ಶಿವಾರ್ಚಕ ಎಂದೆ ಸಮೀಕ್ಷೆಯಲ್ಲಿ ನಮೂದಿಗೆ ಮನವಿ

Pratheek
0 Min Read

ಪಬ್ಲಿಕ್ ಅಲರ್ಟ್


ಮೈಸೂರು :ರಾಜ್ಯ ಸರ್ಕಾರ ನಡೆಸುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಶಿವಾರ್ಚಕ ಸಮುದಾಯದವರು ಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ ಎ- ೧೩೨೦ ಶಿವಾರ್ಚಕ ಎಂದೇ ಬರೆಸಬೇಕು ಎಂದು ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಎಂ. ಮಲ್ಲಣ್ಣ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಮುದಾಯದವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಧರ್ಮ ಕಲಂನಲ್ಲಿ ಹಿಂದೂ ಹಾಗೂ ಉಪಜಾತಿ ಕಲಂನಲ್ಲಿ ಯಾವುದು ಇಲ್ಲ ಎಂದು ಬರೆಸಬೇಕು. ಇದರಿಂದ ನಿಖರ ಜನಸಂಖ್ಯೆ ದೊರೆತು ಸರ್ಕಾರಿ ಸೌಲಭ್ಯ ಹೊಂದಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಟಿ.ಎನ್.ನಾಗೇಂದ್ರ, ಪಟೇಲ್ ಸೋಮಯ್ಯ, ಜಿ.ಬಿ.ಮಧು, ನಂಜುಂಡಪ್ಪ, ಪಿ.ಮಹದೇವು, ಯಶವಂತ್ ಇದ್ದರು.

Share This Article
Leave a Comment