ಪಬ್ಲಿಕ್ ಅಲರ್ಟ್
ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಗಣತಿಗೆ ಅನಾರೋಗ್ಯ ಪೀಡಿತ ಅಮಾಯಕ ಶಿಕ್ಷಕರನ್ನು ನಿಯೋಜಿಸಿ ಶಿಕ್ಷೆ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು.
ಸರ್ಕಾರ ಮನೆಗಳ ಜನಗಣತಿಯ ಪಟ್ಟಿಗಳನ್ನು ಶಿಕ್ಷಕರಿಗೆ ಸರಿಯಾಗಿ ನೀಡದೆ ಆ ಮನೆಗಳ ಲೋಕೇಶನ್ ಅನ್ನು ತಲುಪುವುದು ಶಿಕ್ಷಕರಿಗೆ ಕಷ್ಟಕರವಾಗಿದೆ. ಮನೆ ಮುಂದೆ ಹಿಂದುಳಿದ ವರ್ಗಗಳ ಆಯೋಗದಿಂದ ಅಂಟಿಸಿರುವ ಯು ಎಚ್ ಐ ಡಿ ಸ್ಟಿಕ್ಕರ್ ಐಡಿ ನಂಬರ್, ಹಳ್ಳಿಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ ತೋರಿಸುತ್ತಿರುವುದು ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಮುಂದಿನ ವರ್ಷದಲ್ಲಿ ಜನಗಣತಿ ಜೊತೆಗೆ ಜಾತಿಗಣತಿಯನ್ನು ನಡೆಸಲು ತೀರ್ಮಾನಿಸಿರುವುದು, ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೂ, ತಮ್ಮ ಸ್ವಪ್ರತಿಷ್ಠೆ ಹಾಗೂ ನಮ್ಮ ಹಿಂದೂ ಜಾತಿಗಳ ಹೊಡೆದು ಉಪಜಾತಿಗಳನ್ನು ಮಾಡಿ ಹೊಡೆಯಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ.
ರಾಜ್ಯ ಸರ್ಕಾರ ಈ ಕೂಡಲೇ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಆನ್ಲೈನ್ ಆಪ್ ಬದಲು, ಬುಕ್ಲೆಟ್ ಅಥವಾ ಮ್ಯಾನ್ಯುಯಲ್ ಅಪ್ಲಿಕೇಶನ್ ನಲ್ಲಿ ಗಣತಿ ಮಾಡಲಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯಕೀಯ ಸರ್ಟಿಫಿಕೇಟ್ ನೀಡಿದವರಿಗೆ ಈ ಜಾತಿಗಣತಿಯಿಂದ ರಿಯಾಯಿತಿಯನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ.
ಈ ಪ್ರತಿಭಟನೆಯ ನೇತೃತ್ವವನ್ನು ತೇಜೇಶ್ ಲೋಕೇಶ್ ಗೌಡ ವಹಿಸಿ, ಗೋಲ್ಡನ್ ಸುರೇಶ್, ಪ್ರಜೀಶ್, ಪ್ರಭುಶಂಕರ, ಕೃಷ್ಣಪ್ಪ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ ನೇಹಾ, ಭಾಗ್ಯಮ್ಮ, ಕೃಷ್ಣೆಗೌಡ, ಹೊನ್ನೇಗೌಡ, ಹನುಮಂತಯ್ಯ, ತಾಯೂರು ಗಣೇಶ್, ಎಳನೀರು ರಾಮಣ್ಣ, ಬಸವರಾಜು, ಕುಮಾರ್ ಗೌಡ, ಸುನೀಲ್ ಅಗರವಾಲ್, ಆನಂದ್ ಗೌಡ, ಡಾ. ಶಾಂತರಾಜೇ ಅರಸ್, ರಾಧಾಕೃಷ್ಣ, ರಾಜುಗೌಡ, ರಘು ಅರಸ್, ಮೂರ್ತಿ ಲಿಂಗಯ್ಯ, ಗಣೇಶ್ ಪ್ರಸಾದ್, ದರ್ಶನ್ ಗೌಡ, ರವಿ ನಾಯಕ್, ರವೀಶ್, ಮಹಾದೇವಸ್ವಾಮಿ, ಚಂದ್ರಶೇಖರ್ ಸೇರಿ ಇನ್ನೂ ಇತರರು ಉಪಸ್ಥಿತರಿದ್ದರು.
