ಪಬ್ಲಿಕ್ ಅಲರ್ಟ್
ಮೈಸೂರು: ಮಡಿವಾಳ ಸಮುದಾಯಕ್ಕೆ ರಾಜ್ಯದ ನಾನಾ ಭಾಗಗಳಲ್ಲಿ ವಿವಿಧ ಹೆಸರುಗಳಿವೆ. ಆದರೆ ಒಟ್ಟಾರೆ ಜನಸಂಖ್ಯೆ ನಿಖರವಾಗಿ ತಿಳಿದುಬಂದಲ್ಲಿ ವಿವಿಧ ಸವಲತ್ತು ಪಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಸಮುದಾಯದವರು ರಾಜ್ಯ ಸಕಾರದ ಜನಗಣತಿ ವೇಳೆ ಜಾತಿ ಕಾಲಂನಲ್ಲಿ ಮಡಿವಾಳ ಎಂದೇ ಬರೆಯಿಸಬೇಕೆಂದು ಜಿಲ್ಲಾ ಮಡಿವಾಳರ ಮಹಾ ಸಂಘದ ಅಧ್ಯಕ್ಷ ಚನ್ನಕೇಶವ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಸಮುದಾಯ ಇದುವರೆಗೆ ಬೇರೆ ಬೇರೆ ಉಪ ಜಾತಿಗಳ ಹೆಸರಿನಲ್ಲಿ ನೋಂದಾಯಿಸಿಕೊಳ್ಳುವುದು ನಡೆದಿದೆ. ಇದರಿಂದಾಗಿ ರಾಜ್ಯದಲ್ಲಿ ಈ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂಬ ನಂಬಿಕೆ ಬಂದು ವಿವಿಧ ಸವಲತ್ತು ಸರ್ಕಾರದಿಂದ ದೊರಕುತ್ತಿಲ್ಲ. ಆದ್ದರಿಂದ ಸಮೀಕ್ಷೆ ವೇಳೆ ಕೇವಲ ಮಡಿವಾಳ ಎಂದೇ ನಮೂದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ೩ ದಶಕಗಳಿಂದ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಹೋರಾಟಗಳು ನಡೆದಿವೆ. ಆದರೆ ಇದುವರೆಗೆ ಯಾವುದೇ ಸರ್ಕಾರ ಗಮನ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಕಳೆದ ೨ ದಶಕಗಳಿಂದ ಸಮುದಾಯ ಬೆಂಬಲಿಸುತ್ತಲೇ ಬಂದಿದೆ. ಹಿಗಾಗಿ ಈಗಲಾದರೂ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೆರಿಸಲು ಕ್ರಮಮ ಕೈಗೊಳ್ಳಬೇಕೆಂದು ಕೋರಿದರು. ಇನ್ನಿತರ ಮುಖಂಡರಾದ ಮಾದುರಾಜು, ಶಿವಣ್ಣ, ರವಿಚಂದ್ರ, ದುದ್ದಗೆರೆ ಜಯರಾಮು, ಕುಕ್ಕರಹಳ್ಳಿ ಮಡಿಕಟ್ಟೆ ಶಂಕರ್, ಸಿದ್ದರಾಜು, ಪ್ರಶಾಂತ್, ಶಂಕರ್, ರಂಗಸ್ವಾಮಿ ಇದ್ದರು.
