ಪಬ್ಲಿಕ್ ಅಲರ್ಟ್
ಮೈಸೂರು: ಶೋಷಣೆ, ಅಸಮಾನತೆ, ದೌರ್ಜನ್ಯ, ದಬ್ಬಾಳಿಕೆಗಳಿಂದ ಮುಕ್ತಿಗೆ ಬುದ್ಧನೆಡೆಗೆ ಸಾಗುವುದೇ ಪರಿಹಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರ ನೂರಾರು ಕಾರ್ಯಕ್ರಮ ರೂಪಿಸಬಹುದು. ನೋವು, ಶೋಷಣೆ ಯಾವಾಗ ಸರಿ ಮಾಡುತ್ತಿರಿ. ಕೋಟ್ಯಂತರ ಜನರ ಕಣ್ಣೀರು ಒರೆಸಲು ಈ ತನಕ ಯಾಕೇ ಸಾಧ್ಯವಾಗಿಲ್ಲ? ದಲಿತ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಈ ಪ್ರಶ್ನೆಗಳನ್ನು ಕೇಳಿದರೆ ವಿರೋಧಿಗಳನ್ನಾಗಿ ನೋಡುತ್ತಾರೆ ಎಂದರು.
೧೯ ವರ್ಷಗಳ ಬಳಿಕ ಮೈಸೂರು ನಗರದಲ್ಲಿ ಆಯೋಜನೆಗೊಂಡಿರುವ ಬೌದ್ಧ ಮಹಾಸಮ್ಮೇಳನ ಇಡೀ ದೇಶಕ್ಕೆ ಸಂದೇಶ ಕೊಟ್ಟಿದೆ. ಬುದ್ಧ ಮತ್ತೊಂದು ಬಾರಿ ಎದ್ದು ನಿಲ್ಲುತ್ತಿದ್ದಾನೆ ಎಂದು ಹೇಳಿದರು.
ಬುದ್ಧ ಸಂಘರ್ಷಕ್ಕೆ ಅಲ್ಲ. ಶಾಂತಿಗೆಬೇಕು. ಬುದ್ಧನ ಸಿದ್ಧಾಂತ ಪಾಲಿಸಿದರೆ ಪ್ರೀತಿ, ಗೌರವ, ಸಮಾನತೆ ಸಿಗುತ್ತದೆ. ನೊಂದವರು, ಶೋಷಿತರಿಗೆ ಬುದ್ಧ ಬೇಕು. ಶ್ರೀಮಂತರಿಗೆ ಬುದ್ಧ ಬೇಕಾಗಿಲ್ಲ ಎಂದರು.


ಕೋಟ್
ಆಯುಧಗಳ ಕೈಗೆ ದೇಶವಾದರೆ ನಾಶವಾಗುತ್ತದೆ. ಮಕ್ಕಳ ಕೈಗೆ ದೊಣ್ಣೆ ಕೊಡಬಾರದು. ಲೇಖನ ಕೊಡಬೇಕು. ರಕ್ತ ಬಯಸೋದು ಧರ್ಮ ಅಲ್ಲ.
-ಜ್ಞಾನ ಪ್ರಕಾಶ ಸ್ವಾಮೀಜಿ
ಕೋಟ್
ಖಡ್ಗದಿಂದ ಚರಿತ್ರೆ ನಿರ್ಮಾಣ ಸಾಧ್ಯವಿಲ್ಲ. ಲೇಖನದಿಂದ ಚರಿತ್ರೆ ನಿರ್ಮಿಸಬಹುದು. ದೇವಸ್ಥಾನಕ್ಕೂ ಹೋಗುವ, ಬೌದ್ಧ ಸಮ್ಮೇಳನದಲ್ಲಿ ಧಮ್ಮದ ವಿಚಾರಧಾರೆಯನ್ನು ತಿಳಿಯುವ ಎಡಬಿಡಂಗಿ ತೀರ್ಮಾನ ಬಿಡಬೇಕು. ಯಾವುದಾದರೂ ಒಂದಕ್ಕೆ ತೀರ್ಮಾನ ಮಾಡಿದರೆ ಬದಲಾವಣೆ ಸಾಧ್ಯವಾಗುತ್ತದೆ. ಬಾಬಾ ಸಾಹೇಬರು ಕೊಟ್ಟ ರಾಜಕೀಯ, ಸಾಂಸ್ಕೃತಿಕ ಸಂವಿಧಾನ ಬಳಸಿಕೊಂಡು ಮುಂದಕ್ಕೆ ಬರಬೇಕು.
-ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ
ಪಂಚ ನಿರ್ಣಯ ಮಂಡನೆ
ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿ ೫೦೦ ಕೋಟಿ ರೂ. ಅನುದಾನ ಕೊಡಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಕುವೆಂಪು ನಾಡಗೀತೆಯಲ್ಲಿ ಬೌದ್ಧರುಧ್ಯಾನ ಪದ ಸೇರಿಸಬೇಕು. ಬುದ್ಧ ವಿಹಾರ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರದಲ್ಲಿ ೨ ಎಕರೆ, ತಾಲೂಕು ಕೇಂದ್ರಗಳಲ್ಲಿ ೧ ಎಕರೆ, ಬುದ್ಧಗಯಾ, ಲುಂಬಿನಿ ಯಾತ್ರಗೆ ಅನುದಾನ ಕೊಡಬೇಕು. ಅಂಬೇಡ್ಕರ್ ಭವನಗಳನ್ನು ಕೌಶಾಲಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಪಂಚ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡಿಸಿದರು.
