ಪಬ್ಲಿಕ್ ಅಲರ್ಟ್
ಮೈಸೂರು:
ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವತಿಯಿಂದ ಸೆ. ೩ ರಿಂದ ೧೪ ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಗರ ಶಾಖೆ ಅಧ್ಯಕ್ಷ ಮುಹಮ್ಮದ್ ಅಸ್ಲಮ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಪೈಗಂಬರ್ ಮುಹಮ್ಮದ್ ಅವರು ನ್ಯಾಯದ ಹರಿಕಾರರಾಗಿದ್ದಾರೆ. ಅವರ ಸಾರ್ವಕಾಲಿಕ ಬೋಧಣೆಗಳನ್ನು ಜನತೆಗೆ ತಿಳಿಯಪಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಸೆ.೧೩ ರಂದು ನಗರದ ಸಿದ್ದಿಕ್ ನಗರದ ಮಿನಲ್ ಫಂಕ್ಷನ್ ಹಾಲ್‌ನಲ್ಲಿ ಸಂಜೆ ೭ಕ್ಕೆ ಸೀರತ್ ಸಮಾವೇಶ ನಡೆಯಲಿದೆ. ವಿವಿಧ ಮಠಾಧೀಶರು, ಧಾರ್ಮಿಕ ಗುರುಗಳು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆಂದರು.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಸಂಘಟನೆಯ ಇನ್ನಿತರ ಪದಾಧಿಕಾರಿಗಳಾದ ಅಬ್ದುಸ್ಸಲಾಮ್, ಕಲೀಮ್ ಅಹ್ಮದ್, ಮುಹಮ್ಮದ್ ಅಸ್ಲಂ, ಖಲೀಲರ‍್ರಹ್ಮಾನ್ ವಸೀಮ್, ನೂರ್ ಮುಹಮ್ಮದ್ ಮರ್ಚೆಂಟ್, ಮುಹಮ್ಮದ್ ಉಮರ್ ಫಾಝಿಲ್, ಶೇಖ ಅಸದುಲ್ಲಾ ಹಾಗೂ ಇನ್ನಿತರರು ಇದ್ದರು.