವಿನ ಪೋಷಕರು ನವಜಾತ ಶಿಶುವಿನ ತಜ್ಞ ವೈದ್ಯರು,ಆಸ್ಪತ್ರೆಯ ಆಡಳಿತ ಮಂಡಳಿ,ಸಿಬ್ಬಂದಿಗೆ ಅಭಿನಂದಿಸಿದ್ದಾರೆ.