ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ಕೆನೈನ್ ಕ್ಲಬ್ ವತಿಯಿಂದ ಅ.೨೬ರ ಬೆಳಗ್ಗೆ ೯ ರಿಂದ ರಾತ್ರಿ ೮ ರವರೆಗೆ ನಗರದ ಹಳೇ ಡಿಸಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ರಾಷ್ಟç ಮಟ್ಟದ ಶ್ವಾನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಕಳೆದ ಬಾರಿಯ ಸ್ಪರ್ಧೆಯಲ್ಲಿ ೪೩೬ ಶ್ವಾನಗಳು ಬಂದಿದ್ದವು. ಈ ಬಾರಿ ೫೦೦ ಕ್ಕೂ ಹೆಚ್ಚು ಶ್ವಾನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ೩ ಕೆಜಿ ಇರುವ ಮಿನಿಯೇಚರ್ ಪಿಂಷರ್ ಮತ್ತು ೧೦೦ ಕೆಜಿಗೂ ಹೆಚ್ಚು ತೂಕವಿರುವ ಸೇಂಟ್ ಬರ್ನಾಡ್, ಗ್ರೇಟ್ ಡೇನ್, ಇಂಗ್ಲಿಷ್ ಮ್ಯಾಸ್ತಿಫ್, ಬುಲ್‌ಡಾಗ್, ಸೈನಿರಿಯನ್ ಅಸ್ಕಿ, ಗೋಲ್ಡನ್ ರಿಟ್ರೀವರ್, ಲ್ಬಾಬ್ರಡಾರ್ ರಿಟ್ರಿವರ್, ಜರ್ಮನ್ ಶಫರ್ಡ್, ಪಗ್, ಚೌಚೌ, ಬಾಕ್ಸರ್‌ಗಳಲ್ಲದೆ, ದೇಶೀಯ ತಳಿಗಳಾದ ಮುಧೋಳ್, ಕೋಂಬಾಯ್, ಕ್ಯಾರವಾನ್ ಹೌಂಡ್, ರಾಜಪಾಳ್ಯಂ, ವಿದೇಶದಿಂದ ಫ್ರಾನ್ಸ್ನ ಬಿಚೋನ್ ಫ್ರಿಸ್, ಅಮೆರಿಕದಿಂದ ಜೆರ್ಬಿರಿಯನ್ ಶೆಪ್ಸಿ÷್ಕ ಮತ್ತು ಬ್ರಿಟನ್ ಬಾರ್ಡರ್ ಕಾಲಿ ಮೊದಲಾದ ಶ್ವಾನಗಳು ಗಮನ ಸೆಳೆಯಲಿವೆ. ಪ್ರವೇಶ ದರ ೫೦ ರೂ.,ಗಳಾಗಿವೆ ಎಂದು ಮಾಹಿತಿ ನೀಡಿದರು. ಡಾ.ಸಿ.ಎಸ್. ಅರುಣ್, ಹರ್ಷ, ವಿ. ಮನೋಹರ್, ಎಂ.ಎಚ್. ಅಭಿಷೇಕ್, ಚರಣ್, ಚಿರಾಗ್, ಗಿರೀಶ್ ಹಾಜರಿದ್ದರು.
